Site icon Vistara News

Karnataka Election | ಬಿಎಸ್‌ವೈ ಮತ್ತು ನನ್ನ ಸಂಬಂಧ ತಂದೆ-ಮಗನ ಸಂಬಂಧ, ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ ಎಂದ ಬೊಮ್ಮಾಯಿ

BSY Bommai

ಕೊಪ್ಪಳ: ಹಿರಿಯರಾದ ಬಿ.ಎಸ್‌. ಯಡಿಯೂರಪ್ಪ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನನ್ನ ಮತ್ತು ಅವರ ಸಂಬಂಧ ತಂದೆ-ಮಗನ ಸಂಬಂಧವಾಗಿದೆ (Karnataka Election) ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

‌ತಾಲೂಕಿನ ಬಸಾಪೂರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಯಡಿಯೂರಪ್ಪನವರನ್ನು ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅವರನ್ನು ಮುಂದಿಟ್ಟುಕೊಂಡೇ ಚುನಾವಣೆಗೆ ಹೋಗುತ್ತೇವೆ ಎಂದರು.

ಪ್ರಿಯಾಂಕ್ ಖರ್ಗೆಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗೆ ಬಾಗಿಲು ಇಲ್ಲ, ಕಿಟಕಿಯೂ ಇಲ್ಲ ಎಂದು ತಿರುಗೇಟು ನೀಡಿದರು. ಜಲ ಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದರು.

ಇತ್ತೀಚೆಗೆ ಪಕ್ಷದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪ ಜೋರಾಗಿತ್ತು. ಅದಕ್ಕೆ ಪೂರಕವಾಗಿ ಬಿಎಸ್‌ವೈ ಪಕ್ಷದ ಹಲವು ಕಾರ್ಯಕ್ರಮಗಳಿಂದ ದೂರ ಇದ್ದರು. ಕೊಪ್ಪಳದಲ್ಲಿ ನಡೆಯಲಿರುವ ೧೦ ಜಿಲ್ಲಾ ಕಾರ್ಯಾಲಯಗಳ ಉದ್ಘಾಟನಾ ಕಾರ್ಯಕ್ರಮಕ್ಕೂ ಬಿ.ಎಸ್.‌ ಯಡಿಯೂರಪ್ಪ ಅವರಿಗೆ ಆಹ್ವಾನ ಇರಲಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ ಬುಧವಾರ ರಾತ್ರಿ ಅವರಿಗೆ ಆಹ್ವಾನ ನೀಡಿದೆ. ಒತ್ತಡಕ್ಕೆ ಮಣಿದ ಬಿಎಸ್‌ವೈ ಬೆಳಗ್ಗೆ ಎದ್ದು ಕೊಪ್ಪಳಕ್ಕೆ ಬಂದಿದ್ದಾರೆ. ಈ ನಡುವೆ ಮಾತನಾಡುತ್ತಾ ಸಿಎಂ ಬೊಮ್ಮಾಯಿ ಅವರ ವಿಚಾರದಲ್ಲಿ ತನಗೆ ಅಸಮಾಧಾನ ಇಲ್ಲ ಎಂದು ಅವರೂ ಹೇಳಿದ್ದರು.

ಇದನ್ನೂ ಓದಿ | Karnataka Election |ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನನ್ನನ್ನು ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ

Exit mobile version