Site icon Vistara News

Karnataka Election: ಕಾಂಗ್ರೆಸ್‌ಗೆ ಪಾಟಿಸವಾಲು; ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

Shobha Karandlaje

Shobha Karandlaje

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಕಾವಿನ ಜತೆ ಬಜರಂಗದಳ ನಿಷೇಧ ವಿವಾದದ ಕಾವು ಕೂಡ ಜಾಸ್ತಿಯಾಗಿದೆ. ಬಜರಂಗದಳದ ನಿಷೇಧದ ಕುರಿತು ಕಾಂಗ್ರೆಸ್‌ ಪ್ರಸ್ತಾಪ, ಬಜರಂಗದಳದವರಿಗೆ ಹನುಮಾನ್‌ ಚಾಲೀಸಾ ಏನು ಗೊತ್ತು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಪ್ರಶ್ನೆಯನ್ನು ಬಜರಂಗದಳ ಸೇರಿ ಹಿಂದು ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ ಪಠಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಲಾಗಿದೆ.

ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ರಾಮನಗರ, ಚಾಮರಾಜನಗರ ಸೇರಿ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಬಿಜೆಪಿ ಮುಖಂಡರು, ಬಜರಂಗದಳದ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸೇರಿ ಹಿಂದು ಸಂಘಟನೆಗಳ ಕಾರ್ಯಕರ್ತರು ಹನುಮಾನ್‌ ಚಾಲೀಸಾವನ್ನು ಪಠಿಸಿದರು. ಉಡುಪಿಯ ಸಾಲಿಗ್ರಾಮದ ಶ್ರೀ ಆಂಜನೇಯ ದೇವಳದ ಎದುರು, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಂಜನೇಯ ದೇವಳದಲ್ಲಿ ಹನುಮಾನ್‌ ಚಾಲೀಸಾ ಪಠಿಸಲಾಯಿತು.

ಶೋಭಾ ಕರಂದ್ಲಾಜೆ ಹನುಮಾನ್‌ ಚಾಲೀಸಾ ಪಠಣ

ಇದನ್ನೂ ಓದಿ: Karnataka Election: ಬಜರಂಗದಳ ನಿಷೇಧ ಭರವಸೆ; ಒಂಟಿಯಾದ್ರಾ ಡಿಕೆಶಿ? ಉಳಿದ ನಾಯಕರಿಂದೇಕೆ ಸಿಗುತ್ತಿಲ್ಲ ಬೆಂಬಲ?

ಗಣ್ಯರಿಂದ ಹನುಮಾನ್‌ ಚಾಲೀಸಾ ಪಠಣ

ಬೆಂಗಳೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರವ ಶ್ರೀರಾಮ ದೇವಸ್ಥಾನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹನುಮಾನ್‌ ಚಾಲೀಸಾ ಪಠಿಸಿದರು. ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಸಾಥ್‌ ನೀಡಿದರು.

ಅದರಲ್ಲೂ, ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಬಳಿ ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ್‌ ಸಂಬರ್ಗಿ ಸೇರಿ ಹಿಂದು ಸಂಘಟನೆಗಳ ಹಲವರು ಹನುಮಾನ್‌ ಚಾಲೀಸಾ ಪಠಿಸಿದರು.

Exit mobile version