Site icon Vistara News

Karnataka Election: 23 ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್: ಭಾವನಾ ವಿಫಲ ಪ್ರಯತ್ನ; ಅಖಂಡ ಇನ್ನೂ ಅತಂತ್ರ

Bhavana congress karnataka election congress gave away twenty three constituencies to new faces

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎರಡು ಹಂತದಲ್ಲಿ 166 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌, 23 ಹೊಸ ಮುಖಗಳಿಗೆ ಅವಕಾಶ ನೀಡಿದೆ.

ಈ 23 ಹೆಸರುಗಳಲ್ಲಿ ಅನೇಕ ಯುವಕರಿದ್ದು, ಕೆಲವರು ಅನೇಕ ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತಿದ್ದರೂ ಅವಕಾಶ ಸಿಗದಿದ್ದ ಹಿರಿಯರೂ ಇದ್ದಾರೆ. ಒಟ್ಟಾರೆ ಈಗಿರುವ ಹಾಗೂ ಪದೇದೆ ಸ್ಪರ್ಧೆ ಮಾಡಿ ಸೋಲುವುದನ್ನೇ ಅಭ್ಯಾಸ ಮಾಡಿಕೊಂಡಿರುವವವರಿಗೆ ಟಿಕೆಟ್‌ ತಪ್ಪಿಸಲಾಗಿದೆ.

ಹೊಸ ಮುಖಗಳಿಗೆ ಟಿಕೆಟ್‌ ನೀಡಿರುವ ಕ್ಷೇತ್ರಗಳು ಹೀಗಿವೆ:

ಭಾವುಟ ಹಾರಿಸಲು ಸಿದ್ಧತೆ

ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸಲು ಅನೇಕ ಕ್ಷೇತ್ರಗಳಲ್ಲಿ ತಯಾರಿ ನಡೆದಿದೆ.

ಧಾರವಾಡದಲ್ಲಿ ವಿನಯ್ ಕುಲಕರ್ಣಿಗೆ ಟಿಕೆಟ್‌ ನೀಡಲಾಗಿದ್ದು, ಇಸ್ಮಾಯಿಲ್ ತಮಟಗಾರ ಅಸಮಾಧಾನಗೊಂಡಿದ್ದಾರೆ. ಕಲಘಟಗಿಯಲ್ಲಿ ಸಂತೋಷ ಲಾಡ್ ಟಿಕೆಟ್‌ ಪಡೆದಿದ್ದು, ನಾಗರಾಜ್ ಛಬ್ಬಿಗೆ ತಪ್ಪಿದೆ. ಹೊಳಲ್ಕೆರೆಯಲ್ಲಿ ಎಚ್ ಆಂಜನೇಯ ಅವಕಾಶ ಪಡೆದಿದ್ದರೆ ಸವಿತಾ ರಘು‌ ನಿರಾಶರಾಗಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಎನ್‌.ವೈ. ಗೋಪಾಲಕೃಷ್ಣ ಟಿಕೆಟ್‌ ಪಡೆದರೆ ಯೋಗೇಶ್ವರ್ ‌ಬಾಬುಗೆ ಟಿಕೆಟ್‌ ತಪ್ಪಿದೆ. ಚಿತ್ರದುರ್ಗದಲ್ಲಿ ವೀರೇಂದ್ ಟಿಕೆಟ್‌ ಪಡೆದಿದ್ದಾರೆ, ರಘು ಆಚಾರ್ ಅಸಮಾಧನಗೊಂಡಿದ್ದಾರೆ. ನರಗುಂದದಲ್ಲಿ ಬಿ.ಆರ್. ಯಾವಗಲ್ ಸಫಲರಾದರೆ, ಸಂಗಮೇಶ ಕೊಳ್ಳಿ‌ ನಿರಾಸೆ ಅನುಭವಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಸಂತಸಗೊಂಡಿದ್ದರೆ ಮಂಜುನಾಥ್ ಗೌಡ ಅವಕಾಶ ವಂಚಿತರಾಗಿದ್ದಾರೆ. ಬೇಲೂರಿನಲ್ಲಿ ಬಿ. ಶಿವರಾಮ್ ಟಿಕೆಟ್‌ ಪಡೆದಿದ್ದಾರೆ. ರಾಜಶೇಖರ ನಿರಾಶರಾಗಿದ್ದಾರೆ.

