Site icon Vistara News

Karnataka Election : ಕಾಂಗ್ರೆಸ್‌ ಕೈ ಖಾಲಿಯಾಗಿದೆ, ಪ್ರಿಯಾಂಕ ಗಾಂಧಿ ಕೈಯಲ್ಲಿರುವುದೂ ದೋಸೆ ಮಾತ್ರ ಎಂದ ಅಣ್ಣಾಮಲೈ

karnataka election congress has nothing today priyanka gandhi have dosa in her hand chides annamalai

karnataka election congress has nothing today priyanka gandhi have dosa in her hand chides annamalai

ಶಿವಮೊಗ್ಗ: ʻʻಇವತ್ತು ಕಾಂಗ್ರೆಸ್ ಕೈಯಲ್ಲಿ ಏನೂ ಇಲ್ಲ. ಜನರಿಗೆ ಬೋರ್‌ ಆಗದಿರಲಿ ಎಂದು ಆಗಾಗ ರಾಹುಲ್‌ ಗಾಂಧಿಯನ್ನು ಕರ್ಕೊಂಡು ಬರ್ತಾರೆ, ಪ್ರಿಯಾಂಕಾ ಗಾಂಧಿನ ಕರ್ಕೊಂಡು ಬರ್ತಾರೆ. ಆಮೇಲೆ ಸೋನಿಯಾ ಗಾಂಧಿ ಬರ್ತಾರೆ. ಕಾಂಗ್ರೆಸ್‌ ಭಾರಿ ಭರವಸೆ ಇಟ್ಟಿರುವ ಪ್ರಿಯಾಂಕಾ ಗಾಂಧಿ ಅವರ ಕೈಯಲ್ಲೂ ಏನೂ ಇಲ್ಲ, ಬರೀ ದೋಸೆ ಇದೆ ಅಷ್ಟೆʼʼ- ಹೀಗೆಂದು ಲೇವಡಿ ಮಾಡಿದ್ದಾರೆ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ.

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, 30 ವರ್ಷದಿಂದ ಅದೇ ಭಾಷಣ, 30 ವರ್ಷದಿಂದ ಅದೇ ನಾಯಕರು ಮತ್ತು 30 ವರ್ಷದಿಂದ ಅದೇ ಸುಳ್ಳು ಕೇಳ್ತಿದ್ದೀವಿ. ಇದೆಲ್ಲವೂ ಕೊನೆಯಾಗಬೇಕು ಎಂದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ನಡೆಯುತ್ತಿರುವುದು ಚನ್ನಬಸಪ್ಪ (ಬಿಜೆಪಿ ಅಭ್ಯರ್ಥಿ) ಅವರ ಚುನಾವಣೆಯಲ್ಲ. ಇದು ಇದು 35 ವರ್ಷ ಒಳಗಿನ ಯುವಕರ ಚುನಾವಣೆ ಎಂದರು.

ʻʻಬಿಜೆಪಿಯದ್ದು ಡಬಲ್ ಎಂಜಿನ್‌ ಸರ್ಕಾರ. ಆದರೆ ಕಾಂಗ್ರೆಸ್‌ನದ್ದು ರಿವರ್ಸ್ ಎಂಜಿನ್ ಸರ್ಕಾರ. ಬಿಜೆಪಿ ಮಾಡಿದ್ದನ್ನೆಲ್ಲ ಹಿಂಪಡೆಯುವುದೇ ಇವರ ಕೆಲಸ. ಹಾಗಿದ್ದರೆ ಬಿಜೆಪಿ ಕೊಟ್ಟ ಒಳ ಮೀಸಲಾತಿ ಇವರು ರದ್ದು ಮಾಡ್ತಾರಾ?ʼʼ ಎಂದು ಪ್ರಶ್ನಿಸಿದರು.

