Site icon Vistara News

Karnataka Election 2023: ಸರತಿಯಲ್ಲಿದ್ದ ಮಹಿಳೆ ಮೃತ್ಯು, ಮತ ಹಾಕಲು ಬರುತ್ತಿದ್ದ ಯುವಕ ಆನೆ ದಾಳಿಗೆ ಬಲಿ, ಒಟ್ಟು 4 ಸಾವು

Karnataka Election 2023: Two people died in polling booth in Karnataka

ಬೆಳಗಾವಿ, ಕರ್ನಾಟಕ: ಮತ ಚಲಾಯಿಸಲು ಮತಕೇಂದ್ರಕ್ಕೆ ಆಗಮಿಸಿದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಬುಧವಾರ ನಡೆದಿದೆ. 68 ವರ್ಷದ ಮಹಿಳೆಯು ಮತ ಹಾಕಲು ಆಗಮಿಸಿದ್ದರು. ಆದರೆ, ಮತದಾನ (Karnataka Election Voting) ಮಾಡುವುದಕ್ಕಿಂತ ಮಂಚೆಯೇ ಅವರು ಮೃತಪಟ್ಟಿದ್ದಾರೆ(Karnataka Election 2023).

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೃತ ಮಹಿಳಾ ಮತದಾರರನ್ನು ಪಾರವ್ವ ಈಶ್ವರ್ ಸಿದ್ದಾಳ್ ಎಂದು ಗುರುತಿಸಲಾಗಿದೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ತಮ್ಮ ಹಕ್ಕನ್ನು ಚಲಾಯಿಸಲು ಸರತಿ ಸಾಲಿನಲ್ಲಿ ಪಾರವ್ವ ಸಿದ್ನಾಳ್ ಅವರು ನಿಂತಿದ್ದರು. ಈ ವೇಳೆ, ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ಉಪಚರಿಸಲಾಯಿತು. ಆದರೆ, ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: Karnataka Election 2023: ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರಿಂದ ಏಕಕಾಲಕ್ಕೆ ಮತದಾನ!

ಮತ ಚಲಾಯಿಸಿ ಮೃತಪಟ್ಟ ವ್ಯಕ್ತಿ

ಹಾಸನ, ಕರ್ನಾಟಕ: ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 49 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ. ಜಯಣ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಜಯಣ್ಣ ಅವರು ಅತ್ಯುತ್ಸಾಹದಿಂದಲೇ ಮತ ಚಲಾಯಿಸಲು ಆಗಮಿಸಿದ್ದರು. ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿ ಅವರು ಮತಗಟ್ಟೆಯಿಂದ ಹೊರಗೆ ಬರುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮತದಾನ ಮಾಡಿ ಮೃತಪಟ್ಟ ವ್ಯಕ್ತಿ

ರಾಯಚೂರು: ಮತದಾನ ಮಾಡಿ ಬಂದ ಬಳಿಕ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಾಮಣ್ಣನ ತಂದೆ ಬಸಣ್ಣ(55) ಎಂದು ಗುರುತಿಸಲಾಗಿದೆ. ದೇವದುರ್ಗದ ಗೆಜ್ಜೆಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೆಜ್ಜೆಬಾವಿಯ ಮತಗಟ್ಟೆಯಲ್ಲಿ ಮತದಾನ ನಡೆದ ಬಳಿಕ ಕಡಿಮೆ ರಕ್ತದೊತ್ತಡದಿಂದಾಗಿ ಮೃತಪಟ್ಟಿದ್ದಾರೆ.

ಮತದಾನಕ್ಕೆ ಬರುತ್ತಿದ್ದ ಯುವಕ ಆನೆ ದಾಳಿಗೆ ಬಲಿ

ಚಾಮರಾಜನಗರ: ಮತದಾನಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35). ಹಳೇ ಮಾರ್ಟಳ್ಳಿಯಿಂದ ತೋಕೆರೆಗೆ ಕಾಲು ದಾರಿಯಲ್ಲಿ ಪುಟ್ಟಸ್ವಾಮಿ ಅವರು ಬರುತ್ತಿದ್ದಾಗ ಆನೆ ದಾಳಿ ನಡೆಸಿದೆ. ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಈ ಘಟನೆ ನಡೆದಿದೆ.

Exit mobile version