ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರ (Karnataka Election 2023) ಕಣದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) , ಸೋಮವಾರ ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ಪ್ರಯಾಣಿಸಿದರು.
ಬೆಂಗಳೂರಿನ ಜನನಿಬಿಡ ಪ್ರದೇಶವಾದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ರಾಹುಲ್ ಗಾಂಧಿ ಸೋಮವಾರ ಮುಂಜಾನೆ ಓಡಾಡಿದರು. ಬಳಿಕ ವಸಂತನಗರದಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರಿಂದ ತುಂಬಿದ ಬಸ್‌ನಲ್ಲಿ ತೆರಳಿದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಸೀಟ್ ಬಿಟ್ಟುಕೊಟ್ಟರು. ರಾಹುಲ್ ಮಹಿಳಾ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದರು.
ಭಾನುವಾರ ಅವರು ಸ್ವಿಗ್ಗಿ, ಬ್ಲಿಂಕಿಟ್, ಡಂಜೊ, ಜೊಮ್ಯಾಟೊ ಮೊದಲಾದ ಸಂಸ್ಥೆಗಳ ಡೆಲಿವರಿ ಬಾಯ್‌ಗಳೊಂದಿಗೆ ಏರ್‌ಲೈನ್ ಹೋಟೆಲ್‌ನಲ್ಲಿ ಕುಳಿತು ಮಸಾಲೆ ದೋಸೆ ತಿನ್ನುತ್ತಾ ಅವರ ಕಷ್ಟ ಸುಖಗಳ ಬಗ್ಗೆ ವಿಚಾರಿಸಿದ್ದರು. ಡೆಲಿವರಿ ಬಾಯ್ ಒಬ್ಬರ ಹಿಂದೆ ಅವರ ಬೈಕ್‌ನಲ್ಲಿ ಕುಳಿತು ಪ್ರಯಾಣಿಸಿದ್ದರು. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ರೋಡ್ ಶೋದಲ್ಲಿ ತೊಡಗಿದ್ದರೆ, ರಾಹುಲ್ ಗಾಂಧಿ ಬೇರೆಯೇ ಬಗೆಯಲ್ಲಿ ರೋಡ್ ಶೋ ನಡೆಸಿದ್ದರು.
ಇದನ್ನೂ ಓದಿ: Karnataka Election : ಕೆಲವು ನಿಮಿಷ ಡೆಲಿವರಿ ಬಾಯ್ ಆದ ರಾಹುಲ್ ಗಾಂಧಿ! ಬೆಂಗಳೂರಿನಲ್ಲಿ ರೋಡ್ ಶೋ!