Site icon Vistara News

Karnataka Election 2023: ಕಾಂಗ್ರೆಸ್‌ನ ‘ಗ್ಯಾರಂಟಿ’ ಸ್ಕೀಮ್‌ಗಳನ್ನು ಕಂಡು ಪ್ರಧಾನಿ ಮೋದಿಗೆ ಹತಾಶೆ ಎಂದ ಸಿದ್ದರಾಮಯ್ಯ

karnataka cm calculation behind five guarantee implementation

ರಾಯಚೂರು, ಕರ್ನಾಟಕ: ನಿನ್ನೆ ಪ್ರಧಾನಿ ಮೋದಿ ತಮ್ಮ ಕಾರ್ಯಕರ್ತರನ್ನ ಉದ್ದೇಶಿಸಿ ಆನ್‌ಲೈನ್ ಮೀಟಿಂಗ್ ಮಾಡಿದ್ದಾರೆ. ನಾವು ಕೊಟ್ಟಿರೊ ಗ್ಯಾರಂಟಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ. ಮೋದಿ ಅವರು ಸಿಎಂ ಆಗಿದ್ದೋರು, ಪ್ರಧಾನಿ ಇರೋರು ಈ ರೀತಿಯಾಗಿ ಹತಾಶರಾಗಿ ಮಾತನಾಡಬಾರದು ಎಂದು ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ(Siddaramaiah) ಅವರು ಹೇಳಿದ್ದಾರೆ(Karnataka Election 2023).

ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾವು ಈ ಹಿಂದೆ ಕೊಟ್ಟ ಎಲ್ಲಾ ಭರವಸೆಗಳನ್ನ ಈಡೇರಿಸಿದ್ದೇವೆ. ಬಿಜೆಪಿ ಪಕ್ಷದವರು ಎಷ್ಟು ಭರವಸೆ ಕೊಟ್ಟಿದ್ರು, ಎಷ್ಟು ಈಡೇರಿಸಿದ್ದಾರೆ ನೋಡಬೇಕು. ಅವರು 600 ಭರವಸೆ ಕೊಟ್ಟು ಬರೀ 55 ಈಡೇರಿಸಿದ್ದಾರೆ. ಅದು ಶೇ.10ರಷ್ಟೂ ಆಗುವುದಿಲ್ಲ ಎಂದು ತಿವಿದರು.

ಮೋದಿ ಅವ್ರಿಗೆ ತಮ್ಮ ಪಕ್ಷದ ಜನರಿಗೆ ಮೋಸ ಮಾಡಿದ್ದಾರೆ ಅನ್ನೋದು ಗೊತ್ತಿದೆ. 15 ಲಕ್ಷ ಕಪ್ಪು ಹಣ ತಗೊಂಡು ಬರ್ತಿನಿ, ಅಕೌಂಟ್ ಗೆ ಹಣ ಹಾಕ್ತಿನಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಅಂದ್ರು, ಈ ಭರವಸೆಗಳನ್ನು ಈಡೇರಿಸಿದ್ದಾರಾ..? ರೈತರ ಆದಾಯ ದುಪ್ಪಟ್ಟು ಮಾಡಿದ್ದಾರಾ, ಅಚ್ಚೆ ದಿನ್ ಬಾಂತಾ? ಮೋದಿ ಅವರು ಪ್ರಧಾನಿಯಾಗಿ ‌9 ವರ್ಷ ಆಯ್ತು, ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Karnataka Election 2023: ಬೆಲೆ ಏರಿಕೆ ಮಾಡಿ, ಜನರ ಬದುಕಿನ ಜತೆ ಚೆಲ್ಲಾಟ

ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯು ಗಗನ ಮಟ್ಟಿದೆ. ಜನರಿಗೆ ಬದುಕಲು ಕಷ್ಟವಾಗಿದೆ. ನಾವು ಅವರಿಗೆ ನೆರವಾಗುವುದಕ್ಕಾಗಿ ತಿಂಗಳಿಗೆ ತಿಂಗಳಿಗೆ 2 ಸಾವಿರ ಕೊಡ್ತಿರೋದು. ಮನಮೋಹನ್ ಸಿಂಗ್ ಕಾಲದಲ್ಲಿ 414 ರೂ.ಗೆ ಗ್ಯಾಸ್ ಸಿಲಿಂಡರ್ ಇತ್ತು, ಆದ್ರೀಗ ಸಾವಿರ ಗಡಿ ದಾಟಿದೆ. ಇದರ ಜೊತೆ ಮಕ್ಕಳ ವಿದ್ಯಾಭ್ಯಾಸ ಮಾಡಲು ಆಗತ್ತಾ, ಬಡವರ ತಲೆ ಮೇಲೆ ಭಾರ ಹಾಕಿದ್ದಾರೆ. ಎಲ್ಲಾ ವಸ್ತುಗಳ ಮೇಲೆ ಜಿಎಸ್ ಟಿ ಹಾಕಲಾಗ್ತಿದೆ, ಗೊಬ್ಬರದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಿರೋವಾಗ ರೈತರ ಆದಾಯ ಹೇಗೆ ದುಪ್ಪಟ್ಟಾಗತ್ತದೆ ಎಂದು ಪ್ರಶ್ನಿಸಿದರು.

ಮೋದಿ ತಮ್ಮ ಕಾರ್ಯಕರ್ತರಿಗೆ ಸುಳ್ಳು ಪ್ರಚಾರ ಮಾಡಲು ಹೇಳಿದ್ದಾರೆ. ಇದು ಪ್ರಧಾನಿ ಸ್ಥಾನಕ್ಕೆ ಶೋಭೆ ತರತ್ತಾ. ಅದ್ಯಾರೋ ನಳೀನ್ ಕುಮಾರ್ ಕಟೀಲು ಅಭಿವೃದ್ಧಿ ಬೇಡ. ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾರೆ. ನಾವು ನಮ್ಮ ಗ್ಯಾರಂಟಿಗಳನ್ನ ಜಾರಿಗೆ ತಂದು, ಮೋದಿ ಅವರ ಸುಳ್ಳು ಪ್ರಚಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಅವನ್ಯಾರೋ ತೇಜಸ್ವಿ ಸೂರ್ಯ ರಾಷ್ಟ್ರದ ಯುವ ಮೋರ್ಚಾ ಅಧ್ಯಕ್ಷ ಇದ್ದಾನೆ. ಅವನಿಗೆ ನಾನು ಅಮವಾಸ್ಯೆ ಅಂತಾ ಕರಿತೇನೆ, ಅಂಬೇಡ್ಕರ್ ಸಂವಿಧಾನ ಸುಟ್ಟು ಹಾಕ್ತೆನೆ ಅಂದಿದ್ದ. ಅದಕ್ಕೆ ಆತನಿಗೆ ಅಮವಾಸ್ಯೆ ಅಂತ ಕರಿಯುವೆ. ಆತ ರೈತರ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗತ್ತೆ ಅಂತಾನೆ. ಆದರೆ ಮೋದಿ ವಿಜಯ್ ಮಲ್ಯ, ಅಂಬಾನಿ, ಅದಾನಿ, ಚೋಕ್ಸಿ ಸೇರಿ ಇವರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ಲ, ಆದ್ರೆ ರೈತರ ಸಾಲ ಮನ್ನಾ ಮಾಡಿದ್ರೆ ದಿವಾಳಿ ಆಗತ್ತಾ ಎಂದು ಪ್ರಶ್ನಿಸಿದರು.

Exit mobile version