Site icon Vistara News

Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್

Karnataka Election 2023 LIVE

ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಬುಧವಾರ ದಿಲ್ಲಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಿ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. ಜೆಡಿಎಸ್ ಕೂಡ ತನ್ನ ಸದಸ್ಯರನ್ನು ಹೊಂದಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಚುನಾವಣೆಗಳನ್ನು ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದೆ(Karnataka Election 2023 LIVE).

Mallikarjun Tippar

ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ. #bjpyebharavase ಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ

– ಕರ್ನಾಟಕ ಬಿಜೆಪಿ ಟ್ವೀಟ್

Mallikarjun Tippar

ರಾಜ್ಯ ಬಿಜೆಪಿಯಿಂದ ಟ್ವಿಟ್..

ರಾಜ್ಯದಲ್ಲಿ ಕಮಲ‌ ಅರಳಿಸಲು ವೇದಿಕೆ ಸಿದ್ದವಾಗಿದೆ..

ಪಕ್ಷವನ್ನ ಅಡಳಿತಕ್ಕೆ ತರಲು ಹಗಲಿರುಳು ಶ್ರಮಿಸೋಣ ಎಂದು ಟ್ವಿಟ್

Mallikarjun Tippar

:Karnataka Election 2023 Live: 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾ ಪಟ್ಟಿ ಹೀಗಿದೆ…

ಗೆಜೆಟ್ ನೋಟಿಫಿಕೇಷನ್- ಏ.13

ನಾಮಿನೇಷನ್‌ಗೆ ಕೊನೆ ದಿನ- ಏ.20

ನಾಮಪತ್ರ ಪರಿಶೀಲನೆ- ಏ.21

ನಾಮಪತ್ರ ಹಿಂಪಡೆಯಲು ಕೊನೆ ದಿನ- ಏ.24

ಮತದಾನ ದಿನಾಂಕ- ಮೇ 10

ಫಲಿತಾಂಶ ಪ್ರಕಟ- ಮೇ 13

ಎಲೆಕ್ಷನ್ ಪ್ರಕ್ರಿಯೆ ಪೂರ್ಣ- ಮೇ 15

Mallikarjun Tippar

Karnataka Election 2023 LIVE: ಮೇ 10ಕ್ಕೆ ಮತದಾನ, ಮೇ 13ಕ್ಕೆ ರಿಸಲ್ಟ್ ಪ್ರಕಟವಾಗಲಿದೆ

– ಆಯೋಗ

Mallikarjun Tippar

Karnataka Election 2023 LIVE: ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ

– ಆಯೋಗ

Exit mobile version