Site icon Vistara News

Karnataka Election : ಅತಂತ್ರ ಪ್ರಶ್ನೆಯೇ ಇಲ್ಲ, ಬಹುಮತ ಗ್ಯಾರಂಟಿ; ಸವದತ್ತಿ ಎಲ್ಲಮ್ಮನ ದರ್ಶನ ಮಾಡಿದ ಬೊಮ್ಮಾಯಿ

CM Basavaraja Bommai visits savadati yellamma temple

CM Basavaraja Bommai visits savadati yellamma temple

ಹುಬ್ಬಳ್ಳಿ: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಅತಂತ್ರ ಫಲಿತಾಂಶ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆಯ ವಿಚಾರದಲ್ಲಿ ನನಗೆ ಸಹಮತವಿಲ್ಲ. ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai).

ಹುಬ್ಬಳ್ಳಿಯ ಅವರ ಮನೆಯ ಬಳಿ ಮಾಧ್ಯಮದವರ ಜತೆ ಅವರು ಮಾತನಾಡಿದರು. ಬಳಿಕ ಸವದತ್ತಿ ಎಲ್ಲಮ್ಮನ ದೇವಸ್ಥಾನಕ್ಕೂ ಭೇಟಿ ನೀಡಿದರು. ಮತದಾನದ ಬಳಿಕ ಒಂದಿಷ್ಟು ರಿಲ್ಯಾಕ್ಸ್‌ ಆಗಿದ್ದರೂ ಬಿಜೆಪಿ ಪಡೆಯಬಹುದಾದ ಸ್ಥಾನ, ಮುಂದಿನ ಸರ್ಕಾರದ ವಿಚಾರದಲ್ಲಿ ಸಾಕಷ್ಟು ತಲೆನೋವಿನ ಸಂಗತಿಗಳು ಅವರನ್ನು ಕಾಡುತ್ತಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಚಾರದಿಂದ ನಮಗೆ ಪ್ಲಸ್ ಆಗಿದೆ. ಇದು ನಾವು ಸ್ಪಷ್ಟ ಬಹುಮತ ಪಡೆಯಲು ಸಹಕಾರಿ ಆಗಲಿದೆ ಎಂದಿದ್ದಾರೆ ಬೊಮ್ಮಾಯಿ.

ಸವದತ್ತಿ ಯೆಲ್ಲಮ್ಮ ದೇವಸ್ಥಾನದಲ್ಲಿ ಸಿಎಂ ಬೊಮ್ಮಾಯಿ

ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ನಿಮ್ಮ ಗೇಮ್‌ ಪ್ಲ್ಯಾನ್‌ ಏನು ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಲು ನಿರಾಕರಿಸಿದರು. ಅತಂತ್ರ ಎನ್ನುವ ವಿಚಾರವೇ ಇಲ್ಲ ಎಂದರು ಬಸವರಾಜ ಬೊಮ್ಮಾಯಿ. ʻʻನಾನು 150 ಸೀಟು ಅಂತ ಎಲ್ಲೂ ಹೇಳಿಲ್ಲ. ಆದರೆ ಬಹುಮತ ಅಂತ ಹೇಳಿದ್ದೆ. ಈಗಲೂ ಅದೇ ಹೇಳಿಕೆ ಬದ್ಧನಾಗಿದ್ದೇನೆʼʼ ಎಂದರು.

ಮತದಾನೋತ್ತರ ಸಮೀಕ್ಷೆ ಉಲ್ಟಾ ಎಂದ ಸಿಎಂ

ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಪ್ರಧಾನಿ ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.

ಶಿಗ್ಗಾಂವಿ ಜನತೆಯ ಪ್ರೀತಿಗೆ ಋಣಿ ಎಂದ ಮುಖ್ಯಮಂತ್ರಿ

ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತರ, ಅಪ್ರಚಾರ ಮಾಡಿದರು. ಆದರೆ ಅದು ನಿನ್ನೆಗೆ ಮುಗಿದಿದೆ. ನಾನು ಶಿಗ್ಗಾಂವಿಯಲ್ಲಿ ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ ಎಂದರು.

ಸವದತ್ತಿ ಎಲ್ಲಮ್ಮನಿಗೆ ಪೂಜೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ ಪಾಟೀಲ, ಮುಖ್ಯಮಂತ್ರಿಯವರ ಧರ್ಮಪತ್ನಿ ಚನ್ನಮ್ಮ ಬೊಮ್ಮಾಯಿ ಜೊತೆಯಲಿದ್ದರು.

ಇದನ್ನೂ ಓದಿ : Karnataka Election 2023 : ಕುಮಾರಸ್ವಾಮಿ ಹೋಗಿದ್ದು, ಸಿಂಗಾಪುರಕ್ಕೋ ದೆಹಲಿಗೋ?

Exit mobile version