Site icon Vistara News

Karnataka Election 2023: ಪಿಸ್ತೂಲ್ ಪ್ರದರ್ಶಿಸಿದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ವೈರಲ್

manikanta rathod

ಕಲಬುರಗಿ: ಪಿಸ್ತೂಲ್ ಪ್ರದರ್ಶಿಸಿದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ವೈರಲ್ ಆಗುತ್ತಿದೆ. ಎದುರಾಳಿ ಪಕ್ಷದವರು ಇದನ್ನು ಪೋಸ್ಟರ್‌ ಮಾಡಿ ವೈರಲ್‌ ಮಾಡುತ್ತಿದ್ದು, ʼಇಂಥ ರೌಡಿ ನಿಮ್ಮ ಶಾಸಕ ಆಗಬೇಕಾ ಯೋಚಿಸಿ!ʼ ಎನ್ನುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಣಿಕಂಠ ರಾಠೋಡ್, ಕುರ್ಚಿ ಮೇಲೆ ಕುಳಿತು ಪಿಸ್ತೂಲ್ ತಿರುಗಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ಬಲಗೈ ತೋರು ಬೆರಳಿನಿಂದ ಪಿಸ್ತೂಲ್ ಅನ್ನು ತಿರುಗಿಸುತ್ತಿರುವ ಮಣಿಕಂಠ ರಾಠೋಡ್ ವಿಡಿಯೋ ಕೆಲ ವರ್ಷಗಳ ಹಿಂದಿನದಾದರೂ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನೇ ಬಳಸಿಕೊಂಡಿರುವ ಎದುರಾಳಿ ಪಕ್ಷದ ಕಾರ್ಯಕರ್ತರು, ʼʼಇಂತಹ ರೌಡಿ ನಿಮ್ಮ ಎಂಎಲ್‌ಎ ಆಗಬೇಕೇ? ಯೋಚಿಸಿ ಮತ ನೀಡಿʼʼ ಎಂದು ಪೋಸ್ಟರ್‌ ಮಾಡಿ ಇದನ್ನು ಇನ್ನಷ್ಟು ವೈರಲ್‌ ಮಾಡುತ್ತಿರುವುದು ಕಂಡುಬಂದಿದೆ. ಮಣಿಕಂಠ ರಾಠೋಡ್ ವಿರುದ್ಧ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ.

ಅರಸೀಕರೆಯಲ್ಲಿ ಹೊಡೆದಾಟ; ಜೆಡಿಎಸ್‌ ಕಾರ್ಯಕರ್ತನಿಗೆ ಬ್ಲೇಡ್‌ನಿಂದ ಹಲ್ಲೆ

ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾರೆ (assault case) ಎಂದು ಗಾಯಾಳು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಜೆಡಿಎಸ್ ಕಾರ್ಯಕರ್ತ ಕಿರಣ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಕಿರಣ್ ಆಸ್ಪತ್ರೆಗೆ ದಾಖಲಾಗಿದ್ದು, ತನ್ನ ಮೇಲೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ.

ರಾತ್ರಿ 9.30ರ ನಂತರವೂ ಯಾಕೆ ಪ್ರಚಾರ ಮಾಡ್ತಿದ್ದೀರಿ ಎಂದು ಕೇಳಿದೆ. ಅಷ್ಟಕ್ಕೇ ನನ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆಗೆ ಬಂದರು. ಆ ಕಾಂಗ್ರೆಸ್ ಗುಂಪಿನಲ್ಲಿ ಶಿವಲಿಂಗೇಗೌಡರ ಮಗ ಕೂಡಾ ಇದ್ದರು. ಆ ಗುಂಪಿನಲ್ಲಿದ್ದ ಕೆಲವರು ನನ್ನ ಮೇಲೆ ಹಲ್ಲೆ ಮಾಡಿ, ಬ್ಲೇಡ್‌ನಿಂದ ಕೊಯ್ದಿದ್ದಾರೆ ಎಂದು ಕಿರಣ್‌ ದೂರಿದ್ದಾರೆ. ಗಂಡಸಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ತುಮಕೂರಿನಲ್ಲಿ ಕಾಂಗ್ರೆಸ್‌ನ ಜಿ.ಪರಮೇಶ್ವರ್‌ ಅವರಿಗೆ ಪ್ರಚಾರದ ಸಂದರ್ಭ ಕಲ್ಲೇಟು ತಗುಲಿತ್ತು. ಇದೀಗ ಬ್ಲೇಡ್‌ನಿಂದ ಕೊಯ್ಯಲಾಗಿದೆ.

ಇದನ್ನೂ ಓದಿ: Karnataka Election: ಸೋನಿಯಾ ಗಾಂಧಿ ವಿಷ ಕನ್ಯೆ ಹೇಳಿಕೆ; ಯತ್ನಾಳ್‌ ವಿರುದ್ಧ ಮೈಸೂರಿನಲ್ಲಿ ದೂರು

Exit mobile version