ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಮತದಾನ ಮಾಡಿದವರಿಗೆ ಉಚಿತವಾಗಿ ತಿಂಡಿ, ಪಾನೀಯ ಕೊಡಲು ಹೋಟೆಲ್‌ಗಳಿಗೆ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನು ಮಂಗಳವಾರ ರಾತ್ರಿಯೇ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಮತದಾನ ಜಾಗೃತಿ ಮೂಡಿಸಲು, ಹೆಚ್ಚಿನ ಜನ ಮತ ಹಾಕುವಂತೆ ಉತ್ತೆಜನ ನೀಡಲು ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ಹೋಟೆಲ್ ಸೇರಿ ಹಲವು ಹೋಟೆಲ್‌ಗಳು ಮತದಾನ ಮಾಡಿದವರಿಗೆ ಉಚಿತವಾಗಿ ತಿಂಡಿ, ಜ್ಯೂಸ್ ಕೊಡಲು ತೀರ್ಮಾನಿಸಿದ್ದವು. ಆದರೆ, ಇದನ್ನು ಬಿಬಿಎಂಪಿ ನಿಷೇಧ ಮಾಡಿತ್ತು.
ಇದನ್ನೂ ಓದಿ: Karnataka Election: ಮತ ಹಾಕಿದವರಿಗೆ ಹೋಟೆಲ್‌ಗಳಲ್ಲಿ ಉಚಿತವಾಗಿ ತಿಂಡಿ ಕೊಡಲು ಹೈಕೋರ್ಟ್ ಅನುಮತಿ
ಬಿಬಿಎಂಪಿ ಆದೇಶ ಪ್ರಶ್ನಿಸಿ ಹೋಟೆಲ್ ಮಾಲೀಕರ ಸಂಘ, ನಿಸರ್ಗ ಹೋಟೆಲ್ ಮಾಲೀಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಬಿಎಂಪಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದರೆ, ಇದನ್ನು ಪ್ರಶ್ನಿಸಿ ಬಿಬಿಎಂಪಿ ಮತ್ತೆ ಹೈಕೋರ್ಟ್ ಮೊರೆ ಹೋಗಿದೆ.