Site icon Vistara News

Karnataka Election 2023: ನಾನು ನಿವೃತ್ತಿಯಾಗವುದಿಲ್ಲ, ಸಾಯೋತನಕ ಸಕ್ರಿಯ ಎಂದ ವಿ ಸೋಮಣ್ಣ

V Somanna Talks about Next political move

V Somanna Talks about Next political move

ಬೆಂಗಳೂರು: ನಾನು ರಾಜಕೀಯ ನಿವೃತ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಸಾಯೋತನಕವೂ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ನಿವೃತ್ತಿ ಎಷ್ಟು ರಾಜಕೀಯ ಜನ ತೆಗೆದುಕೊಂಡಿದ್ದಾರೆ ಹೇಳಿ. ನಿವೃತ್ತಿ ಅನ್ನೋದೆಲ್ಲ ನಾಟಕ ಎಂದು ಬಿಜೆಪಿಯ ಹಿರಿಯ ನಾಯಕ ವಿ ಸೋಮಣ್ಣ (V somanna) ಅವರು ಹೇಳಿದ್ದಾರೆ. ಬೆಂಗಳೂರು ಗೋವಿಂದರಾಜನಗರ ಕ್ಷೇತ್ರದ ಶಾಸಕರಾಗಿದ್ದ ಸೋಮಣ್ಣವರು ಮೈಸೂರು ವರುಣಾ ಹಾಗೂ ಚಾಮರಾಜನಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಎರಡೂ ಕಡೆ ಅವರು ಸೋಲು ಅನುಭವಿಸಿದ್ದಾರೆ(Karnataka Election 2023).

ಬೆಂಗಳೂರು ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ವಿ ಸೋಮಣ್ಣ ಅವರು, ಕಾಂಗ್ರೆಸ್ ಗೆಲುವಿಗೆ ಅವರು ಘೋಷಿಸಿದ ಗ್ಯಾರಂಟಿ ಸ್ಕೀಮ್‌ಗಳೇ ಕಾರಣ ಎಂದರು. ಅಲ್ಲದೇ, ದೇಶಕ್ಕೆ ಮೋದಿ ಅವರು ಪ್ರಶ್ನಾತೀತ ನಾಯಕರು. ಅವರು ಮಾಡುತ್ತಿರುವ ಕೆಲಸಗಳು ಅವಿಸ್ಮರಣೀಯ. ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ. ವರಿಷ್ಠರು ಕರೆ ಮಾಡಿ ಮಾತನಾಡಿದ್ದಾರೆಂದು ಸೋಮಣ್ಣ ಅವರು ಹೇಳಿದರು.

ಈಗ ಸೋತಾಗಿದೆ. ಹೈ ಕಮಾಂಡ್ ಹೇಳ್ತು ಹೋದ್ವಿ. ಚಾಲೆಂಜ್ ಆಗಿ ತೆಗೆದುಕೊಂಡ ಹೋದೆ. ಪ್ರತಿಯೊಂದಕ್ಕೂ ಕಾಲ ಬರುತ್ತೆ. ಪಾರ್ಟಿ ಕೊಟ್ಟ ಕೆಲಸ ಮಾಡಿದ್ದೀನಿ. ನಾನು ಸಾಕಷ್ಟು ಬಾರಿ ಶಾಸಕನಾಗಿದ್ದೇನೆ. ಈಗಿನ ಸೋಲು ಖಂಡಿತವಾಗಿಯೂ ಪಕ್ಷಕ್ಕೆ ಎಚ್ಚರಿಕೆ ಗಂಟೆಯಾಗಿದೆ. ತಪ್ಪುಗಳನ್ನು ತಿದ್ದುಕೊಳ್ಳಬೇಕು. ಕಾಂಗ್ರೆಸ್ ಕೂಡ ಈ ಹಿಂದೆ ಸೋಲು ಅನುಭವಿಸಿತ್ತು ಎಂದು ವಿ ಸೋಮಣ್ಣ ಅವರು ಹೇಳಿದ್ದಾರೆ.

ಎಲ್ಲದಕ್ಕೂ ಕಾಲ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತು ಅಂತ ಹೋಗಿ ಬೇರೆ ಕಡೆ ಸ್ಪರ್ಧೆ ಮಾಡಿದೆ. ಆದರೆ, ಜನರು ಬೇರೆ ತೀರ್ಮಾನ ಕೈಗೊಂಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು. ಹಾಗಾಗಿ ಪಕ್ಷದ ಮಾತು ಕೇಳಿದೆ. ಲಿಂಗಾಯತ-ವೀಶೈವ ಮತ ಯಾಕೆ ವಿಭಜನೆಯಾಯ್ತು ಎಂದು ನೀವು ಬಿ ಎಸ್ ಯಡಿಯೂರಪ್ಪ ಅವರನ್ನು ಕೇಳಬೇಕು ಎಂದು ವಿ ಸೋಮಣ್ಣ ಹೇಳಿದರು.

ಇದನ್ನೂ ಓದಿ: Belgaum Uttar Election Results: ಬೆಳಗಾವಿ ಉತ್ತರದಲ್ಲಿ ತತ್ತರಿಸಿದ ಬಿಜೆಪಿ, ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ

Exit mobile version