ಬೆಂಗಳೂರು: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ 34 ಕೇಂದ್ರಗಳಲ್ಲಿ ಆರಂಭಗೊಂಡಿದೆ. ರಾಜ್ಯದ ರಾಜಕೀಯ ಅಧಿಕಾರದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಮತ ಎಣಿಕೆ ಇದಾಗಿದೆ.
ಮೊದಲು ಅಂಚೆ ಮತಗಳು, ಬಳಿಕ 80 ವರ್ಷ ಮೀರಿದವರ ಮತಗಳನ್ನು ಲೆಕ್ಕ ಹಾಕಲಾಗುತ್ತಿದೆ. ಬಳಿಕ ಸ್ಟ್ರಾಂಗ್ ರೂಮ್‌ನಲ್ಲಿದ್ದ ವಿವಿಪ್ಯಾಟ್‌ಗಳನ್ನು ಹೊರತೆಗೆದು ಮತ ಎಣಿಕೆ ಟೇಬಲ್‌ಗಳಿಗೆ ತಂದು ಕೌಂಟಿಂಗ್ ಆರಂಭಿಸಲಾಗಿದೆ.
ಬಹುಮತದ ಸರ್ಕಾರ ರಚಿಸಲು 113 ಮ್ಯಾಜಿಕ್ ನಂಬರ್ ಆಗಿದೆ. ಸದ್ಯ ಬಿಜೆಪಿ 116 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 69 ಹಾಗೂ ಜೆಡಿಎಸ್ 29 ಶಾಸಕರನ್ನು ಹೊಂದಿದೆ. ಒಬ್ಬ ಬಿಎಸ್‌ಪಿ ಶಾಸಕ, ಇಬ್ಬರು ಪಕ್ಷೇತರರು, ಒಬ್ಬ ಸ್ಪೀಕರ್ ಹಾಗೂ ಸಾವು ಮತ್ತು ರಾಜೀನಾಮೆಯಿಂದಾಗಿ 6 ಕ್ಷೇತ್ರಗಳಲ್ಲಿ ಶಾಸಕರು ಇಲ್ಲ.
ಎಲ್ಲೆಲ್ಲಿ ಮತ ಎಣಿಕೆ?
ಚಾಮರಾಜನಗರ – ಸರ್ಕಾರಿ ಎಂಜಿನಿಯರಿಂಗ್ ಕಾಲೇಜು
ಮೈಸೂರು- ಸರ್ಕಾರಿ ಮಹಾರಾಣಿ ಮಹಿಳಾ ಕಾಲೇಜು
ಕೊಡಗು – ಸೈಂಟ್ ಜೋಸೆಫ್ ಕಾನ್ವೆಂಟ್
ದಕ್ಷಿಣ ಕನ್ನಡ – ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್
ಹಾಸನ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಡೈರಿ ಸರ್ಕಲ್
ಮಂಡ್ಯ – ಮಂಡ್ಯ ವಿವಿ
ರಾಮನಗರ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ
ಬೆಂಗಳೂರು ಗ್ರಾಮಾಂತರ – ಅಕಾಶ್ ಇಂಟರ್ನ್ಯಾಷನಲ್ ಸ್ಕೂಲ್, ಪ್ರಸನ್ನಹಳ್ಳಿ, ದೇವನಹಳ್ಳಿ ಟೌನ್
ಬೆಂಗಳೂರು ನಗರ – ಸೈಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮತ್ತು ಪಿಯು ಕಾಲೇಜು, ಬೆಂಗಳೂರು
ಬಿಬಿಎಂಪಿ – ದಕ್ಷಿಣ ಎಸ್‌ಎಸ್‌ಎಂಆರ್‌ವಿ ಪಿಯ ಕಾಲೇಜು, ಜಯನಗರ
ಬಿಬಿಎಂಪಿ ಉತ್ತರ – ಮೌಂಟ್ ಕಾರ್ಮೆಲ್ ಪಿಯು ಕಾಲೇಜು
ಬಿಬಿಎಂಪಿ ಸೆಂಟ್ರಲ್ – ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ
ಕೋಲಾರ – ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು
ಚಿಕ್ಕಬಳ್ಳಾಪುರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿ ರಸ್ತೆ
ತುಮಕೂರು – ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಿಎಚ್ ರಸ್ತೆ / ತುಮಕೂರು ವಿವಿ ವಿಜ್ಞಾನ ಕಾಲೇಜು / ತುಮಕೂರು ವಿವಿ ಆರ್ಟ್ ಕಾಲೇಜು
ಚಿಕ್ಕಮಗಳೂರು – ಐಡಿಎಸ್‌ಜಿ ಕಾಲೇಜು
ಉಡುಪಿ – ಸೈಂಟ್ ಸಿಸಿಲಿಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಬ್ರಹ್ಮಗಿರಿ, ಉಡುಪಿ
ಶಿವಮೊಗ್ಗ – ಸೈಹಾದ್ರಿ ಆರ್ಟ್ಸ್ ಕಾಲೇಜು
ದಾವಣಗೆರೆ – ಶಿವಗಂಗೋತ್ರಿ ದಾವಣಗೆರೆ ವಿವಿ
ಚಿತ್ರದುರ್ಗ- ಸರ್ಕಾರಿ ವಿಜ್ಞಾನ ಕಾಲೇಜು
ಬಳ್ಳಾರಿ – ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ವಿಜಯನಗರ – ಪ್ರೌಢದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೊಸಪೇಟೆ
ಹಾವೇರಿ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ದೇವಗಿರಿ
ಉತ್ತರ ಕನ್ನಡ – ಡಾ. ಎ.ವಿ ಬಾಳಿಗಾ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಕುಮಟಾ
ಧಾರವಾಡ – ಕೃಷಿ ವಿಜ್ಞಾನ ವಿವಿ
ಗದಗ- ಶ್ರೀ ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು, ಗದಗ
ಕೊಪ್ಪಳ- ಶ್ರೀ ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಕೊಪ್ಪಳ
ರಾಯಚೂರು – ಎಲ್ ವಿ ಡಿ ಕಾಲೇಜು
ಬೀದರ್ – ಬಿವಿಬಿ ಕಾಲೇಜು, ಬೀದರ್
ಕಲಬುರಗಿ – ಗುಲ್ಬರ್ಗ ವಿ.ವಿ
ಯಾದಗಿರಿ -ಸರ್ಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – ಸೈನಿಕ ಶಾಲೆ ಕ್ಯಾಂಪಸ್
ಬಾಗಲಕೋಟೆ – ತೋಟಗಾರಿಕಾ ವಿವಿ
ಬೆಳಗಾವಿ – ಆರ್ ಪಿ ಡಿ ಕಾಲೇಜು ಬೆಳಗಾವಿ