ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದು, ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಆರಂಭಿಸಿರುವ ಬೆನ್ನಲ್ಲೇ ತುಮಕೂರಿನಲ್ಲಿ ಗೂಂಡಾ ರಾಜಕೀಯ ಆರಂಭವಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಇಬ್ಬರು ಮುಸ್ಲಿಂ ಮುಖಂಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿಯಲ್ಲಿ 7 ನಾಮಪತ್ರ ತಿರಸ್ಕೃತ
ಪುರಸ್ಕೃತಗೊಂಡ ನಾಮಪತ್ರ- 138
ತಿರಸ್ಕೃತ- 7
ಅಫಜಲಪೂರ-11, ಜೇವರ್ಗಿ-28, ಚಿತ್ತಾಪುರ-8, ಸೇಡಂ-15, ಚಿಂಚೋಳಿ-10
ಕಲಬುರಗಿ ಗ್ರಾಮೀಣ-14, ಕಲಬುರಗಿ ದಕ್ಷಿಣ-22, ಕಲಬುರಗಿ ಉತ್ತರ-16 ಹಾಗೂ ಆಳಂದ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
ಅಫಜಲಪೂರ, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ತಲಾ 2, ಜೇವರ್ಗಿ, ಚಿತ್ತಾಪುರ, ಹಾಗೂ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ತಲಾ 1 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ.
9 ಕ್ಷೇತ್ರಗಳಲ್ಲಿ 145 ಅಭ್ಯರ್ಥಿಗಳಿಂದ 217 ನಾಮಪತ್ರ ಸಲ್ಲಿಕೆಯಾಗಿದ್ದವು.
ಶಿವಮೊಗ್ಗಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಆಗಮನ
ಮೇ 1ರಂದು ಚುನಾವಣೆ ರ‍್ಯಾಲಿಯಲ್ಲಿ ಮೋದಿ ಭಾಗಿ
ಲಕ್ಷಾಂತರ ಜನರನ್ನು ಸೇರಿಸಲು ಬಿಜೆಪಿ ಕಸರತ್ತು
2023ನೇ ಸಾಲಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ವಿವರ;
ಪುರುಷರು – 4710
ಮಹಿಳೆಯರು – 391
ಒಟ್ಟು – 5102
==========
ಅಭ್ಯರ್ಥಿಗಳು
ಪುರುಷರು – 3327
ಮಹಿಳೆಯರು – 304
ಒಟ್ಟು – 3632
==========
ಪಕ್ಷಗಳಿಂದ ಅನುಮೋದಿಸ್ಪಟ್ಟ ನಾಮಪತ್ರಗಳು
ಆಪ್ – 373
ಬಿಎಸ್‌ಪಿ – 179
ಬಿಜೆಪಿ – 707
ಕಾಂಗ್ರೆಸ್ – 651
ಎನ್‌ಪಿಪಿ – 5
ಜೆಡಿಎಸ್ – 455
ಸಿಪಿಐಎಂ – 5
==========
ಪಕ್ಷೇತರ – 1720
ನೋಂದಣಿಯಾದ ಗುರುತಿಸಲ್ಪಡದ ಪಕ್ಷಗಳು – 1007
ಜೆಡಿಎಸ್ ಅಭ್ಯರ್ಥಿ ಮನೆಮೇಲೆ ಐಟಿ ದಾಳಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಂ. ರವೀಂದ್ರಪ್ಪ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ರವೀಂದ್ರಪ್ಪ ನಿವೃತ್ತ ಮುಖ್ಯ ಎಂಜಿನಿಯರ್ ಆಗಿದ್ದಾರೆ.
ಮಾಜಿ ಶಾಸಕ ಪ್ರಸನ್ನಕುಮಾರ್ ಜೆಡಿಎಸ್ ಸೇರ್ಪಡೆ
ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ್ದಾರೆ.
ದೇವೇಗೌಡರ ನಿವಾಸದಲ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಅವರು ಜೆಡಿಎಸ್ ಸೇರಿದರು.
ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಕಣದಲ್ಲಿದ್ದಾರೆ.