Site icon Vistara News

Karnataka Election : ಹಣದ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ, ಆದ್ರೂ ಅಧಿಕಾರ ಖಚಿತ ಎಂದ ಎಚ್‌ಡಿಕೆ

karnataka-election: HDK says he would have won More money if he had money!

karnataka-election: HDK says he would have won More money if he had money!

ರಾಮನಗರ: ʻʻರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ. ಹಾಗಾಗಿ ಸ್ವಲ್ಪ ಹಿನ್ನಡೆ ಆಗಿರುವುದು ನಿಜ. ಆದರೂ ಸಹ ಜೆಡಿಎಸ್‌ಗೆ ಬಹುಮತ ಬರಲಿದೆʼʼ- ಹೀಗೆಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy).

ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್‌ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಅವರ ಜತೆ ಮತ ಚಲಾಯಿಸಿದ ಬಳಿಕ ಅವರು ಮಾತನಾಡಿದರು. ಮಾಗಡಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.

ʻʻಕೆಲವು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಿದ್ದರು. ಆದರೆ, ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆಯಾಗಿದೆ. ನಾನೂ ಅವರಿಗೆ ಹಣ ಕೊಡಲು ಸಾಧ್ಯವಾಗಲಿಲ್ಲ. ಅವರು ಕೂಡಾ ಅಷ್ಟೊಂದು ಶಕ್ತಿವಂತರಲ್ಲʼʼ ಎಂದು ಹೇಳಿದ ಕುಮಾರಸ್ವಾಮಿ, ಅಷ್ಟಾದರೂ ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರಲಿದೆ ಎಂದರು.

ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್‌ ನಿಲುವು ಏನಾಗಿರಲಿದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಒಪ್ಪದ ಅವರು, ಅದರ ಬಗ್ಗೆ ಮುಂದೆ ಮಾತನಾಡ್ತೇನೆ ಎಂದರು.

ʻʻಬಿಜೆಪಿ – ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ಈ ಬಾರಿಯ ಚುನಾವಣೆ ಹಣ ಬಲದಿಂದಲೇ ನಡೆದಿದೆʼʼ ಎಂದು ಹೇಳಿದ್ದಾರೆ ಕುಮಾರಸ್ವಾಮಿ.

ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ ಎಂದ ನಿಖಿಲ್‌

ಕೇತಗಾನಹಳ್ಳಿಯಲ್ಲಿ ಮತ ಹಾಕಿದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಒಬ್ಬ ಯುವಕನಾಗಿ ನನಗೆ ಆತಂಕವಿದೆ. ಮುಂದೆ ಈ ವ್ಯವಸ್ಥೆಯನ್ನು ರಾಜ್ಯದ ಜನರು ಸರಿಪಡಿಸಬೇಕಿದೆʼʼ ಎಂದರು. ಅವರು ಕಾಂಗ್ರೆಸ್‌ ಮತ್ತು ಬಿಜೆಪಿಗಳು ಹಣಬಲದಿಂದಲೇ ಚುನಾವಣೆ ನಡೆಸಿವೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿದರು.

ʻನಾವು ರಾಮನಗರದಲ್ಲಿ 25 ವರ್ಷಗಳಿಂದ ಸೇವೆ ಮಾಡಿದ್ದೇವೆ. ಜನರು ನಮ್ಮ ಕೈಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಇದೆ ಎಂದು ಹೇಳಿದರು.

ಹೊಳೆನರಸೀಪುರದಲ್ಲಿ ದೇವೇಗೌಡರ ಮತದಾನ

ಜೆಡಿಎಸ್‌ ವರಿಷ್ಠ ನಾಯಕರಾಗಿರುವ ಎಚ್‌.ಡಿ. ದೇವೇಗೌಡರು ಮತ್ತು ಅವರ ಪತ್ನಿ ಹೊಳೆನರಸೀಪುರದಲ್ಲಿ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ʻʻನನ್ನ ಹುಟ್ಟೂರು ಹರದನಹಳ್ಳಿ 1962ರಲ್ಲಿ ಇಲ್ಲಿಗೆ ಬಂದೆ. ಅಲ್ಲಿರುವ ಆಸ್ತಿಯನ್ನೆಲ್ಲ ನನ್ನ ತಮ್ಮಂದಿರಿಗೆ ಮತ್ತು ಚಿಕ್ಕಪ್ಪಂದಿರಿಗೆ ವಹಿಸಿಕೊಟ್ಟೆ. ಇಲ್ಲಿ ಜಮೀನು ತೆಗೆದುಕೊಂಡು ವ್ಯವಸಾಯ ಶುರು ಮಾಡಿದ್ವಿ. ಆಗದಿಂದ ಈಗಿನವರೆಗೆ ಇಲ್ಲೇ ಮತದಾನ ಮಾಡುತ್ತಿದ್ದೇನೆʼʼʼ ಎಂದು ಹಿಂದಿನ ನೆನಪು ಮೆಲುಕು ಹಾಕಿದರು.

ʻʻರೇವಣ್ಣ ಆಗಿನ್ನೂ ಚಿಕ್ಕ ಹುಡುಗ. ವಿದ್ಯಾಭ್ಯಾಸ ಮಾಡುತ್ತಿದ್ದರು. ರೇವಣ್ಣ ಐಟಿಐ ಮಾಡಬೇಕೆಂಬ ಆಸೆ ಇತ್ತು. ಆದರೆ, ಆದರೆ ಅವರ ಹಣೆಬರಹ ಸರಿ ಇರಲಿಲ್ಲ. ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದೆ. ಆಗ ರೇವಣ್ಣ ಐಟಿಐ ಬಿಟ್ಟು ವ್ಯವಸಾಯ ಶುರು ಮಾಡಿದರು. ಅದರೆ, ಈಗ ನಮ್ಮ ಊರು ಯಾವ ಸಿಟಿಗೂ ಕಡಿಮೆ ಇಲ್ಲದಂತೆ ಬೆಳೆದಿದೆ. ಇಲ್ಲಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದರೆ ಅದರ ಕೀರ್ತಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರಿಗೆ ಸಲ್ಲಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ: Karnataka Election: ಪತ್ನಿ ಚೆನ್ನಮ್ಮ ಜತೆ ಬಂದು ಮತ ಹಾಕಿದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು

Exit mobile version