Site icon Vistara News

Karnataka Election: ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಡಿ.ಕೆ. ಶಿವಕುಮಾರ್‌ ತಂತ್ರ: ಸಿಎಂ ಬೊಮ್ಮಾಯಿ ಆರೋಪ

karnataka-politics-former-cm-basavaraj-bommai-said-cong-govt demoralising police

karnataka-election: CM Bommai explains the realation between Bajarangadal and Anjaneya to DKS

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮಾತನಾಡಲು ಯಾವುದೇ ವಿಷಯ ಇಲ್ಲದಿರುವುದರಿಂದ ಅನಗತ್ಯ ಆರೋಪ ಮಾಡುತ್ತಿದ್ದು, ಯಾರ ನಾಮಪತ್ರವೂ ತಿರಸ್ಕೃತವಾಗಿಲ್ಲದಿರುವುದೇ ಆರೋಪ ಸುಳ್ಳು ಎನ್ನಲು ಸಾಕ್ಷಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧು ಮಾಡಲು ಸಿಎಂ ಕಚೇರಿಯಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ನಿನ್ನೆಯೇ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಯಾವುದೇ ನಾಮಪತ್ರ ತಿರಸ್ಕೃತ ಆಗಿಲ್ಲ ಅಲ್ಲವೇ? ಹಾಗಿದ್ದ ಮೇಲೆ ಒತ್ತಡ ಹೇರಿದ್ದು ಎಲ್ಲಿದೆ? ಇದೆಲ್ಲವೂ ಸುಳ್ಳು ಎಂದು ಇದೇ ತಿಳಿಸುತ್ತದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಯಡಿಯೂರಪ್ಪನವರನ್ನು ಮುಗಿಸುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನವರನ್ನು ಹೇಗೆ ಮುಗಿಸಿದ್ದಾರೆ ಎಂದು ಗೊತ್ತಿಲ್ವಾ? ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದರು. ಈ ಬಾರಿ ವರುಣದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಎನ್ನುವುದು ಜಗ್ಗತ್ತಿಗೆ ಗೊತ್ತಿಗೆ ಎಂದರು.

ಲಿಂಗಾಯತ ಅಣೆಕಟ್ಟು ಒಡೆದು ಹರಿದು ಕಾಂಗ್ರೆಸ್ ಎಂಬ ಸಮುದ್ರ ಸೇರಲಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿ, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ. ಮೊದಲು ಅದನ್ನು ನೋಡಿಕೊಳ್ಳಲಿ. 2013 ರಲ್ಲಿ ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಅದು ರಾಜಕೀಯ ಪಕ್ಷವಾಯಿತು ಅಷ್ಟೇ. ಲಿಂಗಾಯತ ಮತದಾರರು ಯಾವಾಗಲೂ ಪ್ರಬದ್ದರಾಗಿದ್ದಾರೆ.

ಲಿಂಗಾಯತರು ಜಾಗೃತಿರಾಗಿ ಮತಷ್ಟು ಗಟ್ಟಿಯಾಗಿದ್ದಾರೆ. ಲಿಂಗಾಯತರನ್ನು ಗಟ್ಟಿ ಮಾಡುವ ಕೆಲಸ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದರು.

ಸವದತ್ತಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸರಿ ಇಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಎಲ್ಲವೂ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷವೂ ಏನೂ ಮಾಡಲು ಆಗುವುದಿಲ್ಲ. ಎಲ್ಲ ಪ್ರಕ್ರಿಯೆಗಳ ವಿಡಿಯೋ ಚಿತ್ರೀಕರಣ ಆಗಿದೆ ಎಂದರು.

ಸುದೀಪ್ ಮತ್ತೆ ಪ್ರಚಾರ ಮಾಡಲಿದ್ದು, ಸುದೀಪ್ ಪ್ರಚಾರದ ವಿವರ ಒಂದೆರಡು ದಿನದಲ್ಲಿ ಅಂತಿಮಗೊಳ್ಳಲಿದೆ. ಚುನಾವಣಾ ರೋಡ್ ಶೋ ಭಾನುವಾರದಿಂದ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಯಲಹಂಕದಿಂದ ರೋಡ್ ಶೋ ಆರಂಭವಾಗಲಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ಅರಸಿಕೆರೆ ನಂತರ ಬೆಳಗಾವಿ ವಿಭಾಗ, ಗುಲಬರ್ಗಾ ವಿಭಾಗ ಹಾಗೂ ಮೈಸೂರು ಭಾಗಗಳಲ್ಲೂ ಚುನಾವಣಾ ಯಾತ್ರೆ ಹಾಗೂ ರೋಡ್ ಶೋಗಳನ್ನು ನಡೆಸಲಿದ್ದೇನೆ.

ರಾಜ್ಯದಲ್ಲಿ ಪ್ರಧಾನಿಯವರ ಪ್ರವಾಸದ ವಿಚಾರವಾಗಿ ಮಾತನಾಡಿ, ಪಕ್ಷ ಎಲ್ಲವನ್ನೂ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023: ಬೊಮ್ಮಾಯಿ ಅವರದ್ದು ನಾಮ್‌ಕೆ ವಾಸ್ತೆ ಅಲ್ಲ, ಕಾಮ್‌ಕೆ ವಾಸ್ತೆ: ಕಿಚ್ಚ ಸುದೀಪ್‌

Exit mobile version