ಚಿಕ್ಕಮಗಳೂರು, ಕರ್ನಾಟಕ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ವರುಣಾ ಕ್ಷೇತ್ರದಲ್ಲಿನ ಕಾಂಗ್ರೆಸ್- ಕಾರ್ಯಕರ್ತರ ನಡುವಿನ ಗಲಾಟೆ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಮಧ್ಯೆಯೇ ಅಂಥದ್ದೇ ಮತ್ತೊಂದು ಗಲಾಟೆ ಶುಕ್ರವಾರ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್ ಡಿ ತಮ್ಮಯ್ಯ ಅವರು ಪ್ರಚಾರ ನಡೆಸುವ ವೇಳೆ, ಮುಖಾಮುಖಿಯಾದರು. ಈ ವೇಳೆ ಉಭಯಪಕ್ಷಗಳ ಕಾರ್ಯಕರ್ತರ ತಳ್ಳಾಟ ನಡೆಯಿತು(Karnataka Election 2023).
ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಭ್ಯರ್ಥಿ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಚ್ ಡಿ ತಮ್ಮಯ್ಯ ಅವರು ಶುಕ್ರವಾರ ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ, ಇಬ್ಬರು ಮುಖಾಮುಖಿಯಾದರು. ಈ ವೇಳೆ, ಕಾಂಗ್ರೆಸ್ ಅಭ್ಯರ್ಥಿ ಎಚ್ ಡಿ ತಮ್ಮಯ್ಯ ಅವರು ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದರು.
ಇದನ್ನೂ ಓದಿ: Karnataka Election 2023: ಸಿದ್ದರಾಮನಹುಂಡಿಯಲ್ಲಿ ಕಾರ್-ಬೈಕ್ ಡಿಕ್ಕಿ ಜಗಳಕ್ಕೆ ಗಲಭೆ ಬಣ್ಣ ಕಟ್ಟಿದ ಬಿಜೆಪಿ; ಯತೀಂದ್ರ ಆರೋಪ
ಆಗ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ, ನೂಕಾಟ ನಡೆಸಿದರು. ಬಿಜೆಪಿ ಅಭ್ಯರ್ಥಿ ಸಿ. ಟಿ. ರವಿ ಅವರು ಕಾರಿನಲ್ಲೇ ಕುಳಿತಿದ್ದರು. ಆಗ, ಕಾಂಗ್ರೆಸ್ ಕಾರ್ಯಕರ್ತರು ಕಿರಿಕ್ ಮಾಡಿದರು. ಅಭ್ಯರ್ಥಿ ಎಚ್ ಡಿ ತಮ್ಮಯ್ಯ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಆದರೂ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು.