Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣದ ಮಾಹಿತಿ: ಮೋದಿ ರೋಡ್‌ ಶೋ ಹಿನ್ನೆಲೆ; ಬೆಂಗಳೂರಿನಲ್ಲಿ ಅಧಿಕಾರಿಗಳ ಉನ್ನತ ಸಭೆ

Karnataka Election 2023 Live updates Check details In Kannada

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ ಕಣದಲ್ಲಿ (Karnataka Election 2023) ಸ್ಟಾರ್‌ ಪ್ರಚಾರಕರ ಅಬ್ಬರ ಮುಂದುವರಿದಿದೆ. ಇಂದು ಕರಾವಳಿಯಲ್ಲಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಜೆಪಿ ಅಭ್ಯರ್ಥಿಗಳ ಪರ ಬ್ಯಾಟ್‌ ಬೀಸುತ್ತಿದ್ದರೆ, ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ (Priyanka gandhi) ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

B Somashekhar

ಮೋದಿ ರೋಡ್‌ ಶೋ ಹಿನ್ನೆಲೆ ಉನ್ನತ ಮಟ್ಟದ ಸಭೆ

ಮೇ 6ರಂದು ಬೆಂಗಳೂರಿನಲ್ಲಿ ಮೋದಿ ಬೃಹತ್‌ ರೋಡ್‌ ಶೋ

ಹಾಗಾಗಿ, ಕಮಿಷನರ್‌ ಸೇರಿ ಹಲವು ಇಲಾಖೆಗಳ ಅಧಿಕಾರಿಗಳಿಂದ ಸಭೆ

ಭದ್ರತೆ, ಟ್ರಾಫಿಕ್‌ ಕಂಟ್ರೋಲ್‌ ಸೇರಿ ಹಲವು ವಿಷಯಗಳ ಕುರಿತು ಚರ್ಚೆ

B Somashekhar

ಕನ್ನಡಿಗರು ತಮಿಳಿಗರನ್ನು ನೋಡಿ ರಾಜಕೀಯ ಕಲಿಯಬೇಕು

ರಾಮನಗರದಲ್ಲಿ ಎಚ್‌.ಡಿ.ದೇವೇಗೌಡ ಕರೆ

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ

ತಮಿಳಿಗರು ಬಿಜೆಪಿ, ಕಾಂಗ್ರೆಸ್‌ಗೆ ಬೆಂಬಲ ನೀಡುವುದಿಲ್ಲ

ಇದನ್ನು ಕನ್ನಡಿಗರು ಕೂಡ ಕಲಿಯಬೇಕು ಎಂದ ಗೌಡರು

B Somashekhar

ಬೈಲಹೊಂಗದಲ್ಲಿ ಮೋದಿ ವಾಗ್ಝರಿ

ಬೈಲಹೊಂಗಲ (ಬೆಳಗಾವಿ): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಮಾವೇಶ, ರ‍್ಯಾಲಿ ಹಾಗೂ ರೋಡ್‌ ಶೋಗಳ ಮೂಲಕ ಅಬ್ಬರದ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಜತೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಕೂಡ ಅವರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದರು, “ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದರು.

Mallikarjun Tippar

ಮತದಾನದ ದಿನ ಜೈ ಬಜರಂಗಬಲಿ ಎನ್ನುತ್ತಾ ಕಮಲದ ಬಟನ್ ಎಂದ ಪ್ರಧಾನಿ ಮೋದಿ

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಹೇಗೆ ಮತ ಕೇಳುತ್ತಿದೆ ಗೊತ್ತಾ? ನಮ್ಮ ನಾಯಕ(ಸಿದ್ದರಾಮಯ್ಯ) ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು ಸಹಿಸಿಕೊಳ್ಳುತ್ತಾರೆಯೇ? ಇಲ್ಲ ಅಲ್ಲವೇ, ಅಂಥವರಿಗೆ ಶಿಕ್ಷೆ ಕೊಡಬೇಕಲ್ಲವೇ? ಹಾಗಿದ್ದರೆ, ಮತದಾನದ ದಿನ 'ಜೈ ಬಜರಂಗಬಲಿ' ಎಂದು ಕಮಲದ ಬಟನ್ ಒತ್ತುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಹೇಳಿದರು(Karnataka Election 2023). ಅಂಕೋಲಾದಲ್ಲಿ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರ ಮಾಡಿದರು.

B Somashekhar

ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ

ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್‌ ಪ್ರಶ್ನೆ

ನಾವೂ ಹನುಮನ ಭಕ್ತರೇ, ನಾವೂ ಹನುಮಾನ್‌ ಚಾಲೀಸಾ ಪಠಿಸುತ್ತೇವೆ

ಬಿಜೆಪಿಯವರು ಮಾತ್ರ ಆಂಜನೇಯನ ಭಕ್ತರಾ ಎಂದು ಪ್ರಶ್ನೆ

Exit mobile version