Site icon Vistara News

Karnataka Election Results: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಬ್ಬರಕ್ಕೆ ಬಿಜೆಪಿ ನಿರುತ್ತರ!

Karnataka Election Results: Congress more ahead of BJP in Social media campaign

#image_title

ಬೆಂಗಳೂರು, ಕರ್ನಾಟಕ: ಸೋಷಿಯಲ್ ಮೀಡಿಯಾ (Social Media) ನಿರ್ವಹಣೆ ಮತ್ತು ಪ್ರಚಾರದ ವಿಷಯದಲ್ಲಿ ಬಿಜೆಪಿಗೆ ಹೋಲಿಕೆ ಮಾಡಿದರೆ, ಕಾಂಗ್ರೆಸ್ (Congress) ಪ್ರದರ್ಶನ ಅಷ್ಟಕ್ಕಷ್ಟೇ ಎಂಬ ಮಾತು ಜನಜನಿತ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಈ ಮಾತನ್ನು ಸುಳ್ಳು ಮಾಡಿದೆ. ಚುನಾವಣೆ ಘೋಷಣೆಗಿಂತ ಐದಾರು ತಿಂಗಳ ಮೊದಲೇ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ವಿರುದ್ಧ ನರೇಟಿವ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. 40 ಪರ್ಸೆಂಟ್ ಕಮಿಷನ್ ಮತ್ತು ಪೇಸಿಎಂ ಅಭಿಯಾನಗಳು ಭಾರೀ ಯಶಸ್ವಿಯಾಗಿದ್ದವು. ಈ ಅಭಿಯಾನದಿಂದ ರಕ್ಷಿಸಿಕೊಳ್ಳುವುದರಲ್ಲಿ ಬಿಜೆಪಿ ಚುನಾವಣೆ ಮುಗಿಯುವ ತನಕ ಕೆಲಸ ಮಾಡಬೇಕಾಯಿತು. ಹೊರತು, ಅಗ್ರೇಸ್ಸಿವ್ ಕಾಂಗ್ರೆಸ್ ವಿರುದ್ಧ ನರೇಟಿವ್ ಸೆಟ್ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾಂಗ್ರೆಸ್ ಟೀಂ ಅವಕಾಶವನ್ನೂ ನೀಡಲಿಲ್ಲ!(Karnataka Election Results)

ಕಾಂಗ್ರೆಸ್ ಆರಂಭಿಸಿದ ಪೇಸಿಎಂ ಅಭಿಯಾನವು ನಿರೀಕ್ಷಿ ಮೀರಿ ಪ್ರತಿಕ್ರಿಯೆಯನ್ನು ಕಾಂಗ್ರೆಸ್‌ಗೆ ತಂದುಕೊಟ್ಟಿತ್ತು. ಇದರಿಂದ ಉತ್ತೇಜಿತರಾದ ಕಾಂಗ್ರೆಸ್ ಇನ್ನಷ್ಟು ಅಗ್ರೇಸ್ಸಿವ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಯಿತು. ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಯನ್ನು ಹಣಿಯುವ ಕೆಲಸವನ್ನು ಮಾಡಿತು. ದಿನಕ್ಕೆ ಹಲವಾರು ಪೋಸ್ಟ್‌ಗಳನ್ನು ಮಾಡಿ, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಲು ಇದು ವೇದಿಕೆಯನ್ನು ಕಲ್ಪಿಸಿತು.

ಬಿಜೆಪಿಯ ಯಾವುದೇ ಹೇಳಿಕೆ, ಆರೋಪ, ಪ್ರತ್ಯಾರೋಪ ಇತ್ಯಾದಿ ಸಂಗತಿಗಳಿಗೆಲ್ಲ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಹೋಯಿತು. ಇಲ್ಲವೇ ತನ್ನ ಪೋಸ್ಟ್‌ಗಳಿಗೆ ಹೇಳಿಕೆ ನೀಡಿ, ಟ್ರ್ಯಾಪ್‍ಗೆ ಬಿಜೆಪಿ ಬೀಳುವಂತೆ ಮಾಡುವಲ್ಲಿ ಕಾಂಗ್ರೆಸ್ ಐಟಿ ತಂಡ ಯಶಸ್ವಿಯಾಯಿತು. ಬಹುಶಃ ಕರ್ನಾಟಕದಲ್ಲಿ ಇಷ್ಟು ದೊಡ್ಡ ಜಯಕ್ಕೆ ಐಟಿ ಟೀಂ, ಸೋಷಿಯಲ್ ಮೀಡಿಯಾ ಟೀಂನ ವೃತ್ತಿಪರತೆ ಹಾಗೂ ಬದ್ಧತೆಯು ತನ್ನದೇ ಆದ ಕಾಣಿಕೆಯನ್ನು ನೀಡಿತು.

ಇದನ್ನೂ ಓದಿ: Belgaum Uttar Election Results: ಬೆಳಗಾವಿ ಉತ್ತರದಲ್ಲಿ ತತ್ತರಿಸಿದ ಬಿಜೆಪಿ, ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ

ಈ ವಿಷಯದಲ್ಲಿ ಬಿಜೆಪಿ ಬಹಳ ಹಿಂದೆ ಬಿತ್ತು. ವಾಸ್ತವದಲ್ಲಿ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬೇಕೆಂಬ ಪಾಠವನ್ನು ಇಡೀ ದೇಶಕ್ಕೆ ಹೇಳಿಕೊಟ್ಟಿದ್ದೇ ಬಿಜೆಪಿ. ಆದರೆ, ಕರ್ನಾಟಕದ ಮಟ್ಟೆಗೆ ಈ ವಿಷಯದಲ್ಲಿ ಬಿಜೆಪಿಯೇ ವೈಫಲ್ಯ ಕಂಡಿದ್ದು ವಿಪರ್ಯಾಸ. ಯಾವುದೇ ಬಿಜೆಪಿಯ ಶಕ್ತಿಯಾಗಿತ್ತೋ ಆ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದು ಈ ಬಾರಿ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕ ಚುನಾವಣೆ ಫಲಿತಾಂಶ ಮತ್ತು ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version