ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬೆಟ್ಟಿಂಗ್ ಆ್ಯಪ್‌ಗಳೂ (Betting apps) ಚುರುಕಾಗಿವೆ. ಮತದಾರರ ಕುತೂಹಲವನ್ನೇ ಬಂಡವಾಳವಾಗಿಸಿಕೊಂಡು ಕಾಸು ಮಾಡಿಕೊಳ್ಳುವ ನಾನಾ ಬಗೆಯ ಬೆಟ್ಟಿಂಗ್ ಆ್ಯಪ್‌ಗಳು ಕಾರ್ಯಾಚರಿಸುತ್ತಿವೆ.
ʼಫೇರ್ ಪ್ಲೇʼ ಎಂಬ ಬೆಟ್ಟಿಂಗ್ ಆ್ಯಪ್ ಚುನಾವಣೆಗೆ ಸಂಬಂಧಿಸಿದ ಬೆಟ್ಟಿಂಗ್ ಹೊರಬಿಟ್ಟಿದೆ. ಒಟ್ಟು ಐದು ಅಂಶಗಳಿಗೆ ಸಂಬಂಧಿಸಿದಂತೆ ಬೆಟ್ಟಿಂಗ್ ಅವಕಾಶವಿದೆ. ಬಿಜೆಪಿ ಒಟ್ಟು ಎಷ್ಟು ಸೀಟ್ ಗೆಲ್ಲುತ್ತದೆ? ಬಿಜೆಪಿ ಒಟ್ಟು 75 ಸೀಟ್‌ಗಳನ್ನು ಗೆಲ್ಲುತ್ತಾ? ಕಾಂಗ್ರೆಸ್ ಒಟ್ಟು ಎಷ್ಟು ಸೀಟ್‌ಗಳನ್ನು ಗೆಲ್ಲುತ್ತೆ? ಕಾಂಗ್ರೆಸ್ ಒಟ್ಟು ನೂರು ಸೀಟ್‌ಗಳನ್ನು ಗೆಲ್ಲುತ್ತಾ? ಜೆಡಿಎಸ್ ಒಟ್ಟು ಎಷ್ಟು ಸೀಟ್‌ಗಳನ್ನು ಗೆಲ್ಲುತ್ತೆ? ಹೀಗೆ ಐದು ವಿಭಾಗಗಳಲ್ಲಿ ಬೆಟ್ಟಿಂಗ್‌ಗೆ ಆಹ್ವಾನ ನೀಡಲಾಗಿದೆ.
ಸದ್ಯದ ಚುನಾವಣೆ ಕಣದಲ್ಲಿ ಯಾವುದೇ ನಿರ್ದಿಷ್ಟ ಪಕ್ಷದ ಅಲೆ ಇಲ್ಲದ ಪರಿಣಾಮ ಮತದಾರರ ಊಹೆಯೂ ನಾನಾ ವಿಧವಾಗಿದೆ. ಇದೇ ಬೆಟ್ಟಿಂಗ್ ಆ್ಯಪ್‌ಗಳು ಚಿಗುರಿಕೊಳ್ಳಲು ಹಾಗೂ ಭರದಿಂದ ವ್ಯವಹಾರ ನಡೆಸಲೂ ಕಾರಣವಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದಷ್ಟೂ ಕಾಲ ಬೆಟ್ಟಿಂಗ್ ಆ್ಯಪ್‌ಗಳಿಗೆ ಅನುಕೂಲವೇ ಆಗಿದೆ. ಮೇ 13ನೇ ತಾರೀಕು ಇವುಗಳ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Karnataka Election 2023: ಹಾಸನ, ಚಾಮರಾಜನಗರದಲ್ಲಿ ಇಂದು ರಾಹುಲ್ ಗಾಂಧಿ ಓಡಾಟ