Site icon Vistara News

Karnataka Election: ಕುಟುಂಬ ಸಮೇತರಾಗಿ ಬಂದು ಮತ ಹಾಕಿದ ಬಿಎಸ್‌ವೈ: ಬಿಜೆಪಿ ಸರ್ಕಾರ ಸ್ಥಾಪನೆ ವಿಶ್ವಾಸ

karnataka-election: BSY goes ot polling center with family

karnataka-election: BSY goes ot polling center with family

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ (BS Yediyurappa) ಅವರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ್ದಲ್ಲದೆ ವಿಧಾನಸಭಾ ಚುನಾವಣೆಯ (Karnataka Election 2023) ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಶಿಕಾರಿಪುರ (Shikaripura Constituency) ಪಟ್ಟಣದ ಆಡಳಿತಸೌಧದಲ್ಲಿ ಇಡೀ ಕುಟುಂಬ ಜತೆಯಾಗಿ ಮತದಾನ ಮಾಡಿತು.

ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಬಂದರು ಬಿಎಸ್‌ವೈ. ಅವರ ಜತೆ ಕುಟುಂಬದ 8 ಸದಸ್ಯರು ಜತೆಯಾಗಿ ಮತಗಟ್ಟೆಗೆ ಬಂದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ ಬಿಎಸ್‌. ಯಡಿಯೂರಪ್ಪ ಅವರು, ಈ ಬಾರಿ ಸಂಪೂರ್ಣ ಬಹುಮತ ಪಡೆದು ಸರಕಾರ ರಚನೆ ಮಾಡ್ತೇವೆ. ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ಸರಕಾರ ರಚನೆ ಮಾಡೋದೂ ಅಷ್ಟೇ ಸತ್ಯ ಎಂದರು.

ʻʻಎಲ್ಲರ ಆಶೀರ್ವಾದದಿಂದ ವಿಜಯೇಂದ್ರ 40 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ನಡೆಸುತ್ತೇವೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ನಾವು ಹೆಚ್ಚು ಸ್ಥಾನ ಗೆಲ್ಲಲಿದ್ದೇವೆʼʼ ಎಂದು ಹೇಳಿದರು.

ʻʻರಾಜ್ಯದಲ್ಲಿ ಈ ಬಾರಿ 125 ರಿಂದ 130 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಅವರ ಆಶೀರ್ವಾದದಿಂದ ಗೆಲುವು ನಿಶ್ಚಿತʼʼ ಎಂದು ಹೇಳಿದರು.

ಎಲ್ಲರೂ ಮತದಾನ ಮಾಡಿ ಎಂದ ಸಿಎಂ ಬೊಮ್ಮಾಯಿ

ಈ ನಡುವೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 102ರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ ಚಲಾಯಿಸಿದರು. ಪತ್ನಿ, ಮಗ, ಸೊಸೆ ಜತೆಗೆ ಬಂದು ಸಿಎಂ ಮತ ಹಾಕಿದರು.

ಬಳಿಕ ಮಾತನಾಡಿದ ಅವರು, ʻʻನಾನು ಮತದಾನ ಮಾಡಿದ್ದೇನೆ. ಎಲ್ಲರು ಮತದಾನ ಮಾಡಬೇಕು. ತಾವು ಹೊರಗಡೆ ಬನ್ನಿ ಹಕ್ಕನ್ನು ಚಲಾಯಿಸಿ. ರಾಜ್ಯದ ಭವ್ಯ ಭವಿಷ್ಯ ಬರೆಯಲು ಇದು ಮಹತ್ವದ ಚುನಾವಣೆʼʼ ಎಂದರು ಬೊಮ್ಮಾಯಿ.

ʻʻಈ ಚುನಾವಣೆ ಒಂದು ಕಡೆ ಅಭಿವೃದ್ಧಿ ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ. ಕಳೆದ ಸಲ ಅಪವಿತ್ರ ಮೈತ್ರಿ ಮಾಡಿಕೊಂಡು‌ ಸರಕಾರ ನಡೆಸಲು‌ ಆಗದಿದ್ದಾಗ ನಮಗೆ ಅಧಿಕಾರ ಕೊಟ್ಟರುʼʼ ಎಂದು ಹೇಳಿದರು ಬೊಮ್ಮಾಯಿ.

ಇದನ್ನೂ ಓದಿ: Karnataka Election : ಯೋಗ ಬಂದರೆ ನಾನೇ ಸಿಎಂ, ಇಲ್ಲದಿದ್ದರೆ ಆರಾಂ ಎಂದ ಯತ್ನಾಳ್‌

Exit mobile version