Site icon Vistara News

Karnataka Election : ಬಿಎಸ್‌ವೈ ಹೇಳಿದ್ದರಲ್ಲಿ ವಿಶೇಷವೇನಿಲ್ಲ, ನಮ್ಮ ಶಾಸಕರಿಗೆ ಡೌಟ್‌ ಬೇಡ ಎಂದ ಎಂಎಲ್ಸಿ ರವಿ ಕುಮಾರ್

MLC Ravi kumar

#image_title

ಯಾದಗಿರಿ: ಈಗ ಇರುವ ಬಿಜೆಪಿ ಶಾಸಕರಲ್ಲಿ ನಾಲ್ಕಾರು ಜನಕ್ಕೆ ಟಿಕೆಟ್‌ ಕಟ್‌ ಆಗಬಹುದು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಇದನ್ನು ಸಹಜವಾಗಿಯೇ ಹೇಳಿದ್ದಾರೆ (Karnataka Election) ಎಂದು ಮೇಲ್ಮನೆ ಸದಸ್ಯ ರವಿಕುಮಾರ್‌ ಹೇಳಿದ್ದಾರೆ.

ಅವರು ನಾಲ್ಕಾರು ಜನಕ್ಕೆ ಟಿಕೇಟ್ ಕಟ್ ಆಗಬಹುದು ಎಂದು ಹೇಳಿದ್ದಾರೆ. ಇಂಥವರಿಗೇ ಸೀಟ್ ಸಿಗುವುದಿಲ್ಲ ಎಂದು ಹೇಳಿಲ್ಲ. ಕೆಲವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಬಹುದು. ಹೀಗಾಗಿ ನಮ್ಮ ರಾಜ್ಯದಲ್ಲಿ ನಾಲ್ಕಾರು ಸೀಟ್ ಸಿಗದೇ ಇರಬಹುದು. ಎಂದು ಹೇಳಿದ ರವಿಕುಮಾರ್‌, ಅದರ ಅರ್ಥ ಅರ್ಧದಷ್ಟು ಹಾಲಿ‌ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಅಲ್ಲ. ಈ ಬಗ್ಗೆ ನಮ್ಮ ಶಾಸಕರಿಗೆ ಯಾವುದೇ ಡೌಟ್ ಬೇಡ. ಜನಾದರ ಹೊಂದಿರುವ ಶಾಸಕರು ಯಾರೂ ಆತಂಕ ಪಡೋದು ಬೇಡ ಎಂದು ರವಿ ಕುಮಾರ್‌ ಹೇಳಿದರು.

ಬಿಜೆಪಿ ಬಿಡೋದಲ್ಲ, ಬಿಜೆಪಿಗೇ ಬರುತ್ತಾರೆ

ಕೆಲವು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಯಾವ ನಾಯಕರು ಸೇರಲಿದ್ದಾರೆ ಎನ್ನುವುದನ್ನು ಹೇಳಲಿ ಎಂದರು.
ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್‌ ಸೇರುತ್ತಾರೆ ಎನ್ನುವ ಮಾತು ಸುಳ್ಳು. ಅವರು ಈಗಾಗಲೇ ಹಲವು ಕಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೋಡ್‌ ಶೋ ಮಾಡಿದ್ದಾರೆ. ಸೋಮಣ್ಣ ಅವರು ಪಾರ್ಟಿ ಬಿಡುವ ಪ್ರಶ್ನೆಯೇ ಇಲ್ಲ. ಸೋಮಣ್ಣ ಮತ್ತು ನಾವು ಸೇರಿ ಕಾಂಗ್ರೆಸ್‌ ಪಕ್ಷವನ್ನು ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದರು.

ಕಾಂಗ್ರೆಸ್‌, ಜೆಡಿಎಸ್‌ನಿಂದ ಹಲವು ನಾಯಕರು ಬರಲಿದ್ದಾರೆ

ʻʻನಿಜವೆಂದರೆ ಕಾಂಗ್ರೆಸ್‌, ಜೆಡಿಎಸ್ ತೊರೆದು ಕೆಲವು ನಾಯಕರು ಬಿಜೆಪಿಗೆ ಬರಲಿದ್ದಾರೆ. ಯಾರು ಬರುತ್ತಾರೆ ಎನ್ನುವುದನ್ನು ಸಮಯ ಸಂದರ್ಭ ನೋಡಿ ಹೇಳುತ್ತೇನೆʼʼ ಎಂದು ಹೇಳಿದರು ರವಿ ಕುಮಾರ್‌.

ಇದನ್ನೂ ಓದಿ : BY Vijayendra: ಬಿಎಸ್‌ವೈ ಇಲ್ಲದೆ ರಾಜ್ಯದಲ್ಲಿ ಬಿಜೆಪಿಗೆ ಚುನಾವಣೆ ಎದುರಿಸುವುದು ಸವಾಲು ಎಂದ ಪುತ್ರ ವಿಜಯೇಂದ್ರ

Exit mobile version