Site icon Vistara News

Karnataka Election 2023: ಗೆಲ್ಲಿಸುವಂತೆ ವೇದಿಕೆಯಲ್ಲೇ ಕಣ್ಣೀರು ಹಾಕಿದ ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್!

Karnataka Election 2023: BJP candidate Vijugouda Patil cried for to win election

ವಿಜಯಪುರ, ಕರ್ನಾಟಕ: ಒಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಬಿಜೆಪಿ (BJP) ಅಭ್ಯರ್ಥಿಯೊಬ್ಬರು ಕಣ್ಣೀರಿಟ್ಟ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಕನಮಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಬಿಜೆಪಿಯ ಅಭ್ಯರ್ಥಿ ವಿಜುಗೌಡ ಪಾಟೀಲ್ (Vijugouda Patil) ಅವರು ಗ್ರಾಮದ ಪ್ರಚಾರ ಸಭೆಯಲ್ಲಿ ಕಣ್ಣೀರಿಡುತ್ತಾ, ”ಒಂದೇ ಒಂದು ಬಾರಿ ತಮ್ಮ ಸೇವೆ ಮಾಡಲು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡುವಂತೆ” ಮತದಾರರನ್ನು ಕೇಳಿಕೊಂಡಿದ್ದಾರೆ. ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ವಿರುದ್ಧ ವಿಜುಗೌಡ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ(Karnataka Election 2023).

ಬಬಲೇಶ್ವರ ಮತಕ್ಷೇತ್ರದ ಕನಮಡಿ ಗ್ರಾಮದಲ್ಲಿ ವಿಜುಗೌಡ ಪರವಾಗಿ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಆಯೋಜಿಸಲಾಗಿದ್ದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರು ವೇದಿಕೆಯ ಮೇಲೆ ಕಣ್ಣೀರಿಟ್ಟರು.

ಬಿಜೆಪಿ ಅಭ್ಯರ್ಥಿ ವಿಜುಗೌಡ ಅವರು ವೇದಿಕೆಯಲ್ಲಿ ಕಣ್ಣೀರು ಹಾಕಿದರು

ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಯಾವುದಕ್ಕೂ ಆಸೆ ಪಟ್ಟಿಲ್ಲ. ನಿಮ್ಮ ಋಣವನ್ನು ನಾವು ಮುಟ್ಟಿಸಬೇಕಿದೆ, ತೀರಿಸಬೇಕಿದೆ. ಐದು ವರ್ಷ ನೀವು ನನಗೆ ಅವಕಾಶ ಮಾಡಿ ಕೊಟ್ಟರೆ, ನಾನು ನಿಮ್ಮ ಜೀತದಾಳಾಗಿ ಕೆಲಸ ಮಾಡುತ್ತೇನೆ ಎಂದು ವಿಜುಗೌಡ ಅವರು ಹೇಳಿದರು.

ಇದನ್ನೂ ಓದಿ: Karnataka Election : ಸವದಿಗೆ ಬಿಜೆಪಿಯಲ್ಲಿದ್ದಾಗ 40% ಗೊತ್ತಿರಲಿಲ್ವಾ?; ಬೊಮ್ಮಾಯಿ ತಿರುಗೇಟು

ಇದು ನಿಮ್ಮ ಕೈಯಲ್ಲ, ನಿಮ್ಮ ಪಾದ ಎಂದು ತಿಳಿದು ಒಂದು ಬಾರಿ ಅವಕಾಶ ಮಾಡಿ ಕೊಡಿ ಎಂದು ನರಿದೆದ್ದ ಮತದಾರರಿಗೆ ಕೈ ಮುಗಿದರು. ನಿಮ್ಮ ಮನೆ ಮಗನೆಂದು ತಿಳಿದುಕೊಳ್ಳಿ, ನಿಮ್ಮ ತಮ್ಮ, ನಿಮ್ಮಕುಟುಂಬದ ಸದಸ್ಯ ಎಂದು ತಿಳಿದುಕೊಳ್ಳಿ. ಈ ವೇದಿಕೆ ಮೂಲಕ ಸಾಷ್ಟಾಂಗ್ ನಮಸ್ಕಾರ ಹಾಕುವೆ, ಒಂದು ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟ ವಿಜುಗೌಡ ಪಾಟೀಲ್.

Exit mobile version