ಕೋನರೆಡ್ಡಿ, ಭಾವನಾ ಅತಂತ್ರ

ನವಲಗುಂದ ವಿಧಾನ ಸಭಾ ಕ್ಷೇತ್ರದ ಟಿಕೆಟನ್ನು ಕಾಂಗ್ರೆಸ್‌ ಅಂತಿಮಗೊಳಿಸದೇ ಇರುವುದರಿಂದ, ಜೆಡಿಎಸ್‌ನಿಂದ ಆಗಮಿಸಿದ್ದ ಕೋನರಡ್ಡಿ ಅತಂತ್ರರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಲು ಕೋನರೆಡ್ಡಿ ಬಂದಿದ್ದರು. ಆದರೆ ಇಬ್ಬರ ನಡುವೆ ಫೈಟ್‌ ಇರುವುದರಿಂದ ಕ್ಷೇತ್ರಕ್ಕೆ ಇನ್ನೂ ಟಿಕೆಟ್‌ ಘೊಷಣೆ ಮಾಡಿಲ್ಲ.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, 2018ರ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಆಗಮಿಸಿ ಮತ್ತೆ ಕಾಂಗ್ರೆಸ್‌ಗೆ ಹೋಗಿದ್ದ ನಟಿ ಭಾವನಾಗೆ ಟಿಕೆಟ್‌ ತಪ್ಪಿದೆ. ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಭಾವನಾ ಟಿಕೆಟ್‌ ಕೇಳಿದ್ದರು. ಆದರೆ ಸಚಿವ ಎಸ್‌.ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ಆಗಮಿಸಬಹುದು ಎಂದು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿರಲಿಲ್ಲ. ಇದೀಗ ಎಸ್‌. ಬಾಲರಾಜ್‌ ಗೌಡ ಟಿಕೆಟ್‌ ಗಿಟ್ಟಿಸಿದ್ದು, ಭಾವನಾ ಏನು ಮಾಡುತ್ತಾರೆ ನೋಡಬೇಕಿದೆ.

ಅಖಂಡ ಶ್ರೀನಿವಾಸ ಮೂರ್ತಿ ಅತಂತ್ರರಾಗಿದ್ದಾರೆ. ಪುಲಿಕೇಶಿನಗರ ಕ್ಷೇತ್ರ ಎಸ್‌ಸಿ ಮೀಸಲಾಗಿದ್ದರೂ ಅದರಲ್ಲೂ ಎಡಗೈ ಬಲಗೈ ಫೈಟ್‌ ಆರಂಭವಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಬೋವಿ ಸಮುದಾಯಕ್ಕೆ ಸೇರಿದವರು. ಆದರೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರುಗಳು ಎಡಗೈ ಸಮುದಾಯಕ್ಕೆ ನೀಡಬೇಕು ಎನ್ನುತ್ತಿದ್ದಾರೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ 90 ಸಾವಿರ ಮತಗಳ ಅಂತರದಿಂದ ಗೆದ್ದು, ರಾಜ್ಯದಲ್ಲೆ ಅತ್ಯಧಿಕ ಮತದ ಅಂತರದಿಂದ ಗೆದ್ದಿದ್ದ ಶಾಸಕ ಈಗ ಅತಂತ್ರರಾಗಿದ್ದಾರೆ.

ಇದನ್ನೂ ಓದಿ: Congress ticket : ಕೆಜಿ ಹಳ್ಳಿ ಡಿಜೆಹಳ್ಳಿ ದಳ್ಳುರಿಯಲ್ಲಿ ಮನೆಯನ್ನೇ ಕಳೆದುಕೊಂಡ ಅಖಂಡ ಟಿಕೆಟ್‌ ಹೋಲ್ಡ್‌; ದಾಖಲೆ ಗೆಲುವಿದ್ದರೂ ವೇಟಿಂಗ್‌

Exit mobile version