Site icon Vistara News

Karnataka Election 2023: ಪ್ರಚಾರದ ಭರಾಟೆ ಮಧ್ಯೆಯೇ ಕಾಗಿನೆಲೆ, ಪಂಚಮಸಾಲಿ ಮಠಕ್ಕೆ ಅಮಿತ್‌ ಶಾ ಭೇಟಿ; ಕರ್ನಾಟಕ ವಿಧಾನಸಭೆ ಚುನಾವಣೆ ಕಣದ ಕ್ಷಣಕ್ಷಣದ ಸುದ್ದಿಗಳು

Karnataka Election 2023 Live updates Check details In Kannada

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದೆ. ದೇಶದ ಘಟಾನುಘಟಿ ನಾಯಕರು ಆಗಮಿಸಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದಿನ ಕಣದ ಪ್ರತಿಕ್ಷಣದ ಸುದ್ದಿ ಇಲ್ಲಿದೆ. ಇಂದು ರಾಜ್ಯಕ್ಕೆ ಬಿಜೆಪಿ ಕಡೆಯಿಂದ ಅಮಿತ್‌ ಶಾ, ಜೆ.ಪಿ. ನಡ್ಡಾ, ಕಾಂಗ್ರೆಸ್‌ ಕಡೆಯಿಂದ ರಾಹುಲ್‌ ಗಾಂಧಿ ಆಗಮಿಸಿ ವಿವಿಧೆಡೆ ಸಭೆ ನಡೆಸಲಿದ್ದಾರೆ.

Mallikarjun Tippar

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮುಖಾಮುಖಿ

ಶುಕ್ರವಾರ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್ ಡಿ ತಮ್ಮಯ್ಯ ಅವರು ಪ್ರಚಾರದ ವೇಳೆ ಮುಖಾಮುಖಿಯಾದರು. ಈ ವೇಳೆ, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು.

Harish Kera

ಹುಬ್ಬಳ್ಳಿ ಕ್ಷೇತ್ರದಲ್ಲಿ ಇಂದು ಕಿಚ್ಚ ಸುದೀಪ್‌ ಪ್ರಚಾರ

ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ ಇಂದು ಹವಾ ಎಬ್ಬಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಪರ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ದೇವಾಂಗ ಪೇಟೆಯಿಂದ ಬೆಂಗೇರಿಯ ಕಲ್ಮೇಶ್ವರ ದೇವಸ್ಥಾನದವರೆಗೆ ರೋಡ್ ಶೋ ನಡೆಯಲಿದೆ.

Harish Kera

ಕಲಬುರಗಿಯಲ್ಲಿ ರಾಹುಲ್‌ ಗಾಂಧಿ

ಕಲಬುರಗಿ: ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ ಪರ ಇಂದು ರಾಹುಲ್‌ ಗಾಂಧಿ ಆಗಮಿಸಿ ಪ್ರಚಾರ ಮಾಡಲಿದ್ದು, ಜೇವರ್ಗಿ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

Harish Kera

ಧಾರವಾಡ, ದಾವಣಗೆರೆ, ಗದಗದಲ್ಲಿ ಅಮಿತ್‌ ಶಾ ಮತಬೇಟೆ

ಧಾರವಾಡ: ಇಂದು ಧಾರವಾಡ ಹಾಗೂ ದಾವಣಗೆರೆ ಹಾಗೂ ಗದಗ ಜಿಲ್ಲೆಗಳಲ್ಲಿ ಗೃಹ ಮಂತ್ರಿ ಅಮಿತ್‌ ಶಾ ಮತಬೇಟೆ ನಡೆಸಲಿದ್ದಾರೆ. ಧಾರವಾಡದ ಅಣ್ಣಿಗೇರಿ, ದಾವಣಗೆರೆ ಜಿಲ್ಲೆಯ ಹರಿಹರ, ಗದಗದ ಲಕ್ಷ್ಮೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ಬಹಿರಂಗ ಸಭೆಗಳಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರ ಮತ ಕೇಳಲಿದ್ದಾರೆ.

Exit mobile version