ʻʻನಮ್ಮ ಪಕ್ಷ ಇವತ್ತು ಆರೋಗ್ಯವಾಗಿದೆ. ಹಲವು ಮಂದಿಗೆ ಒಳ್ಳೆಯ ಕೆಲಸ ಮಾಡಿದೆ. ಮೋದಿ ಅವರು ಪ್ರಧಾನಿಯಾದ ಮೇಲೆ ರಾಜಕೀಯ ಚಿತ್ರಣವೇ ಬದಲಾಗಿದೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ವಿದೇಶಗಳು ನಮ್ಮ ದೇಶವನ್ನು ನೋಡುವ ರೀತಿಯೇ ಬೇರೆ ಇತ್ತು. ಭ್ರಷ್ಟಾಚಾರದ ದೇಶ, ಜಾತಿ ಆಧಾರದ ಮೇಲೆ ರಾಜಕಾರಣ ನಡೆಯುತ್ತದೆ ಅಂತಿದ್ದರು. ಮೋದಿ ಅಧಿಕಾರಕ್ಕೆ ಬಂದ ನಂತರ ಈ ಧೋರಣೆ ಬದಲಾಯಿತು. ದೇಶದಲ್ಲಿದ್ದ ನಕ್ಸಲ್‌ ಸಮಸ್ಯೆ ನಿವಾರಣೆಯಾಗಿದೆ. ದೇಶದಲ್ಲಿ ಶಾಂತಿ ನೆಲೆಸಿದೆ. ಈಗ ಇಂಡಿಯಾ ಸೇಫ್ ಕಂಟ್ರಿ ಎಂಬ ಗೌರವಕ್ಕೆ ಪಾತ್ರವಾಗಿದೆʼʼ ಎಂದು ಅಣ್ಣಾಮಲೈ ಹೇಳಿದರು.

ʻʻಮುಂದಿನ ದಿನಗಳಲ್ಲಿ ನಮ್ಮ ದೇಶ ಸಂಪೂರ್ಣ ಹಿಂದುತ್ವದ ದೇಶ ಆಗಲಿದೆ. ಹಿಂದುತ್ವ ಶಬ್ದ ಬರುತ್ತಿದ್ದ ಹಾಗೇ ಕಾಂಗ್ರೆಸ್ ನವರಿಗೆ ಬಿಪಿ‌ ಹೆಚ್ಚಾಗುತ್ತದೆ. ಯಾಕೆಂದರೆ ಅವರಿಗೆ ಹಿಂದುತ್ವದ ಅರ್ಥ ಗೊತ್ತಿಲ್ಲʼʼ ಎಂದು ಹೇಳಿದರು ಅಣ್ಣಾಮಲೈ.

ಕಾಂಗ್ರೆಸ್‌ ನಾಯಕರಿಗೆ 30-40 ವರ್ಷದಿಂದ ಕ್ಷೇತ್ರವನ್ನೇ ಬದಲಾಯಿಸಲು ಆಗಿಲ್ಲ. ಇನ್ನು ರಾಜ್ಯವನ್ನು ಹೇಗೆ ಬದಲಾವಣೆ ಮಾಡ್ತೀರಾ ಎಂದು ಪ್ರಶ್ನಿಸಿದರು ಅಣ್ಣಾಮಲೈ. ಶಿವಮೊಗ್ಗ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮೋದಿ ಜನಪ್ರಿಯತೆ ತಡೆಯಲು ಆಗಲ್ಲ ಎಂದ ಈಶ್ವರಪ್ಪ

ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರನ್ನು ವಿಷ ಸರ್ಪ ಅಂದಿದ್ದಾರೆ. ವಿಶ್ವನಾಯಕನ ಜನಪ್ರಿಯತೆ ತಡೆಯಲು ಆಗದೆ ಹೀಗೆಲ್ಲ ಮಾತನಾಡಿದ್ದಾರೆ ಎಂದರು.

ʻʻಕೋವಿಡ್‌ಗೆ ಅಮೃತ ಕೊಟ್ಟಂತಹ ನಾಯಕ ನರೇಂದ್ರ ಮೋದಿ. ನಿಮ್ಮ ಕಾಂಗ್ರೆಸ್ ಸರಕಾರ ಸತ್ತು ಹೋಗಿದೆ. ಕಾಂಗ್ರೆಸ್ ಕೊಳೆತು, ಕೊಳೆತು ವಿಷವಾಗಿದೆʼʼ ಎಂದು ಮೂದಲಿಸಿದರು.

ಇದನ್ನೂ ಓದಿ : Karnataka Election 2023: ಶಿವಮೊಗ್ಗ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ! ಅರ್ಧಕ್ಕೆ ನಿಲ್ಲಿಸಿದ ಈಶ್ವರಪ್ಪ

Exit mobile version