ಚಿಕ್ಕಮಗಳೂರು: ಮತದಾನ ಮುಗಿದ ಬಳಿಕ ಇವಿಎಂ(EVM), ವಿವಿ ಪ್ಯಾಟ್ ಯಂತ್ರಗಳನ್ನೇ ಅಧಿಕಾರಿಗಳು ಬಿಟ್ಟು ಹೋದ ಘಟನೆ ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲದಲ್ಲಿ ನಡೆದಿದೆ.
ಮೊಹಲ್ಲದ ಮತಗಟ್ಟೆ ಸಂಖ್ಯೆ 169ರಲ್ಲಿ ಚುನಾವಣಾ ಅಧಿಕಾರಿಗಳ ಈ ನಿರ್ಲಕ್ಷ್ಯ ಕಂಡುಬಂದಿದೆ. EVM ಮತಯಂತ್ರಗಳನ್ನು ಮತದಾನ ನಡೆದ ಕಾಲೇಜಿನಲ್ಲೇ ಇವರು ಮರೆತು ಹೊರಟುಹೋಗಿದ್ದರು. ಪಕ್ಷಗಳ ಏಜೆಂಟರ ಕಣ್ಣಿಗೆ ಈ ವಿವಿಪ್ಯಾಟ್ ಯಂತ್ರಗಳು ಬಿದ್ದಿದ್ದು, ನಂತರ ಅಧಿಕಾರಿಗಳಿಗೆ ಫೋನ್ ಮಾಡಿ ಸ್ಥಳೀಯರು ಕರೆಸಿದರು.
ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮತಯಂತ್ರಗಳನ್ನೇ ಬಿಟ್ಟು ಹೋಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪೆನ್ಷನ್ ಮೊಹಲ್ಲಾ ಬೂತ್‌ನಲ್ಲಿ 700 ಮತಗಳಿವೆ. ಮತ ಎಣಿಕೆಯ ದಿನ ಅಷ್ಟು ಲೆಕ್ಕ ಸರಿಯಾಗಿ ಇರಬೇಕೆಂದು ಸ್ಥಳೀಯರು ತಾಕೀತು ಮಾಡಿದ್ದಾರೆ.
ಇದನ್ನೂ ಓದಿ: Karnataka Election 2023 : ರಾಜ್ಯದಲ್ಲಿ ಶೇ. 72.67 ರಷ್ಟು ಮತದಾನ; ದಾಖಲೆ ಪ್ರಮಾಣದ ವೋಟಿಂಗ್‌ನಿಂದ ಯಾರಿಗೆ ಲಾಭ?