Site icon Vistara News

Karnataka Election : ಪ್ರಚಾರದ ಫೀಲ್ಡಿಗಿಳಿದ ಕಿಚ್ಚ ಸುದೀಪ್‌; ಭರ್ಜರಿ ರೋಡ್‌ ಶೋ, ಹುಚ್ಚೆದ್ದು ಕುಣಿದ ಅಭಿಮಾನಿಗಳು

Actor Kiccha Sudeep Election Campaign

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (C M Basavaraj Bommai) ಅವರ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಪ್ರಚಾರ ಮಾಡುತ್ತೇನೆ ಮತ್ತು ಅವರ ಹೇಳಿದವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದ ಚಿತ್ರನಟ ಕಿಚ್ಚ ಸುದೀಪ್‌ (Kiccha Sudeep) ಅವರ ಭರ್ಜರಿ ರೋಡ್‌ ಶೋ, ಪ್ರಚಾರ ಬುಧವಾರ ಆರಂಭಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ಆಗಮಿಸಿದ ಕಿಚ್ಚ ಅವರು ಆಕರ್ಷಕ ರೋಡ್‌ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು.

ಮೊಳಕಾಲ್ಮೂರಿಗೆ ಆಗಮಿಸಿದ ಕಿಚ್ಚ ಸುದೀಪ್‌ಗೆ ಅಭಿಮಾನಿಗಳ ಮುತ್ತಿಗೆ

ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಅವರು ಮೊಳಕಾಲ್ಮೂರಿಗೆ ಬರುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿದರು. ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಅವರು ಸುದೀಪ್‌ ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದರೆ ಅಭಿಮಾನಿಗಳು ಮುತ್ತಿಗೆ ಹಾಕಿದರು. ಬಳಿಕ ಅವರು ರೋಡ್‌‌ ಶೋನಲ್ಲಿ ಭಾಗವಹಿಸಿದರು.

ಲವ್‌ ಲೆಟರ್‌ ರೇಂಜಿಗೆ ಬರ್ತಿವೆ ಬೆದರಿಕೆ ಪತ್ರಗಳು

ಮೊಳಕಾಲ್ಮೂರಿನ ಬಳಿಕ ಅವರು 12.30ಕ್ಕೆ ದಾವಣಗೆರೆಯ ಜಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಪರ ರೋಡ್‌ ಶೋದಲ್ಲಿ ಭಾಗಿಯಾದರು. ಮಧ್ಯಾಹ್ನ ಮೂರು ಗಂಟೆಗೆ ದಾವಣಗೆರೆಯ ಮಾಯಕೊಂಡದ ಸರ್ಕಾರಿ ಕಾಲೇಜಿನ‌ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ಅಲ್ಲಿ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ನಾಯಕ್ ಪರ ಪ್ರಚಾರ ನಡೆಸುವರು.

ಬಿಜೆಪಿ ಜತೆಗೆ ಆತ್ಮೀಯರ ಪರವಾಗಿಯೂ ಪ್ರಚಾರ ಮಾಡುತ್ತಾರಾ ಸುದೀಪ್‌

4.20ಕ್ಕೆ ದಾವಣಗೆರೆಯ ಉತ್ತರ ಮತ್ತು ದಕ್ಷಿಣದ ಅಭ್ಯರ್ಥಿಗಳಾದ ಲೊಕ್ಕಿಕೇರಿ ನಾಗರಾಜ್ ಹಾಗೂ ಅಜಯ್ ಪರ ರೋಡ್ ಶೋ‌ ಮೂಲಕ ಮತಬೇಟೆ ಮಾಡಲಿದ್ದಾರೆ ಸಂಜೆ ಆರು ಗಂಟೆಗೆ ಸಂಡೂರಿನಲ್ಲಿ ರೋಡ್ ಶೋ ಮೂಲಕ ಶಿಲ್ಪಾ ರಾಘವೇಂದ್ರ ಪರವಾಗಿ ಮತ ಕೇಳಲಿದ್ದಾರೆ.

ಬಿಸಿಲಿದ್ದರೂ ಅಬ್ಬರದ ಪ್ರಚಾರ

ʻʻಇವತ್ತಿನಿಂದ ಪೂರ್ಣ ಪ್ರಮಾಣದ ಪ್ರಚಾರ ಮಾಡುತ್ತೇನೆ. ಪ್ರಚಾರ ಮುಗಿಯುವವರೆಗೂ ನಾನು ಜತೆಗಿರ್ತೇನೆ. ಪ್ಲ್ಯಾನಿಂಗ್ ತುಂಬಾ ಚೆನ್ನಾಗಿ ಮಾಡ್ಕೊಂಡಿದ್ದಾರೆʼʼ ಎಂದು ಬೆಳಗ್ಗೆ ಮನೆಯಿಂದ ಹೊರಡುವ ಮುನ್ನ ಕಿಚ್ಚ ಸುದೀಪ್‌ ಳಿದರು. ʻಎಲ್ಲದಕ್ಕಿಂತ ಹೆಚ್ಚಾಗಿ ರೋಡ್ ಶೋ ಅಂತ ಹೋಗಿ ತುಂಬಾ ವರ್ಷಗಳಾಗಿದೆ, ತುಂಬಾ ದಿನ ಆಗಿದೆ. ಹೆಬ್ಬುಲಿ ಪ್ರಮೋಷನ್‌ ವೇಳೆ ಹೋದಲೆಲ್ಲ ಜನ ತುಂಬ ಪ್ರೀತಿ ತೋರಿಸುತ್ತಿದ್ದಾರೆ. ನನಗೂ ಅವರನ್ನು ಭೇಟಿ ಮಾಡ್ಬೋದು ಅನ್ನುವ ಸ್ವಾರ್ಥವಿದೆʼʼ ಎಂದರು.

ʻʻʻಮಧ್ಯಾಹ್ನ ಬಿಸಿಲು ತುಂಬಾ ಇರುವುದರಿಂದ ಬೇಡ ಅಂತ ಗ್ಯಾಪ್ ಇಟ್ಟಿದ್ದರು. ಆದರೂ ನಾನು ಆದಷ್ಟು ಮಾಡ್ತೀನಿ ಎಂದು ಹೇಳಿದ್ದೇನೆʼʼ ಎಂದರು.

ಇದನ್ನೂ ಓದಿ : Karnataka Election : ದಲಿತರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ: ಸ್ಮೃತಿ ಇರಾನಿ

Exit mobile version