Site icon Vistara News

Karnataka Election : ತೇಜಸ್ವಿ ಸೂರ್ಯ ಹೇಳಿದ ಬೆಕ್ಕುಗಳ ಸ್ಟೋರಿ! ರಾಜಕೀಯ ಶುರು ಮಾಡಿದ್ವಾ ಮಾರ್ಜಾಲಗಳು!

#image_title

ಮಂಡ್ಯ: ಮಂಡ್ಯದಲ್ಲಿ ಬುಧವಾರ ನಡೆದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ (Karnataka Election) ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇಂಟ್ರೆಸ್ಟಿಂಗ್‌ ಕಥೆಯೊಂದನ್ನು ಹೇಳಿದರು.

ಕಥೆ ಹೀಗಿದೆ: ಒಂದು ಊರಿನಲ್ಲಿ ಒಂದು ಅಜ್ಜಿ ಬೆಕ್ಕನ್ನು ಸಾಕಿದ್ದರು. ಆ ಬೆಕ್ಕು ಕೆಲವು ಮರಿಗಳಿಗೆ ಜನ್ಮ ನೀಡಿತ್ತು. ಆಗಷ್ಟೇ ಹುಟ್ಟಿದ ಬೆಕ್ಕಿಮರಿಗಳು ವಿಚಿತ್ರವಾಗಿ ವರ್ತಿಸುತ್ತಾ ಮಾತನಾಡಲು ಆರಂಭಿಸಿದುವಂತೆ.. ಕಿವಿಗೊಟ್ಟು ಕೇಳಿದರೆ, ʻಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ.. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆʼ ಅಂತ ಅವು ಹೇಳುತ್ತಿರುವುದು ಕೇಳಿಸಿತಂತೆ. ಇದು ಆ ಊರಿನಲ್ಲಿ ದೊಡ್ಡ ಸುದ್ದಿಯಾಯಿತು. ತುಂಬಾ ಜನ ಬಂದು ಕೇಳಿ, ಹೌದಲ್ಲಾ ಅಂತ ಅಚ್ಚರಿಪಟ್ಟರಂತೆ.

ಈ ವಿಚಾರ ತಿಳಿದು ದಿಲ್ಲಿಯಿಂದ ಕಾಂಗ್ರೆಸ್‌ ಕಡೆಯಿಂದ ಎಂಟು ಜನ ಕ್ಯಾಮೆರಾಮ್ಯಾನ್‌ಗಳ ಟೀಮ್‌ ಬಂದೇ ಬಿಟ್ಟಿತಂತೆ. ಕ್ಯಾಮೆರಾ ಓಪನ್‌ ಮಾಡಿ ಬೆಳಕು ಹಿಡಿದು ಬೆಕ್ಕಿನ ಮಾತುಗಳನ್ನು ರೆಕಾರ್ಡ್‌ ಮಾಡಲು ಮುಂದಾದರಂತೆ. ಆಗ ಬೆಕ್ಕಿನ ಮರಿಗಳು ʻಬಿಜೆಪಿ ಅಧಿಕಾರಕ್ಕೆ ಬರುತ್ತೆ.. ಬಿಜೆಪಿ ಅಧಿಕಾರಕ್ಕೆ ಬರುತ್ತೆʼ ಅಂತ ಹೇಳಲು ಆರಂಭಿಸಿದುವಂತೆ.

ಇದರಿಂದ ಕೋಪಗೊಂಡ ಅವರು, ʻʻಏನಜ್ಜಿ.. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಅಂತಿದ್ರಲ್ಲ.. ಈಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾರೆʼʼ ಎಂದು ಕೇಳಿದರಂತೆ. ಆಗ ಅಜ್ಜಿ ಹೇಳಿದಳಂತೆ: ʻʻಆ ಬೆಕ್ಕುಗಳು ನಿನ್ನೆವರೆಗೆ ಕಣ್ಣು ಮುಚ್ಚಿದ್ದವು.. ಇವತ್ತು ಕಣ್ಣು ತೆರೆದಿವೆʼ!

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ ಕೇಳಿದ ಕಥೆ ಇದು ಹೇಳಿ ಕಥೆ ಮುಗಿಸಿದರು.

ಮಾತು ಮುಂದುವರಿಸಿದ ತೇಜಸ್ವಿ ಸೂರ್ಯ ಅವರು, ʻʻಈ ಬೆಕ್ಕುಗಳ ಹಾಗೇ ಮಂಡ್ಯ ಮತ್ತು ಹಳೇ ಮೈಸೂರು ಭಾಗದ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು ಕೂಡಾ ಕಣ್ಣು ಬಿಡಿ. ಕಣ್ಣು ಬಿಟ್ಟು ಬಿಜೆಪಿಗೆ ಬೆಂಬಲ ನೀಡಿ. ನೀವು ಕಣ್ಣು ಮುಚ್ಚಿಕೊಂಡು ಜೆಡಿಎಸ್, ಕಾಂಗ್ರೆಸ್ ಅಂತ ಹೇಳ್ತಾ ಇದ್ದರೆ ಅವು ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ. ಕಣ್ಣು ತೆರೆದ ಬೆಕ್ಕುಗಳು ಹೇಳಿದ ಹಾಗೆ ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರೋದುʼʼ ಎಂದರು.

ಹಿಂದೆಂದೂ ಆಗದ ಕೆಲಸಗಳು ಆಗಿವೆ ಎಂದ ಸೂರ್ಯ

ಸಮಾರಂಭದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಹಲವು ಸಾಧನೆಗಳನ್ನು ಹೇಳಿಕೊಂಡರು.
ʻʻ70 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಹೆದ್ದಾರಿಗಳನ್ನು ಐದು ವರ್ಷದಲ್ಲಿ ನಮ್ಮ ಸರ್ಕಾರ ಮಾಡಿದೆ. ದಶಪಥ ಹೈವ ಮಾಡಿದ್ದು ನಮ್ಮ ಮೋದಿ ಸರ್ಕಾರ. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಶುರು ಮಾಡಿದ್ದು ನಮ್ಮ ಸರ್ಕಾರ. ಇದನ್ನು ನಾವು ಜನರಿಗೆ ತಿಳಿಸುವ ಯತ್ನ ಮಾಡಬೇಕಿದೆʼʼ ಎಂದರು.

ಮಾತಿಗೂ ಮೊದಲೇ ಭಾರತ್ ಮಾತಾ ಕೀ ಜೈ ಎಂದು ಜೈ ಕಾರ ಕೂಗಿಸಿದ ತೇಜಸ್ವಿ ಸೂರ್ಯ, ʻನಿಮ್ಮ ಕೂಗು ಇಲ್ಲಿನ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಫೌಂಡೇಷನ್ ಅನ್ನು ಅಲುಗಾಡಿಸುವಂತಿರಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ : CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?;‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

Exit mobile version