Site icon Vistara News

Karnataka Election 2023: ಶೆಟ್ಟರ್‌ ರೋಡ್‌ ಶೋ ವೇಳೆ ಕಾಂಚಾಣ ಝಣ ಝಣ; ದುಡ್ಡು ಹಂಚುವ ವಿಡಿಯೊ ಇಲ್ಲಿದೆ

Karnataka Election 2023: Money Distributed during Jagadish Shettar roadshow in hubballi

Karnataka Election 2023: Money Distributed during Jagadish Shettar roadshow in hubballi

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ (Karnataka Election 2023) ರಾಜ್ಯದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಿದ್ದರೂ ಮತದಾರರಿಗೆ ಹಣ ಸೇರಿ ಹಲವು ಆಮಿಷ ಒಡ್ಡಲಾಗುತ್ತಿದೆ. ರಾಜ್ಯಾದ್ಯಂತ ಚುನಾವಣೆ ಅಧಿಕಾರಿಗಳು, ಪೊಲೀಸರು ಇದುವರೆಗೆ 100 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಅವರು ರೋಡ್‌ ಶೋ ನಡೆಸುವ ವೇಳೆ ಹಣದ ಹಂಚಿಕೆಯಾಗಿದೆ.

ರೋಡ್‌ ಶೋಗೆ ಜನರನ್ನು ಕಾಂಗ್ರೆಸ್‌ ಮುಖಂಡರು ದುಡ್ಡು ಕೊಟ್ಟು ಕರೆತಂದಿದ್ದು, ಹುಬ್ಬಳ್ಳಿ ಪಾಲಿಕೆ ಎದುರೇ ಮಹಿಳೆಯರು ರೋಡ್‌ ಶೋಗೆ ಬಂದವರಿಗೆ ಹಣದ ಹಂಚಿಕೆ ಮಾಡಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಜನಬೆಂಬಲ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರೋಡ್‌ ಶೋನಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ನೋಡಿಕೊಳ್ಳುವುದು ಮುಖಂಡರ ಜವಾಬ್ದಾರಿಯಾಗಿತ್ತು. ಅದರಂತೆ, ಹಣ ಕೊಟ್ಟು ಮಹಿಳೆಯರು ಸೇರಿ ಸಾವಿರಾರು ಜನರನ್ನು ರೋಡ್‌ ಶೋಗೆ ಕರೆತರಲಾಗಿತ್ತು ಎಂದು ತಿಳಿದುಬಂದಿದೆ.

ಇಲ್ಲಿದೆ ದುಡ್ಡು ಹಂಚುವ ವಿಡಿಯೊ

ಹುಬ್ಬಳ್ಳಿ ಪಾಲಿಕೆ ಎದುರೇ ಕಾಂಗ್ರೆಸ್‌ ಮುಖಂಡರು ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಪಾಲಿಕೆ ಎದುರೇ ಕಾಂಗ್ರೆಸ್‌ ಮುಖಂಡರು ಹಣ ಹಂಚುತ್ತಿರುವುದನ್ನು ಕಂಡೂ ಕಾಣದಂತೆ ಇದ್ದ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಮತ್ತೊಂದು ದುರಂತವಾಗಿದೆ.

ಜಗದೀಶ್ ಶೆಟ್ಟರ್ ಆಸ್ತಿ ವಿವರ

ಕೈಯಲ್ಲಿರುವ ನಗದು- 3 ಲಕ್ಷ ರೂ.

ಪತ್ನಿ ಶಿಲ್ಪಾ ಶೆಟ್ಟರ್ ಕೈಯಲ್ಲಿರುವ ಹಣ – 50 ಸಾವಿರ

ಉಳಿತಾಯ ಖಾತೆಗಳಲ್ಲಿರುವ ಒಟ್ಟು ಹಣ – ಜಗದೀಶ್ ಶೆಟ್ಟರ್ ಹೆಸರಲ್ಲಿ – 57.69 ಲಕ್ಷ ರೂ.

ಪತ್ನಿ ಶಿಲ್ಪಾ ಶೆಟ್ಟರ್ ಹೆಸರಲ್ಲಿ – 15.43 ಲಕ್ಷ ರೂ.

ಕೃಷಿ ಭೂಮಿ – ಪತ್ನಿ ಶಿಲ್ಪಾ ಶೆಟ್ಟರ್ ಹೆಸರಲ್ಲಿ 20 ಎಕರೆ 14 ಗುಂಟೆ

65 ಸಾವಿರ ಮೌಲ್ಯದ ಮೂರು ಎಕರೇ ಕೃಷಿ ಜಮೀನು ಜಗದೀಶ್ ಶೆಟ್ಟರ್ ಹೊಂದಿದ್ದಾರೆ.

1383 ಚ.ಅಡಿ 50 ಲಕ್ಷ ಮೌಲ್ಯದ ಕೃಷಿಯೇತರ ಜಮೀನು.

ವಾಸಕ್ಕೆ ಮಧುರಾ ಎಸ್ಟೇಟ್ ನಲ್ಲಿ ಎರಡು ಮನೆಗಳು.

ಚರಾಸ್ಥಿಯ ಒಟ್ಟು ಮೌಲ್ಯ – 2.52 ಕೋಟಿ ರೂ. ( ಜಗದೀಶ್ ಶೆಟ್ಟರ್ ಹೆಸರಲ್ಲಿ)

ಪತ್ನಿ ಶಿಲ್ಪಾ ಶೆಟ್ಟರ್ ಹೆಸರಲ್ಲಿ – ಚರಾಸ್ಥಿ ( 90 ಲಕ್ಷ ರೂ.)

ಜಗದೀಶ್ ಶೆಟ್ಟರ್ ಹೆಸರಲ್ಲಿ ಸ್ಥಿರಾಸ್ಥಿ – 9.28 ಕೋಟಿ ರೂ.

ಪತ್ನಿ ಶಿಲ್ಪಾ ಶೆಟ್ಟರ್ ಹೆಸರಲ್ಲಿ 25 ಲಕ್ಷ ರೂ.

ಜಗದೀಶ್ ಶೆಟ್ಟರ್ ಹೆಸರಲ್ಲಿ ಸಾಲ – 76.69 ಲಕ್ಷ ರೂ.

ಪತ್ನಿ ಶಿಲ್ಪಾ ಶೆಟ್ಟರ್ ಹೆಸರಲ್ಲಿ ಸಾಲ- 14.40 ಲಕ್ಷ ರೂ.

ಇದನ್ನೂ ಓದಿ: Karnataka Election 2023: ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಬಳಿಕ ನಾಮಪತ್ರ ಸಲ್ಲಿಕೆ

Exit mobile version