ಹಾಸನ, ಕರ್ನಾಟಕ: ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತೂ ಹಣದಿಂದ ಚುನಾವಣೆ ಮಾಡಲಿಲ್ಲ. ನಮ್ಮ ಬಳಿ ಹಣವಿಲ್ಲ. ಜನರು ಮತ ನೀಡಬೇಕಷ್ಟೇ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಎಚ್ ಪಿ ಸ್ವರೂಪ್ ಅವರ ತಾಯಿ ಲಲಿತಮ್ಮ ಅವರ ಕಣ್ಣೀರು ಹಾಕಿದ್ದಾರೆ(Karnataka Election 2023).
ಹಾಸನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಲಿತಮ್ಮ ಅವರು, ತಮ್ಮ ಪುತ್ರ ಸ್ವರೂಪ್ ಪರವಾಗಿ ಮತಯಾಚನೆ ಮಾಡಿದರು. ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ. ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಸ್ವರೂಪ್ ನಡೆಯುತ್ತಿದ್ದಾನೆ ಎಂದು ಲಲಿತಮ್ಮ ಅವರು ಹೇಳಿದರು.
ಇದನ್ನೂ ಓದಿ: ಸ್ವರೂಪ್ ಬೆನ್ನಿಗೆ ನಿಂತ ಗೌಡರ ಕುಟುಂಬ; ಮುಸ್ಲಿಂ ಮೀಸಲಾತಿ ಮರುಸ್ಥಾಪನೆ ಎಂದ ಎಚ್‌ಡಿಕೆ
ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡರು. ಈಗ ಚುನಾವಣೆ ಮಾಡಲು ಹಣ ಮಾಡಬೇಕು. ನನ್ನ ಮಗನಿಗೆ ಹೇಳಿದೆ ನಿನ್ನ ಬಳಿ ಹಣವಿಲ್ಲ ಅಂತ. ಆದರೂ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದಾನೆ. ಹಾಸನದಲ್ಲಿ ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ಹಾಸನ ಜನತೆ ನನ್ನ ಮಗನಿಗೆ ಆಶೀರ್ವಾದ ಮಾಡಿ. ನನ್ನ ಮಗ ಗೆದ್ದರೆ ನನ್ನ ಪತಿ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಕಣ್ಣೀರಿಟ್ಟರು.