Site icon Vistara News

Karnataka Election Results 2023: ವಿ. ಸೋಮಣ್ಣ, ಡಾ. ಸುಧಾಕರ್‌, ಕಾರಜೋಳ ಸಹಿತ ಏಳು ಸಚಿವರಿಗೆ ಹಿನ್ನಡೆ

Election counting

Election counting

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಮತ ಎಣಿಕೆ ಕ್ಷಣ ಕ್ಷಣಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅತ್ಯಂತ ಮಹತ್ವದ ಬೆಳವಣಿಗೆ ಎಂದರೆ ಈ ಕ್ಷಣದಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರು ತಾವು ಸ್ಪರ್ಧಿಸಿರುವ ಚಾಮರಾಜ ನಗರ ಮತ್ತು ವರುಣ ಕ್ಷೇತ್ರಗಳೆರಡರಲ್ಲೂ ಹಿನ್ನಡೆಯಲ್ಲಿದ್ದಾರೆ. ಇದರ ಜತೆಗೆ ರಾಜ್ಯ ಸಚಿವ ಸಂಪುಟದ ಏಳು ಮಂದಿ ಸಚಿವರು ಹಿನ್ನಡೆಯಲ್ಲಿದ್ದಾರೆ.

ಚಾಮರಾಜ ನಗರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ಅವರು 3000ಕ್ಕೂ ಅಧಿಕ ಮತಗಳ ಆರಂಭಿಕ ಮುನ್ನಡೆಯನ್ನೇ ಪಡೆದಿದ್ದಾರೆ. ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಮುನ್ನಡೆಯಲ್ಲಿದ್ದಾರೆ. ವಿ. ಸೋಮಣ್ಣ ಅವರನ್ನು ಬಿಜೆಪಿ ಭಾರಿ ನಿರೀಕ್ಷೆಯೊಂದಿಗೆ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕೆ ಇಳಿಸಿತ್ತು. ಆದರೆ, ಎರಡೂ ಕಡೆ ಅವರು ಹಿನ್ನಡೆಯಲ್ಲಿದ್ದಾರೆ.

ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಡಾ. ಕೆ. ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ ಆರಂಭಿಕ ಹಂತದಲ್ಲೇ 1400 ಮತಗಳಿಂದ ಮುಂದಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ತಮ್ಮಯ್ಯ ಅವರ ವಿರುದ್ಧ ಹಿನ್ನಡೆಯಲ್ಲಿದ್ದಾರೆ.

ಸಚಿವ ಸಿ.ಸಿ. ಪಾಟೀಲ್‌, ಶ್ರೀರಾಮುಲು, ಗೋವಿಂದ ಕಾರಜೋಳ. ಎಸ್‌ಟಿ ಸೋಮಶೇಖರ್‌ ಅವರಿಗೂ ಹಿನ್ನಡೆಯಾಗಿದೆ.

Exit mobile version