Site icon Vistara News

Karnataka Election : ವಿಷದ ಹಾವು ಹೇಳಿಕೆ ನಿಮಗೆ ಶೋಭೆಯಲ್ಲ ಖರ್ಗೆಯವರೇ ಎಂದ ಬಿ.ಎಸ್‌ ಯಡಿಯೂರಪ್ಪ

karnataka-election: Calling Modi as snake is not correct: BSY Suggests Kharge

karnataka-election: Calling Modi as snake is not correct: BSY Suggests Kharge

ರಾಯಚೂರು: ʻʻಮಲ್ಲಿಕಾರ್ಜುನ ಖರ್ಗೆಯವರೇ ನೀವು ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಲು ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಕರೆದಿರಬಹುದು. ಆದರೆ, ಈ ಮಾತು ನಿಮಗೆ ಶೋಭೆ ತರುವಂಥದ್ದಲ್ಲʼʼ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ಅವರು ರಾಯಚೂರು ಜಿಲ್ಲೆಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ಮತ ಯಾಚಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಧಾನ ಮಂತ್ರಿಯನ್ನು ಆ ರೀತಿಯ ಪದ ಬಳಸಿ ಹೀಗಳೆಯಬಾರದಿತ್ತು ಎಂದು ಹೇಳಿದರು.

ʻʻಈ ದೇಶದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ಹೇಳಿದ ಪಾರ್ಟಿ ಬಿಜೆಪಿʼʼ ಎಂದು ಹೇಳಿದ ಬಿ.ಎಸ್‌. ಯಡಿಯೂರಪ್ಪ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗುʼʼ ಎಂದು ನುಡಿದರು.

ʻʻರಾಹುಲ್ ಗಾಂಧಿ ಎಷ್ಟೇ ದೊಡ್ಡ ನಾಯಕ ಎಂದು ನೀವು ತಿಳಿದುಕೊಂಡರೂ ಯಾವತ್ತಾದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಸಮಾನ ಆಗಲ್ಲ ಸಾಧ್ಯನಾ? ಉತ್ತರ ಪ್ರದೇಶದಲ್ಲಿ ನಾಲ್ಕು ಸೀಟು ಗೆದ್ದ ಕಾಂಗ್ರೆಸ್ ಬಿಜೆಪಿಗೆ ಯಾವತ್ತಾರೂ ಸಮಾನ ಆಗಲು ಸಾಧ್ಯನಾ?ʼʼ ಎಂದು ಅವರು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಬಿಜೆಪಿಯ ಸಾಧನೆಗಳನ್ನು ವಿವರಿಸಿದ ಅವರು, ರಾಜ್ಯದ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಡಲು ತೀರ್ಮಾನ ಮಾಡಿದ್ದು ಯಡಿಯೂರಪ್ಪ ಎಂದು ನೆನಪಿಸಿದರು. ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳೇ ಪಕ್ಷಕ್ಕೆ ಮತ ತರುತ್ತವೆ ಎಂದು ನುಡಿದರು.

ಕಾಂಗ್ರೆಸ್‌ ಪಕ್ಷ ತನ್ನನ್ನು ಬಲವಂತವಾಗಿ ಹುದ್ದೆಯಿಂದ ಇಳಿಸಲಾಯಿತು, ನಾನು ಕಣ್ಣೀರು ಹಾಕಿಕೊಂಡು ಹುದ್ದೆ ಬಿಟ್ಟುಕೊಟ್ಟೆ ಎಂದೆಲ್ಲ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ʻʻನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಂತ ನಿರ್ಧಾರದಿಂದ ರಾಜೀನಾಮೆ ‌ನೀಡಿದ್ದೇನೆ. ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದಲೇ ಈ ತೀರ್ಮಾನ ಮಾಡಿದ್ದೇನೆʼʼ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : Modi in Karnataka : ತನ್ನ ವಿರುದ್ಧದ 91 ಬೈಗುಳಗಳ ಲೆಕ್ಕ ಇಟ್ಟ ಮೋದಿ; ಮೊದಲ ದಿನ 9 ಟಾರ್ಗೆಟ್‌

ಪುರುಷರಂತೆ ಮಹಿಳೆಯರು ಸ್ವಂತ ಕಾಲ ಮೇಲೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ ಎಂದು ಹೇಳಿದರು.

ಶಿಕಾರಿಪುರಕ್ಕೆ ಹೋಗುವುದು ಚುನಾವಣೆ ಹಿಂದಿನ ದಿನ

ʻʻನನ್ನ ಮಗ ವಿಜಯೇಂದ್ರ ಶಿಕಾರಿಪುರದಲ್ಲಿ‌‌ ಚುನಾವಣೆಗೆ ನಿಂತಿದ್ದಾನೆ. ಆದರೆ ನಾನು ಅಲ್ಲಿ ಹೋಗದೇ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಚುನಾವಣೆ ಹಿಂದಿನ ದಿನ ಮಾತ್ರ ನಾನು ಅಲ್ಲಿಗೆ ಹೋಗುತ್ತೇನೆ. ವಿಜಯೇಂದ್ರ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ತಾನೆʼʼ ಎಂದು ವಿಶ್ವಾಸದಿಂದ ಹೇಳಿದರು ಬಿ.ಎಸ್‌. ಯಡಿಯೂರಪ್ಪ.

ಶ್ರುತಿಗೆ ಬಾಳೆ ಹಣ್ಣು ಕೊಟ್ಟು ಉಪಚರಿಸಿದ ಬಿಎಸ್‌ವೈ

ಬಿ.ವೈ. ವಿಜಯೇಂದ್ರ ಅವರು ನಾಮಪತ್ರ ಹಾಕುವ ದಿನ ರೋಡ್‌ ಶೋ ನಡೆಸುವ ವೇಳೆ ಬಿ.ಎಸ್‌. ಯಡಿಯೂರಪ್ಪ ಅವರು ಚಿತ್ರನಟಿ ಶ್ರುತಿ ಅವರ ಕೆನ್ನೆ ಹಿಂಡಿ ಸುದ್ದಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ಅವರು ಲಿಂಗಸುಗೂರಿನ ಕಾರ್ಯಕ್ರಮದಲ್ಲಿ ತಿನ್ನಲು ಬಾಳೆಹಣ್ಣು ಕೊಟ್ಟು ಉಪಚರಿಸಿದರು.

ಕಾರ್ಯಕರ್ತರು ಬಾಳೆ ಹಣ್ಣು ತಂದುಕೊಟ್ಟಾಗ ಬಿಎಸ್‌ವೈ ಅವರು ತಾನು ತೆಗೆದುಕೊಳ್ಳುವ ಮೊದಲು ಶ್ರುತಿ ಅವರಿಗೆ ಕೊಟ್ಟು ಉಪಚರಿಸಿದರು.

Exit mobile version