Site icon Vistara News

Karnataka Election : ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ: ಸಿದ್ದರಾಮಯ್ಯ ಕಿಡಿ

chitradurga congress samavesha siddu ಸಿದ್ದರಾಮಯ್ಯ ಚಿತ್ರದುರ್ಗ ಎಸ್‌ಸಿ ಎಸ್‌ಟಿ ಸಮಾವೇಶ

ಚಿತ್ರದುರ್ಗ: ಮೇಲ್ಜಾತಿಯವರಿಗೆ ಶೇ. 10ರಷ್ಟು ಮೀಸಲಾತಿಯನ್ನು ಬಿಜೆಪಿಯವರು ಕೊಟ್ಟಿದ್ದಾರೆ. ಇದನ್ನು ಸಂವಿಧಾನ ಒಪ್ಪಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಹೇಳಿಲ್ಲ. ತರಾತುರಿಯಲ್ಲಿ ಲೋಕಸಭೆಯಲ್ಲಿ ಪಾಸ್ ಮಾಡಿದ್ದಾರೆ. ಹೀಗಾಗಿ ಹಿಂದುಳಿದವರ ಪರ ಏನಿದ್ದರೂ ಕಾಂಗ್ರೆಸ್‌ ಆಗಿದೆ. ಬದ್ಧತೆಯನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೋಟೆ ನಾಡಿನಲ್ಲಿ ಚುನಾವಣೆ (Karnataka Election) ಕಹಳೆ ಊದಿದರು.

ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದುಳಿದವರು, ದಲಿತರ ಪರ ಎಂದು ಹೇಳುತ್ತಾರೆ. ಆದರೆ, ಅವರದ್ದು ಮೊಸಳೆ ಕಣ್ಣೀರು. ಸಾಮಾಜಿಕ ನ್ಯಾಯದ ಪರ ಎಂದು ಹೇಳುವುದೆಲ್ಲ ಸುಳ್ಳು. ಹಾಗಿದ್ದರೆ ಅನೇಕ ಸಂದರ್ಭಗಳಲ್ಲಿ ಬಿಜೆಪಿ ಮೀಸಲಾತಿಯನ್ನು ವಿರೋಧಿಸಿದ್ದೇಕೆ? ಅದಕ್ಕೆ ಬಾಬಾಸಾಹೇಬ್ ಮೀಸಲಾತಿ ಭಿಕ್ಷೆಯಲ್ಲ ಎಂದಿದ್ದರು. ಅದು ಶೋಷಿತರ ಹಕ್ಕು, ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಹೇಳಿದರು.

chitradurga congress samavesha siddu ಸಿದ್ದರಾಮಯ್ಯ ಚಿತ್ರದುರ್ಗ ಎಸ್‌ಸಿ ಎಸ್‌ಟಿ ಸಮಾವೇಶ Karnataka Election :

ಕಾಂಗ್ರೆಸ್ ಎಲ್ಲರಿಗೆ ನ್ಯಾಯ ಕೊಡುವ ಬದ್ಧತೆ ಇರುವ ಪಕ್ಷವಾಗಿದೆ. ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ನಂಬಿಕೆಯನ್ನು ಹೊಂದಿದೆ. ಸಂವಿಧಾನವನ್ನು ಮಾನಸಿಕವಾಗಿ ಒಪ್ಪದವರು ಇದ್ದರೆ ಅದು ಸಂಘ ಪರಿವಾರವಾಗಿದೆ. ಸಮ ಸಮಾಜದಲ್ಲಿ ಸಂಘ ಪರಿವಾರಕ್ಕೆ ನಂಬಿಕೆಯಿಲ್ಲ. ರಾಜಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆಯಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

chitradurga congress samavesha siddu ಸಿದ್ದರಾಮಯ್ಯ ಚಿತ್ರದುರ್ಗ ಎಸ್‌ಸಿ ಎಸ್‌ಟಿ ಸಮಾವೇಶ Karnataka Election :

ಇದನ್ನೂ ಓದಿ | Anganwadi Workers | ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಯುಸಿ ಓಕೆ; ಸಹಾಯಕರಿಗೆ ಎಸ್‌ಎಸ್‌ಎಲ್‌ಸಿ ಕಡ್ಡಾಯ ಯಾಕೆ? ಸರ್ಕಾರದ ವಿರುದ್ಧ ಕಿಡಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮಂತ್ರಿಯಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಹೆಗಡೆ ಹೇಳಿಕೆ ನೀಡಿದ್ದರು. ಆಗ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಷಾ ಆಗಲೀ, ಪ್ರಧಾನಿ ನರೇಂದ್ರ ಮೋದಿ ಅವರಾಗಲೀ ಒಂದು ನೋಟಿಸ್ ಸಹ ಅನಂತ್‌ ಕುಮಾರ್‌ ಹೆಗಡೆಗೆ ಕೊಡಲಿಲ್ಲ. ಹಿಂದುಳಿದವರು, ದಲಿತರ ಪರ ಎಂದು ಹೇಳುವುದು ನೆಪ ಮಾತ್ರಕ್ಕೆ ಎಂದು ಸಿದ್ದರಾಮಯ್ಯ ಹೇಳಿದರು.

chitradurga congress samavesha siddu ಸಿದ್ದರಾಮಯ್ಯ ಚಿತ್ರದುರ್ಗ ಎಸ್‌ಸಿ ಎಸ್‌ಟಿ ಸಮಾವೇಶ Karnataka Election :

ನಮ್ಮ ಪಕ್ಷದ ಪ್ರಿಯಾಂಕ್‌ ಖರ್ಗೆ ಅವರು ಸಚಿವರಾಗಿದ್ದಾಗ ನಾಗಮೋಹನದಾಸ್ ಆಯೋಗ ರಚಿಸಿದ್ದರು. 2 ವರ್ಷ 10 ತಿಂಗಳು ಬಿಜೆಪಿಯವರು ನಿದ್ದೆ ಮಾಡುತ್ತಿದ್ದರು. ನಾಗಮೋಹನದಾಸ್ ನೀಡಿದ ವರದಿ ಜಾರಿಗೆ ತರಲು ಹೋರಾಡಿದ್ದು ಕಾಂಗ್ರೆಸ್ಸಿನ ದಲಿತ ಶಾಸಕರಾಗಿದ್ದಾರೆ. ಉಳಿದ ಪಕ್ಷಗಳ ಒಬ್ಬ ಶಾಸಕರೂ ಈ ಬಗ್ಗೆ ಬಾಯಿಬಿಡಲಿಲ್ಲ. ಈಗ ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಜನವರಿ 31ರೊಳಗೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ ಶೆಡ್ಯೂಲ್‌ ೯ಕ್ಕೆ ಸೇರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಹೇಳಿದರು.

ತುರ್ತು ಕೆಲಸದ ಹಿನ್ನೆಲೆ ಸಿದ್ದರಾಮಯ್ಯ ಭಾಷಣದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವೇದಿಕೆಯಿಂದ ನಿರ್ಗಮಿಸಿದರು. ಬೆಂಗಳೂರಿಗೆ ತುರ್ತಾಗಿ ಹೋಗಬೇಕಿರುವುದರಿಂದ ಹೋಗುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿ ಹೊರಟರು ಎಂದು ಹೇಳಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮಾತೃಭಾಷೆ ಶಿಕ್ಷಣಕ್ಕೆ ಬೇಕಿದೆ ಸಾಂವಿಧಾನಿಕ ರಕ್ಷಣೆ: ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಸೆ

Exit mobile version