Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕ್ಷಣಕ್ಷಣದ ಸುದ್ದಿಗಳು: ಕಾಂಗ್ರೆಸ್‌ಗೆ ಸವಾಲು, ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

election live

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಈಗ ಸ್ಟಾರ್‌ ಪ್ರಚಾರಕರ ಬೀಡಾಗಿದೆ. ನಿನ್ನೆ ತಾನೆ ಮೂಲ್ಕಿಯಲ್ಲಿ ಬಹಿರಂಗ ಸಮಾವೇಶ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನಾಳೆ ಮತ್ತೆ ಆಗಮಿಸಲಿದ್ದಾರೆ. ಪ್ರಿಯಾಂಕ ಗಾಂಧಿ, ಯೋಗಿ, ಅಮಿತ್‌ ಶಾ ಅವರ ಕಾರ್ಯಕ್ರಮಗಳು ನಾನಾ ಕಡೆ ಇಂದು ಹಾಗೂ ನಾಳೆ ನಡೆಯುತ್ತಿವೆ.

Mallikarjun Tippar

ಸುದೀಪ್ ಫ್ಯಾನ್ ಮೇಲೆ ಲಾಠಿ ಚಾರ್ಜ್

ದೇವದುರ್ಗ ಪಟ್ಟಣಕ್ಕೆ ಕಿಚ್ಚ ಸುದೀಪ್ ಆಗಮನ. ಕಿಚ್ಚ ಸುದೀಪ್ ಪ್ಯಾನ್ಸ್ ಗಳ ಮೇಲೆ ‌ಲಾಠಿ ಚಾರ್ಜ್. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಲಾಠಿ ಪ್ರಹಾರ ನಡೆಸಿದ ಪೊಲೀಸರು. ಮನಬಂದಂತೆ ಲಾಠಿ ಚಾರ್ಜ್ ಮಾಡಿದ ಪೊಲೀಸರು. ದೇವದುರ್ಗ ಹೆಲಿಪ್ಯಾಡ್ ನಲ್ಲಿ ಸಂಭವಿಸಿದ ಘಟನೆ. ಬಿಜೆಪಿ ಅಭ್ಯರ್ಥಿ ಕೆ ಶಿವನಗೌಡ ನಾಯಕ್ ಪರ ಪ್ರಚಾರ ಮಾಡಲು ಕಿಚ್ಚ ಸುದೀಪ್ ಅವರು ಆಗಮಿಸಿದ್ದಾರೆ.

Mallikarjun Tippar

ಬಜರಂಗದಳ ನಿಷೇಧ ಇಲ್ಲ ಎಂದ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಬಜರಂಗದಳ ಮತ್ತು ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧ ಮಾಡುವ ಭರವಸೆಯನ್ನು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈ ವಿಷಯ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ (Veerapp Moily) ಅವರು, ಬಜರಂಗದಳ ನಿಷೇಧ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. ಬಜರಂಗದಳ ವಿಶ್ವ ಹಿಂದೂ ಪರಿಷತ್‌ನ ಯುವ ಘಟಕವಾಗಿದೆ(Karnataka Election 2023). ಮಾಜಿ ಮುಖ್ಯಮಂತ್ರಿಯೂ ಆಗಿರುವ ವೀರಪ್ಪ ಮೊಯ್ಲಿ ಅವರು, ನಮ್ಮ ಪ್ರಣಾಳಿಕೆಯಲ್ಲಿ ನಾವು ಎರಡೂ ಸಂಘಟನೆಗಳನ್ನು ಅಂದರೆ ಬಜರಂಗದಳ ಮತ್ತು ಪಿಎಫ್ಐ ಹೆಸರಿಸಿದ್ದೇವೆ. ಇದು ಎಲ್ಲ ಸಮಾಜವಿರೋಧಿ ಸಂಘಟನೆಗಳಿಗೆ ಅನ್ವಯಿಸುತ್ತದೆ. ಯಾವುದೇ ಸಂಘಟೆಯನ್ನು ನಿಷೇಧ ಮಾಡುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಹಾಗಾಗಿ, ಬಜರಂಗದಳವನ್ನು ಕರ್ನಾಟಕ ನಿಷೇಧ ಮಾಡಲು ಸಾಧ್ಯವಿಲ್ಲ ಎಂಬ ವೀರಪ್ಪ ಮೊಯ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

Mallikarjun Tippar

ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಎಂದ ಮಲ್ಲಿಕಾರ್ಜುನ ಖರ್ಗೆ

ಬಜರಂಗ ದಳ ನಿಷೇಧ ಪ್ರಣಾಳಿಕೆಯ ಭರವಸೆಯ ಕುರಿತು, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಉತ್ತರ ನೀಡಲಿದ್ದಾರೆ. ಆದರೆ, ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟಿರುವುದು ಸರಿಯಲ್ಲ. ನಿಮಗೆ ಇಷ್ಟ ಆಗಲೀ, ಆಗದೇ ಇರಲಿ ಪ್ರಣಾಳಿಕೆ ಸುಡುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದ್ದಾರೆ(Karnataka Election 2023). ಕಲಬುರಗಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸುಟ್ಟಿದ್ದಾರೆ. ಇದರ ಅರ್ಥ ಏನೆಂದರೆ, ಕಾಂಗ್ರೆಸ್ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಸುಟ್ಟು ಹಾಗೆ ಆಗುತ್ತದೆ. ಈ ಮೂಲಕ ಈಶ್ವರಪ್ಪ ಅವರು ಜನರಿಗೆ ಅವಮಾನ ಮಾಡಿದ್ದಾರೆ. ರಾಜಕಾರಣದಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

Harish Kera

ಪುತ್ತೂರಿನಲ್ಲಿಅರುಣ್‌ ಪುತ್ತಿಲ ಮಣಿಸಲು ಯೋಗಿ ಆಗಮನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಪುತ್ತೂರಿಗೆ ಶನಿವಾರ ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್‌ ಭೇಟಿ ನೀಡಿ ಸಾರ್ವಜನಿಕ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಎದ್ದು ಸ್ಪರ್ಧಿಸುತ್ತಿರುವ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರನ್ನು ಮಣಿಸಲು ಯೋಗಿಯನ್ನು ಕರೆಸಲಾಗುತ್ತಿದೆ.

Ramaswamy Hulakodu

ಪ್ರಚಾರದ ಅಖಾಡಕ್ಕೆ ಸೋನಿಯಾ ಗಾಂಧಿ

ಕರ್ನಾಟಕ ವಿಧಾನಸಭೆಯ ಚುನಾವಣೆಯ ಪ್ರಚಾರ ಅಖಾಡಕ್ಕೆ ಕಾಂಗ್ರೆಸ್‌ ನ ಹಿರಿಯ ನಾಯಕಿ ಸೋನಿಯಾಗಾಂಧಿ ಇಳಿದಿದ್ದಾರೆ.

ಮೇ 6ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಸೋನಿಯಾ ಗಾಂಧಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.

Exit mobile version