ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election) ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹಲವು ಭರವಸೆಗಳ ಮೂಲಕ ಮತದಾರರ ಬೆಂಬಲ ಸೆಳೆಯಲು ಯತ್ನಿಸುತ್ತಿದೆ. ಹಾಗೆಯೇ, ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧವೂ ಹರಿಹಾಯುತ್ತಿದೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, “ಕಾಂಗ್ರೆಸ್ ವಿನಾಶದ ಅಂಚಿನಲ್ಲಿದೆ. ಅದು ಏನೇ ಭರವಸೆ ನೀಡಿದರೂ ಜನ ನಂಬುವುದಿಲ್ಲ” ಎಂದು ಟೀಕಿಸಿದರು.
“ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹೋದಲೆಲ್ಲ ಕಾಂಗ್ರೆಸ್ ಸೋಲೇ ಗತಿ. ಪ್ರಿಯಾಂಕಾ, ರಾಹುಲ್ ಎಷ್ಟೇ ಚುನಾವಣಾ ಪ್ರಚಾರ ಮಾಡಿದರೂ ಪೂರ್ತಿಯಾಗಿ ವಿನಾಶವಾಗಲಿದೆ. ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿಗಳನ್ನು ಜನರು ನಂಬುವದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಉತ್ತರ ಪ್ರದೇಶ ಚುನಾವಣೆಯ ನೇತೃತ್ವವ ವಹಿಸಿದ್ದ ಪ್ರಿಯಾಂಕಾ, ಸುಳ್ಳಿನ ಗ್ಯಾರಂಟಿ ನೀಡಿದ್ದರು. ಆದರೆ, ಉತ್ತರಪ್ರದೇಶದ 403 ಸ್ಥಾನದಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದರು. ಈಗಾಗಲೇ ಉತ್ತರಾಖಂಡ, ಗೋವಾ, ಅಸ್ಸಾಂ, ಉತ್ತರಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಅಂತ್ಯ ಆಗಿದೆ” ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಅರುಣ್ ಸಿಂಗ್ ಟೀಕಾಸ್ತ್ರ
“ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಮುಗಿದುಹೋದ ಅಧ್ಯಾಯವಾಗಿದೆ. ಅದು ಯಾವುದೇ ಘೋಷಣೆ ಮಾಡಿದರೂ ಪೂರ್ಣಗೊಳಿಸುವುದಿಲ್ಲ. ಬಿಜೆಪಿ ಬಡವರ ಕಲ್ಯಾಣ, ಮಧ್ಯಮ ವರ್ಗದವರ ಏಳಿಗೆಗಾಗಿ ಭರವಸೆ ನೀಡಿದೆ. ಅರ್ಧ ಲೀಟರ್ ನಂದಿನಿ, ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಕಾಂಗ್ರೆಸ್ ಘೋಷಣೆಗಳು ಬಜೆಟ್‌ಗೆ ವರ್ಕೌಟ್ ಆಗುವುದಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Elections : ಲಕ್ಷ್ಮಣ ಸವದಿ ದೊಡ್ಡ ತಪ್ಪು ಮಾಡಿದಾರೆ, ಮುಂದೆ ಪಶ್ಚಾತ್ತಾಪಪಡುವ ಕಾಲ ಬರಲಿದೆ ಎಂದ ಅರುಣ್ ಸಿಂಗ್
“ಕಾಮನ್ ಸಿವಿಲ್ ಕೋರ್ಟ್ ಸ್ಥಾಪನೆಗೆ ಬಿಜೆಪಿ ಘೋಷಣೆ ಮಾಡುತ್ತದೆ. ಕಾಮನ್ ಸಿವಿಲ್ ಕೋರ್ಟ್ ಸ್ಥಾಪನೆಗೆ ಬಿಜೆಪಿ ಕಟಿಬದ್ಧವಾಗಿದೆ. ಈಗಾಗಲೇ ಉತ್ತರಾಖಂಡದಲ್ಲಿ ಸಮಿತಿ ರಚನೆ ಮಾಡಿದೆ. ಕೋರ್ಟ್ ರಚನೆ ಕೂಡ ಪ್ರಕ್ರಿಯೆ ಆರಂಭಾಗಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುತ್ತದೆಯೋ, ಅಲ್ಲೆಲ್ಲ ಕಾಮನ್ ಸಿವಿಲ್ ಕೋರ್ಟ್ ಸ್ಥಾಪನೆ ಮಾಡಲಾಗುತ್ತದೆ” ಎಂದು ಹೇಳಿದರು.