Site icon Vistara News

Karnataka Election 2023: ಸಿದ್ದರಾಮಯ್ಯ ಅವರ ಪತ್ನಿಯೇ ಶ್ರೀಮಂತೆ; 5 ವರ್ಷದಲ್ಲಿ ಆಸ್ತಿ ದುಪ್ಪಟ್ಟು

Siddaramaiah in a press conference in Bengaluru.

ಮೈಸೂರು: ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟೂರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು (Karnataka Election 2023), ಬುಧವಾರ ಅಪಾರ ಜನಬೆಂಬಲದೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ ಅವರು ಆಸ್ತಿಯ ತಮ್ಮ ಆಸ್ತಿಯ ವಿವರ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಪಾರ್ವತಿ ಅವರೇ ಶ್ರೀಮಂತರಾಗಿದ್ದಾರೆ. ಆದರೆ, ಸಿದ್ದರಾಮಯ್ಯನವರ ಆಸ್ತಿ ಮಾತ್ರ ಕಳೆದ ಐದು ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ.

ಸಿದ್ದರಾಮಯ್ಯ ಅವರ ಬಳಿ 19 ಕೋಟಿ ರೂ. ಆಸ್ತಿ ಇದೆ. ಇನ್ನು ಅವರ ಪತ್ನಿ ಪಾರ್ವತಿ ಅವರು 32.12 ಕೋಟಿ ರೂ. ಒಡತಿಯಾಗಿದ್ದಾರೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಇವರ ಒಟ್ಟು ಆಸ್ತಿ 51.12 ಕೋಟಿ ರೂ. ಆಗಿದೆ. ಸಿದ್ದರಾಮಯ್ಯ ಅವರು 9.58 ಕೋಟಿ ರೂ. ಚರಾಸ್ತಿ ಹಾಗೂ 9.43 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಅವರ ಪತ್ನಿಯು 11.26 ಕೋಟಿ ರೂ. ಚರಾಸ್ತಿ ಹಾಗೂ 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಎರಡೂವರೆ ಪಟ್ಟು ಆಸ್ತಿ ಹೆಚ್ಚಳ

ಕಳೆದ ಐದು ವರ್ಷದಲ್ಲಿ ಸಿದ್ದರಾಮಯ್ಯನವರ ಆಸ್ತಿ ಎರಡೂವರೆ ಪಟ್ಟು ಹೆಚ್ಚಾಗಿದೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು 18.55 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು. ಈಗ ಅದು 50 ಕೋಟಿ ರೂ. ದಾಟಿದೆ. 2013ರ ಚುನಾವಣೆಯಲ್ಲಿ ಅವರ ಆಸ್ತಿ 13.61 ಕೋಟಿ ರೂ. ಇತ್ತು. ಇನ್ನು ಸಿದ್ದರಾಮಯ್ಯ ಅವರ ಪತ್ನಿಯು 16 ಕೋಟಿ ರೂ. ಸಾಲ ಹೊಂದಿದ್ದರೆ, ಸಿದ್ದರಾಮಯ್ಯ ಅವರು 6.84 ಕೋಟಿ ರೂ. ಸಾಲ ಇದೆ ಎಂದು ಘೋಷಿಸಿದ್ದಾರೆ. ಇವರಿಗೆ ಪಿತ್ರಾರ್ಜಿತವಾಗಿ 1.29 ಕೋಟಿ ರೂ. ಆಸ್ತಿ ಲಭಿಸಿದೆ.

ಇನ್ನು ಸಿದ್ದರಾಮಯ್ಯ ಅವರು ಸಾಲ ನೀಡಿರುವ ಮಾಹಿತಿಯೂ ಸಿಕ್ಕಿದೆ. ಅವರು ಪತ್ನಿ ಪಾರ್ವತಿ ಅವರಿಗೆ 6 ಕೋಟಿ ರೂ., ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ. ಇವರ ಬಳಿ 28 ಲಕ್ಷ ರೂ. ಮೌಲ್ಯದ ಟೊಯೊಟಾ ಕಾರು ಇದೆ. ಮಾಜಿ ಸಚಿವ ಕೆ.ಜೆ. ಜಾರ್ಜ್‌ ಅವರಿಂದ ಸಿದ್ದರಾಮಯ್ಯ 4 ಕೋಟಿ ರೂ. ಸಾಲ ಪಡೆದಿದ್ದಾರೆ.

ಇದನ್ನೂ ಓದಿ: Karnataka Election: ಕಾರವಾರ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಆಸ್ತಿ ಐದು ವರ್ಷದಲ್ಲೇ ಡಬಲ್‌; ಸಾಲವೂ ದುಪ್ಪಟ್ಟು

Exit mobile version