ಕೋಲಾರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಡೇರಿಸುವುದಾಗಿ ಘೋಷಣೆ ಮಾಡಿರುವ ನಾಲ್ಕು ಗ್ಯಾರಂಟಿ ಯೋಜನೆಗಳನ್ನು, ಕಾಂಗ್ರೆಸ್ ಸರ್ಕಾರದ ಮೊದಲ ಕ್ಯಾಬಿನೆಟ್‌ನಲ್ಲೇ ಅನುಷ್ಠಾನ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಕೋಲಾರದಲ್ಲಿ ಆಯೋಜಿಸಲಾಗಿದ್ದ ಜೈ ಭಾರತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ಕರ್ನಾಟಕ ಜನತೆ ಮುಂದೆ ನೇರವಾಗಿ ಮಾತಾಡುತ್ತೇನೆ. ಕೆಲವೇ ದಿನಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಂದರೆ ಏನು ಮಾಡ್ತೀರಾ ಎಂದು ಕೇಳಿದ್ರು. ಮೊದಲ ಕ್ಯಾಬಿನೆಟ್‌ನಲ್ಲಿ ಭರವಸೆ ಈಡೇರಿಸಬೇಕು ಎಂದು ಅಲ್ಲಿಯ ನಾಯಕರಿಗೆ ಹೇಳಿದ್ದೆ. ನಾನು ಇದನ್ನು ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರಿಗೂ ಹೇಳುತ್ತೇನೆ.
ನಾಲ್ಕು ಗ್ಯಾರಂಟಿಗಳನ್ನು ನಾವು ನೀಡುತ್ತೇವೆ. ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಘೋಷಣೆ ಮಾಡಿದ್ದೇವೆ. ಈ ಭರವಸೆಗಳು ಮೊದಲ ಕ್ಯಾಬಿನೆಟ್ ನಲ್ಲಿ ಅನುಷ್ಠಾನ ಆಗಬೇಕು ಎಂದು ನಾಯಕರಿಗೆ ಹೇಳುತ್ತಿದ್ದೇನೆ. ರಾಜ್ಯದ ಜನ ದೇಶಕ್ಕೆ ಸಂದೇಶ ಕೊಡಬೇಕು.
ಪ್ರಧಾನಿ ಆದಾನಿಗೆ ಹಣ ಕೊಡ್ತಾರೆ, ನಾವು ಬಡವರಿಗೆ ಹಣ ಕೊಡ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡ್ತೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಏನು ಕೆಲಸ ಮಾಡಿದೆ? 40% ಕಮಿಷನ್ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿ ಸರ್ಕಾರ ಹಣ ಲೂಟಿ ಮಾಡಿದೆ.
ಯಾವುದೇ ಕೆಲಸ ಮಾಡಿದ್ರು 40% ಕಮಿಷನ್ ಪಡೆದಿದ್ದಾರೆ. ಇದು ನಾನು ಹೇಳಿದ್ದಲ್ಲ, ಗುತ್ತಿಗೆದಾರ ಸಂಘದ ಅಧ್ಯಕ್ಷ ಪಿಎಂಗೆ ಪತ್ರ ಬರೆದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಇಲ್ಲಿಯವರೆಗೆ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಪಿಎಂ ಮೌನದ ಅರ್ಥ, ತಾವು ಸಹ 40% ಕಮಿಷನ್‌ನಲ್ಲಿ ಭಾಗಿಯಾಗಿದ್ದಾರೆ ಎಂದು. ಹಗರಣಗಳ ಸರಮಾಲೆಗಳಿವೆ. ಖಾಸಗಿ ಸ್ಕೂಲ್ ಸಂಘಟನೆ, ಉಪನ್ಯಾಸಕರ ನೇಮಕಾತಿ ಹಗರಣ ಆಗಿದೆ.
ಪಾರ್ಲಿಮೆಂಟ್ ನಲ್ಲಿ ನಾನು ಪ್ರಶ್ನೆ ಕೇಳಿದ್ದಕ್ಕೆ ಮೈಕ್ ಅಫ್ ಮಾಡಿದ್ರು. ಅದಾನಿ ಹಾಗೂ ನಿಮಗೂ ಏನು ಸಂಬಂಧ ಎಂದು ಕೇಳಿದ್ದೆ ಅಷ್ಟೇ. ಏರ್ ಪೋರ್ಟ್ ಗಳನ್ನು ಅದಾನಿಗೆ ಕಾನೂನು ಬದಲಾವಣೆ ಮಾಡಿ ಕೊಡುತ್ತಿದ್ದಾರೆ. ಆದರೆ ಯಾಕೆ ಕೊಡುತ್ತಿದ್ದಾರೆ? ಅನುಭವ ಇರುವವರಿಗೆ ಕೊಡಬೇಕು ಎಂದು ನಿಯಮ ಇದೆ. ಆದರೆ ಅದಾನಿ ಅವರಿಗೆ ಅನುಭವ ಇಲ್ಲ.
ಅದಾನಿ ಕಂಪನಿಯಲ್ಲಿ ಚೀನಾದ ಡೈರೆಕ್ಟರ್ ಕೂತಿದ್ದಾರೆ. ಚೀನಾ ವ್ಯಕ್ತಿ ಅಲ್ಲಿ ಯಾಕೆ ಬಂದಿದ್ದಾರೆ? ಇದರ ಬಗ್ಗೆ ಮೋದಿ, ಅದಾನಿ ಉತ್ತರ ನೀಡಬೇಕು. ನಾನು ಪ್ರಶ್ನೆ ಮಾಡಿದಾಗೆಲ್ಲ ಓಬಿಸಿ ವಿಚಾರ ತೆಗಿತಾರೆ. ಓಬಿಸಿಗೆ ಅಪಮಾನ ಮಾಡಿದ್ದೇನೆ ಅಂತಾರೆ. ಹಾಗಾದ್ರೆ ಓಬಿಸಿ ಬಗ್ಗೆ ಇವತ್ತು ನಾನು ಮಾತನಾಡುತ್ತೇನೆ.
2011 ರಲ್ಲಿ ಜನಸಂಖ್ಯೆ ಗಣತಿ ಮಾಡಿದ್ದೇವೆ. ಯುಪಿಎ ಸರ್ಕಾರದ ಜನಗಣತಿ ಮಾಡಿದೆ. ಮೋದಿ ಅವರೇ ಆ ಜನಗಣತಿ ಬಿಡುಗಡೆ ಮಾಡಿಬಿಡಿ. ನೀವು ಬಿಡುಗಡೆ ಮಾಡಲಿಲ್ಲ ಅಂದ್ರೆ ಒಬಿಸಿಗೆ ಮೋಸ ಮಾಡಿದಂತೆ ಎಂದರು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಕೇಸ್; ತೀರ್ಪು ಕಾಯ್ದಿರಿಸಿದ ಕೋರ್ಟ್, ಏ.20ಕ್ಕೆ ಆದೇಶ