Site icon Vistara News

Karnataka Election: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ, ಯಾರು ಮೊದಲು?

Voting

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (karnataka election) ಸ್ಪರ್ಧಿಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಂದಿನಿಂದ (ಏಪ್ರಿಲ್‌ 13) ಏಪ್ರಿಲ್ 20ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಈಗಾಗಲೇ ಯಾವ ದಿನ ನಾಮಪತ್ರ ಸಲ್ಲಿಕೆ ಮಾಡಬೇಕು ಅಂತ ಅಭ್ಯರ್ಥಿಗಳು ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಆರಂಭವಾದ್ರೂ ಮೂರೂ ಪಕ್ಷಗಳಲ್ಲೂ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ.

ಬಿಜೆಪಿ 211 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್‌ಗೊಳಿಸಲಾಗಿದ್ದು, ಇಂದು ಇನ್ನೊಂದು ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ 166 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಟ್ಟಿ ಬಿಡುಗಡೆ ಮಾಡಿದೆ. ಇಂದು ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬಳಿಕ ಎರಡನೇ ಪಟ್ಟಿ ಬಿಡುಗಡೆ ಮಾಡಲು ಹಲವು ಅಡ್ಡಿ ಆತಂಕ ಎದುರಾಗಿವೆ. ಇಂದು ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಹಾಸನದ ಟಿಕೆಟ್ ಕಗ್ಗಂಟಾಗಿ ಎರಡನೇ ಪಟ್ಟಿ ಬಿಡುಗಡೆಗೆ ಮಾಜಿ ಸಿಎಂ ಎಚ್ಡಿಕೆ ಹಿಂದೇಟು ಹಾಕುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಯಾಗಿರದಿದ್ದರೂ ಅಭ್ಯರ್ಥಿಗಳು ಈಗಾಗಲೇ ತಮ್ಮ ಪ್ರಚಾರ ಆರಂಭಿಸಿದ್ದಾರೆ. ಪಕ್ಷದ ನಾಯಕರು ಕೂಡ ವಿವಿಧ ಕ್ಷೇತ್ರಗಳಲ್ಲಿ ಓಡಾಡಿ ತಮ್ಮ ಛಾಪು ಬೀರಲು ಯತ್ನಿಸುತ್ತಿದ್ದಾರೆ. ಇನ್ನೂ ಘೋಷಣೆಯಾಗದೆ ಉಳಿದಿರುವ ಸ್ಥಾನಗಳಿಗಾಗಿ ಪಕ್ಷದೊಳಗಿನ ಆಕಾಂಕ್ಷಿಗಳಲ್ಲಿ ಹೋರಾಟ ಮುಂದುವರಿದಿದೆ.

ಇದನ್ನೂ ಓದಿ: Karnataka Election: ಜನರಿಗೆ ಬೆದರಿಕೆ; 3 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲು ಎಚ್‌.ಡಿ.ದೇವೇಗೌಡ ದೂರು

Exit mobile version