Site icon Vistara News

Karnataka Election: ಸಿಡಿ ಬಿಡುಗಡೆ ಎಂದು ಡಿಕೆಶಿ ಬ್ಲ್ಯಾಕ್‌ಮೇಲ್;‌ ಮತದಾನದ ದಿನವೇ ರಮೇಶ್‌ ಜಾರಕಿಹೊಳಿ ಆರೋಪ

Karnataka Election: D K Shivakumar Blackmails To release CD of Mine; Ramesh Jarkiholi alleges

Karnataka Election: D K Shivakumar Blackmails To release CD of Mine; Ramesh Jarkiholi alleges

ಬೆಳಗಾವಿ: ಪ್ರಚಾರದ ವೇಳೆ ಆರೋಪ-ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ಅಣಕ, ಕಾಲೆಳೆಯುವಿಕೆ ಎಲ್ಲ ಮುಗಿದು, ರಾಜ್ಯಾದ್ಯಂತ (Karnataka Election) ಮತದಾನ ಆರಂಭವಾಗಿದ್ದರೂ, ಜನ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರೂ ರಾಜಕಾರಣಿಗಳ ರಾಜಕೀಯ ಮೇಲಾಟ ಮಾತ್ರ ನಿಂತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಮತದಾನದ ದಿನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ರಮೇಶ್‌ ಜಾರಕಿಹೊಳಿ ಅವರು ʼಬ್ಲ್ಯಾಕ್‌ಮೇಲ್ʼ ಆರೋಪ ಮಾಡಿದ್ದಾರೆ.

“ಮಂಗಳವಾರ ರಾತ್ರಿಯಿಂದಲೇ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಿಂದೆ ಸರಿಯದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಬಿಜೆಪಿ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ರಾಜ್ಯದ ಮುಂದಿನ ಸಿಎಂ ಹಾಗೂ ಗೃಹ ಸಚಿವರಿಗೆ ಈಗಲೇ ಮನವಿ ಮಾಡುತ್ತೇನೆ. ಸಿಡಿ ಕೇಸ್ ಸಿಬಿಐಗೆ ವಹಿಸಿದರೆ ಎಲ್ಲರೂ ಹೊರಗೆ ಬರುತ್ತಾರೆ” ಎಂದು ಹೇಳಿದರು.

“ನಾನು ಹಾಗೂ ಡಿಕೆಶಿ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ, ವಿಷಕನ್ಯೆಯ ಜಾಲಕ್ಕೆ ಸಿಲುಕಿ ಡಿಕೆಶಿ ಹೀಗೆ ಮಾಡುತ್ತಿದ್ದಾರೆ. ಕೂಡಲೇ ಅವರು ಈ ಜಾಲದಿಂದ ಹೊರಬರುವುದು ಒಳ್ಳೆಯದು. ಸಿಡಿ ಪ್ರಕರಣದಲ್ಲಿ ನಾನು ಹೊರಬಂದಿದ್ದೇನೆ. ಸಿಡಿ ಗ್ಯಾಂಗ್‌ನ ಕುತಂತ್ರಕ್ಕೆ ನೂರಾರು ಜನ ಸಿಲುಕಿದ್ದಾರೆ. ಅವರನ್ನು ಕೂಡ ಹೊರತರಬೇಕು. ಹಾಗಾಗಿ, ಸಿಡಿ ಪ್ರಕರಣದ ಕುರಿತು ತನಿಖೆ ನಡೆಸುವುದು ಒಳ್ಳೆಯದು” ಎಂದು ತಿಳಿಸಿದರು.

ರಮೇಶ್‌ ಜಾರಕಿಹೊಳಿ ಅವರು ಇದಕ್ಕೂ ಮೊದಲು ಕೂಡ ಸಿಡಿ ಬಿಡುಗಡೆ ಬ್ಲ್ಯಾಕ್‌ಮೇಲ್‌ ಕುರಿತು ಡಿಕೆಶಿ ವಿರುದ್ಧ ಆರೋಪ ಮಾಡಿದ್ದರು. ಈಗ ಚುನಾವಣೆಯ ದಿನವೂ ಬ್ಲ್ಯಾಕ್‌ಮೇಲ್‌ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‌ಇದನ್ನೂ ಓದಿ: Jagadish Shettar: ಬಿಜೆಪಿಯ ಏಳು ಜನ ಮಂತ್ರಿಗಳ ಸಿಡಿ ಇವೆ; ಸ್ಟೇ ತಂದಿದ್ದು ಯಾಕೆಂದು ಅವರನ್ನೇ ಕೇಳಿ ಎಂದ ಜಗದೀಶ್‌ ಶೆಟ್ಟರ್‌

Exit mobile version