Site icon Vistara News

Karnataka Election : ವೋಟರ್‌ ಐಡಿ ಇಲ್ವಾ? ಡೋಂಟ್‌ ವರಿ, ಈ 11 ದಾಖಲೆಗಳಲ್ಲಿ ಯಾವುದು ಇದ್ದರೂ ಓಕೆ!

Alternative ID proofs for voting

ಬೆಂಗಳೂರು: ಮತ ಹಾಕಲು ಮತಗಟ್ಟೆಗೆ ಹೊರಟಿದ್ದೀರಿ. ಆದರೆ, ಮತದಾರರ ಗುರುತಿನ ಚೀಟಿ (Voter identity card) ಎಲ್ಲಿ ಇಟ್ಟಿದ್ದೇನೆ ಅಂತಾನೇ ಗೊತ್ತಾಗ್ತಿಲ್ಲ. ಎಷ್ಟು ಹುಡುಕಿದರೂ ಸಿಕ್ತಿಲ್ಲ.. ಎಲ್ಲೂ ಎಡಗೈಲಿ ಇಟ್ಟಿದ್ದೇನೆ.. ಛೆ ಅಂತೆಲ್ಲ ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಡೋಂಟ್‌ ವರಿ. ವೋಟರ್‌ ಐಡಿಯೇ ಬೇಕು ಅಂತೇನೂ ಇಲ್ಲ, ಅದಕ್ಕೆ ಪರ್ಯಾಯವಾಗಿ 11 ದಾಖಲೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ಅದರಲ್ಲಿ ಯಾವುದನ್ನು ಹಿಡಿದುಕೊಂಡು ಹೋದರೂ ಸರಿ.. ನಿಮಗೆ ಮತ ಹಾಕಲು ಅವಕಾಶ ನೀಡಲಾಗುತ್ತದೆ.

ಹೌದು, ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಭಾಗವಾಗಿ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ಮಹತ್ವದ ಮತದಾನ ಮೇ 10 ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ.

58,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 2,613 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇವರ ಪೈಕಿ 2,427 ಪುರುಷ, 184 ಮಹಿಳಾ ಅಭ್ಯರ್ಥಿಗಳು ಹಾಗೂ ಇಬ್ಬರು ಇತರರು.

ಒಟ್ಟು 5,30,85,566 ಮತದಾರರಿದ್ದು, ಅವರಲ್ಲಿ 2,66,82,156 ಪುರುಷ ಮತದಾರರು ಹಾಗೂ 2,63,98,483 ಮಹಿಳಾ ಮತದಾರರು ಇದ್ದಾರೆ. ಸೇವಾ ಮತದಾರರ ಪೈಕಿ 47488 ಪುರುಷ, 45897 ಮಹಿಳಾ, 1591 ಇತರೆ ಮತದಾರರು ಇದ್ದಾರೆ.

ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಲು ಗುರುತಿನ ಚೀಟಿ ಕಡ್ಡಾಯ. ಅದರಲ್ಲಿ ಭಾರತ ಸರ್ಕಾರ ನೀಡುವ ಮತದಾರರ ಗುರುತಿನ ಚೀಟಿಗೆ ಪ್ರಥಮ ಆದ್ಯತೆ. ಆದರೆ, ಕೆಲವೊಮ್ಮೆ ಈ ಕಾರ್ಡ್‌ ಮಿಸ್‌ ಆಗಿರುತ್ತದೆ, ಕೆಲವೊಮ್ಮೆ ಕಾರ್ಡ್‌ ಇದೆ. ಕೈಗೆ ಸಿಗುವುದಿಲ್ಲ ಎನ್ನುವ ಪರಿಸ್ಥಿತಿ.

ಅಂಥ ಪರಿಸ್ಥಿತಿಯಲ್ಲಿ ನೀವು ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಚುನಾವಣಾ ಆಯೋಗ ಭಾವಚಿತ್ರ ಇರುವ ಮತದಾರರ ಗುರುತಿನ ಚೀಟಿಯ ಬದಲು ಫೋಟೊ ಇರುವ ಬೇರೆ ಸುಮಾರು 12 ದಾಖಲೆಗಳನ್ನು ಉಲ್ಲೇಖಿಸಿದೆ. ಅವುಗಳಲ್ಲಿ ಯಾವುದನ್ನಾದರೂ ಒಂದನ್ನು ತೋರಿಸಿ ಮತ ಹಾಕಬಹುದು. ಆದರೆ, ಒಂದೇ ಕಂಡಿಷನ್‌ ಎಂದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಕಡ್ಡಾಯ!

ಹಾಗಿದ್ದರೆ ನೀವು ಪರ್ಯಾಯವಾಗಿ ಬಳಸಬಹುದಾದ ಇತರ ದಾಖಲೆಗಳು ಯಾವುದು?
(ಗಮನಿಸಿ ಇಲ್ಲಿ ಕೂಡಾ ಹೆಸರು, ಭಾವಚಿತ್ರಗಳು ಮೂಲಕ ಮತದಾರರ ಚೀಟಿಯಲ್ಲಿರುವ ಮಾಹಿತಿಗೆ ಹೊಂದಿಕೆ ಆಗಬೇಕು)

  1. ಆಧಾರ್‌ ಕಾರ್ಡ್‌
  2. ಚಾಲನಾ ಪರವಾನಗಿ (ಡಿ.ಎಲ್‌.)
  3. ನರೇಗಾ ಜಾಬ್‌ ಕಾರ್ಡ್‌
  4. ಕಾರ್ಮಿಕ ಇಲಾಖೆ ನೀಡಿರುವ ಸ್ಮಾರ್ಟ್‌ ಕಾರ್ಡ್‌
  5. ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್‌ಬುಕ್‌
    ಪಾಸ್‌ಪೋರ್ಟ್‌
  6. ಕಾರ್ಮಿಕ ಸಚಿವಾಲಯದ ಯೋಜನೆಯ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌
  7. ಭಾವಚಿತ್ರವುಳ್ಳ ಪಿಂಚಣಿ ದಾಖಲೆಪತ್ರ
  8. ಪಾನ್‌ ಕಾರ್ಡ್‌
  9. ಎಂಎಲ್‌ಎ ಅಥವಾ ಎಂಪಿಯ ಅಧಿಕೃತ ಗುರುತಿನ ಚೀಟಿ
  10. ಸರಕಾರಿ ಅಥವಾ ಸಾರ್ವಜನಿಕ ಕಂಪನಿಗಳ ಸೇವಾ ಗುರುತಿನ ಚೀಟಿ
  11. ವಿಶೇಷಚೇತನ ವ್ಯಕ್ತಿಗಳಾಗಿದ್ದರೆ ಸಾಮಾಜಿಕ ನ್ಯಾಯ ಇಲಾಖೆ ನೀಡಿರುವ ಗುರುತಿನ ಚೀಟಿ

ಇದನ್ನೂ ಓದಿ : Karnataka Election 2023 : ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗಿರುತ್ತದೆ ಗೊತ್ತೇ?

Exit mobile version