ಬೆಂಗಳೂರು: ಈಗಾಗಲೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಎರಡು ಸಭೆಗಳನ್ನು ನಡೆಸಿರುವ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿಯನ್ನು ಯುಗಾದಿ ದಿನವಾದ ಬುಧವಾರ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮಾಜಿ ಸಚಿವ ಹಾಗೂ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಕೆ.ಜೆ. ಜಾರ್ಜ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಜಾರ್ಜ್, ಸಿದ್ದರಾಮಯ್ಯನವರಿಗೆ ಎಲ್ಲಾ ಕಡೆಯುತ್ತಿದ್ದಾರೆ. ಕೋಲಾರದಿಂದ ಸ್ಪರ್ಧೆ ಮಾಡ್ತೇನೆ ಎಂದಾಗ ನಾನು ಇದ್ದೆ. ಹೈಕಮಾಂಡ್ ಹೇಳಿದ ಕಡೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಬುಧವಾರ ಫಸ್ಟ್ ಲಿಸ್ಟ್ ಬರುತ್ತದೆ. ಹೈಕಮಾಂಡ್ ಹೇಳಿದ ಕಡೆ ನಿಲ್ಲುತ್ತಾರೆ.
ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ನಾನು ಸರ್ವಜ್ಞ ನಗರ ಬಿಟ್ಟು ಬೇರೆ ಕಡೆ ಹೋಗುತ್ತೇನಾ..? ಅವರು ಮಾಸ್ ಲೀಡರ್ ಎಲ್ಲೆ ನಿಂತ್ರು ಗೆಲ್ಲುತ್ತಾರೆ ಎಂದರು.
ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಹಾಲಿ ಶಾಸಕರು ಇರುವ ಕ್ಷೇತ್ರ ಹಾಗೂ ಒಂದೇ ಹೆಸರು ಶಿಫಾರಸಾಗಿರುವ ಕ್ಷೇತ್ರ ಸಿಂಗಲ್ ನೇಮ್ ಇರೋ ಹೆಸರು ಫೈನಲ್. ಆದ್ರೂ ಕಾಂಗ್ರೆಸ್ ಹಾಲಿ ಶಾಸಕರಲ್ಲಿ ಢವಢವ ಶುರುವಾಗಿದೆ. ಕೆಲ ಶಾಸಕರಿಗೆ ಟಿಕೆಟ್ ತಪ್ಪುವ ಆತಂಕ ಆರಂಭವಾಗಿದೆ.
ಎಐಸಿಸಿ ರಿಪೋರ್ಟ್‌ನಲ್ಲಿ ನೆಗೆಟಿವ್ ರಿಪೋರ್ಟ್ ಇರೋರಿಗೆ ಟಿಕೆಟ್ ಅನುಮಾನ ಎನ್ನಲಾಗುತ್ತಿದ್ದು, ಅನೇಕರು ನಾಯಕರ ಬಳಿ ತೆರಳಿ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: JDS Politics: ದೇವೇಗೌಡರ ಸಭೆ ನಂತರವೂ ಬಗೆಹರಿಯದ ಹಾಸನ ಟಿಕೆಟ್ ಸಂಘರ್ಷ: ಮತ್ತೆ ಸಭೆ ನಡೆಸಿದ ಮಾಜಿ ಪ್ರಧಾನಿ