Site icon Vistara News

Karnataka Election: ಯತ್ನಾಳ್, ಪ್ರಿಯಾಂಕ್‌ ಖರ್ಗೆಗೆ ಚುನಾವಣೆ ಆಯೋಗ ಶೋಕಾಸ್‌ ನೋಟಿಸ್‌

yatnal priyank

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಪ್ರಚಾರದ ಕಣದಲ್ಲಿ ನಾಲಿಗೆ ಹರಿಬಿಟ್ಟಿರುವ ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್‌​​ ಮತ್ತು ಕಾಂಗ್ರೆಸ್ ಶಾಸಕ ಪ್ರಿಯಾಂಕ್​​ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್​ ನೋಟಿಸ್​ ನೀಡಲಾಗಿದೆ.

ಇಬ್ಬರು ನಾಯಕರು ಪ್ರತಿಪಕ್ಷಗಳ ಮುಖಂಡರ ಕುರಿತು ಬಳಸಿರುವ ಪದಗಳ ಬಗ್ಗೆ ಪರಸ್ಪರ ದೂರುಗಳನ್ನು ಆಯೋಗದ ಮುಂದೆ ದಾಖಲಿಸಲಾಗಿತ್ತು. ಭಾಷಣದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ʼನಾಲಾಯಕ್​ ಬೇಟಾʼ ಎಂಬ ಪದವನ್ನು ಪ್ರಿಯಾಂಕ್‌ ಖರ್ಗೆ ಬಳಕೆ ಮಾಡಿದ್ದರು. ಬಸಗೌಡ ಯತ್ನಾಳ್‌ ಅವರು ಸೋನಿಯಾ ಗಾಂಧಿ ಅವರ ಕುರಿತು ʼವಿಷಕನ್ಯೆʼ ಎಂಬ ಪದವನ್ನು ಬಳಕೆ ಮಾಡಿದ್ದರು. ಇದಾದ ಬಳಿಕ ರಾಹುಲ್‌ ಗಾಂಧಿ ಅವರ ಬಗ್ಗೆ ʼಅರೆಹುಚ್ಚʼ ಎಂದು ನಿಂದಿಸಿದ್ದರು.

ಇದೀಗ ಇವರಿಬ್ಬರ ಬಗ್ಗೆಯೂ ಬಿಜೆಪಿಗರು ಹಾಗೂ ಕಾಂಗ್ರೆಸಿಗರು ದೂರು ನೀಡಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಆಯೋಗ ಇಬ್ಬರಿಗೂ ನೋಟಿಸ್‌ ನೀಡಿದೆ.

ಇದನ್ನೂ ಓದಿ: Karnataka Election: ರಾಹುಲ್‌ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ; ಮತ್ತೆ ನಾಲಿಗೆ ಹರಿಬಿಟ್ಟ ಯತ್ನಾಳ್‌

Exit mobile version