ಬೆಂಗಳೂರು, ಕರ್ನಾಟಕ: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ಮುಗಿದ ಬೆನ್ನಲ್ಲೇ ಹಲವು ಮಾಧ್ಯಮ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನ್ನು ಬಹಿರಂಗ ಮಾಡಿದ್ದು, ಅತಂತ್ರ ವಿಧಾನಸಭೆ ಫಲಿತಾಂಶ ದೊರೆಯಬಹುದು ಎಂದು ಹೇಳಿವೆ. ರಿಪಬ್ಲಿಕ್ ಮತ್ತು ಜೀ ನ್ಯೂಸ್ ಸಮೀಕ್ಷೆಗಳ ಪ್ರಕಾರ ಹಂಗ್ ಅಸೆಂಬ್ಲಿ ಭವಿಷ್ಯ ನುಡಿದಿದ್ದಾರೆ. ಮತಗಟ್ಟೆಗಳ ಸಮೀಕ್ಷೆ ನಿಜವಾದರೆ ಜೆಡಿಎಸ್ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಎಲ್ಲ ಸಾಧ್ಯತೆಗಳಿವೆ.
ರಿಪಬ್ಲಿಕ್ ಮತ್ತು ಝೀ ನ್ಯೂಸ್ ಮತಗಟ್ಟೆ ಸಮೀಕ್ಷೆ ಹೀಗಿದೆ….
ಝೀ ನ್ಯೂಸ್
ಬಿಜೆಪಿ: 79 – 89
ಕಾಂಗ್ರೆಸ್: 108-118
ಜೆಡಿಎಸ್: 25-35
ಇತರ: 2- 4
ರಿಪಬ್ಲಿಕ್ ಟಿವಿ
ಬಿಜೆಪಿ: 85 – 100
ಕಾಂಗ್ರೆಸ್: 94- 108
ಜೆಡಿಎಸ್: 24-32
ಇತರ: 2-6
ನ್ಯೂಸ್ ನೇಷನ್ ಮತ್ತು ಸಿಜಿಎಸ್ ಮತಗಟ್ಟೆ ಸಮೀಕ್ಷೆ
ಬಿಜೆಪಿ- 114
ಕಾಂಗ್ರೆಸ್- 86
ಜೆಡಿಎಸ್- 21
ಇತರ-3
ಎಬಿಪಿ-ಸಿ ವೋಟರ್ ಮತಗಟ್ಟಿ ಸಮೀಕ್ಷೆ
ಬಿಜೆಪಿ: 66 – 86
ಕಾಂಗ್ರೆಸ್: 81- 101
ಜೆಡಿಎಸ್: 20- 27
ಇತರರು: 0-3
ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ
ಬಿಜೆಪಿ-85
ಕಾಂಗ್ರೆಸ್-113
ಜೆಡಿಎಸ್-23
ಇತರ-3
ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ: 62 – 80
ಕಾಂಗ್ರೆಸ್: 122- 140
ಜೆಡಿಎಸ್: 20- 25
ಇತರರು: 00- 03