Site icon Vistara News

Karnataka Election : ರಮಾನಾಥ ರೈ ಸೋತರೆ ನಾನು ಸತ್ತಂತೆ; ಹಿರಿಯ ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ಭಾವುಕ ಮಾತು

If Ramanath rai loses election, its like death of mine says senior congress leader Janardhana Poojary

If Ramanath rai loses election, its like death of mine says senior congress leader Janardhana Poojary

ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಜಿದ್ದಾಜಿದ್ದಿನ ಕದನ ನಡೆಯುತ್ತಿದ್ದು, ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಮಾಜಿ ಸಚಿವ ರಮಾನಾಥ ರೈ (B Ramanatha Rai) ಅವರು ಎಲ್ಲ ಕಡೆ ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ, ಹಿರಿಯ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ (B Janardana Poojari) ಅವರು ರಮಾನಾಥ ರೈ ಅವರ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ.

ರಮಾನಾಥ ರೈ ಅವರು ಭಾನುವಾರ ಬೆಳಗ್ಗೆ ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಗೆಲುವಿಗೆ ಆಶೀರ್ವದಿಸುವಂತೆ ಕೋರಿದರು. ಈ ವೇಳೆ ಮಾತನಾಡಿದ ಜನಾರ್ದನ ಪೂಜಾರಿ ಅವರು, ʻʻಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ. ರಮಾನಾಥ ರೈ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಅವರು ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮತದಾರರು ಗೌರವ ನೀಡಬೇಕುʼʼ ಎಂದು ಹೇಳಿದರು.

ಬಿ. ರಮಾನಾಥ ರೈ ಅವರು ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ʻʻನನಗೆ ಅನಾರೋಗ್ಯದಿಂದ ನಿಮ್ಮ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿ.ರಮಾನಾಥ ರೈಗೆ ಸುಳ್ಳು ಹೇಳಲು ಬರುವುದಿಲ್ಲ. ನನ್ನಂತೆ ಸತ್ಯದಿಂದಲೇ ಪಕ್ಷ ಮತ್ತು ಜನತೆ ಪರವಾಗಿ ದುಡಿಯುತ್ತಿದ್ದಾರೆ. ಈ ದೇಶದಲ್ಲಿ ರೈ ಅವರಂತೆ ಕೆಲಸ ಮಾಡುವ ವ್ಯಕ್ತಿಗಳು ಅಪರೂಪʼʼ ಎಂದು ಹೇಳಿದ ಜನಾರ್ದನ ಪೂಜಾರಿ ಅವರು, ʻʻಈ ಬಾರಿ ರಮಾನಾಥ ರೈ ಸೋತರೆ ನಾನು ಸತ್ತಂತೆ ಎಂದು ಭಾವುಕರಾಗಿ ಹೇಳಿದರು. ರಮಾನಾಥ ರೈ ಅವರು ಪೂಜಾರಿ ಅವರಿಂದ ಆಶೀರ್ವಾದ ಪಡೆದರು.

ಕ್ಷೇತ್ರಾದ್ಯಂತ ಪ್ರಚಾರ; ದೇಗುಲ, ಭೂತಸ್ಥಾನಗಳಿಗೆ ಭೇಟಿ

ದೈವದ ಆಶೀರ್ವಾದ ಪಡೆಯುತ್ತಿರುವ ರಮಾನಾಥ ರೈ

ಕಾಂಗ್ರೆಸ್‌ ಅಭ್ಯರ್ಥಿ ರಮಾನಾಥ ರೈ ಅವರು ಮನೆ ಮನೆ ಪ್ರಚಾರದ ಜತೆಗೆ ದೇವಾಲಯಗಳು, ಭೂತ ಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಹಲವು ಕಡೆ ನಡೆಯುವ ನೇಮ, ಕೋಲಗಳಿಗೆ ಭೇಟಿ ನೀಡುವ ರಮಾನಾಥ ರೈಗಳು ಆಶೀರ್ವಾದದ ಅಭಯ ಕೇಳುತ್ತಿದ್ದಾರೆ. ಈಗ ಕರಾವಳಿಯಲ್ಲಿ ಜಾತ್ರೆಯ ಕಾಲವಾಗಿದ್ದು, ಹೆಚ್ಚಿನೆಲ್ಲ ಜಾತ್ರೆಗಳಿಗೆ ಭೇಟಿ ನೀಡುವ ರೈಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ವಿಷಬೀಜ ಬಿತ್ತಿ ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ

ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಎಂದು ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ರಮಾನಾಥ ರೈ ಮನವಿ ಮಾಡುತ್ತಿದ್ದಾರೆ. ತಾನು ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಒಂದು ದಿನವೂ ಬಿಡುವಿಲ್ಲದೆ ಜನಸೇವೆ ಮಾಡಿದ್ದಾಗಿ ನೆನಪಿಸಿಕೊಳ್ಳುವ ಅವರು ಶಾಸಕನಲ್ಲದೆಯೂ ಜನರೊಂದಿಗೆ ಬೆರೆತಿರುವುದಕ್ಕಾಗಿ ಈಗ ಜನತೆ ಬೆಂಬಲಕ್ಕೆ ನಿಂತಿದ್ದಾರೆ. ಇದು ತನಗೆ ಗೆಲುವು ತಂದುಕೊಡಲಿದೆ ಎಂದು ಹೇಳುತ್ತಿದ್ದಾರೆ.

ಬಂಟ್ವಾಳ ಕ್ಷೇತ್ರದಲ್ಲಿ ಹಾಲಿ ಶಾಸಕ, ರಾಜೇಶ್‌ ನಾಯ್ಕ್‌ ಉಳೆಪಾಡಿಗುತ್ತು ಅವರು ಬಿಜೆಪಿಯಿಂದ ಕಣದಲ್ಲಿದ್ದಾರೆ. ಮೇ 10ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ : Karnataka Election : ಏನಿಲ್ಲ, ಏನಿಲ್ಲ.. ನನ್ನ-ನಿನ್ನ ನಡುವೆ ಏನಿಲ್ಲ; ಸಿದ್ದು-ಡಿಕೆಶಿ ನಡುವಿನ ಆತ್ಮೀಯ ಮಾತುಕತೆ ವಿಡಿಯೊ ರೆಡಿ!

karnataka-election: If Ramanath rai loses election, its like death of mine says senior congress leader Janardhana Poojary

Exit mobile version