Site icon Vistara News

Karnataka Election: ಲಿಂಗಾಯತ ಸೀಟ್‌ ಜಾಸ್ತಿ ಬಂದರೆ ಶಾಮನೂರು ಕೂಡಾ ಸಿಎಂ ರೇಸ್‌ಗೆ ಎಂಟ್ರಿ

Shamanur Shivashankarappa eyes on CM Post

Shamanur Shivashankarappa eyes on CM Post

ದಾವಣಗೆರೆ: ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಲಿಂಗಾಯತ ಅಭ್ಯರ್ಥಿಗಳು ಗೆದ್ದರೆ ನಾನೂ ಮುಖ್ಯಮಂತ್ರಿ ಅಭ್ಯರ್ಥಿ (Chief minister Candidate) ಯಾಗಲಿದ್ದೇನೆ: ಹೀಗೆಂದು ನೇರವಾಗಿ ಹೇಳಿದ್ದಾರೆ 92 ವರ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarapp).

ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ‌ ಕಾಂಗ್ರೆಸ್ 140ಕ್ಕೂ ಹೆಚ್ಚಿನ ಸೀಟ್ ಗೆಲ್ಲಲಿದೆ. ಎನ್.ಡಿ.ಟಿ.ವಿ ಸಮೀಕ್ಷೆಗಿಂತಲೂ ಹಚ್ಚಿನ ಸ್ಥಾನ ಕಾಂಗ್ರೆಸ್ ಗೆ ಬರಲಿದೆ ಎಂದು ಹೇಳಿದರು. ಅದರ ಜತೆಗೆ ಕಾಂಗ್ರೆಸ್ ನಲ್ಲಿ ಲಿಂಗಾಯತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ನಾನೂ ಮುಖ್ಯಮಂತ್ರಿ ಹುದ್ದೆಗೆ ಕ್ಲೇಮ್‌ ಮಾಡಲಿದ್ದೇನೆ ಎಂದು ಶಿವಶಂಕರಪ್ಪ ಹೇಳಿದರು.

ʻʻಕೌಂಟಿಂಗ್ ಆದ್ಮೇಲೆ ಲಿಂಗಾಯತರು ಎಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ ನೋಡಬೇಕು. ಮೆಜಾರಿಟಿ ಲಿಂಗಾಯತರು ಗೆದ್ದಿದ್ದಾರೆ. ನಾವು ಲಿಂಗಾಯತ ಸಿಎಂ ಹಕ್ಕು ನಾವು ಚಲಾಯಿಸುತ್ತೇವೆʼʼ ಎಂದು ಹೇಳಿದ ಅವರು, ʻʻಸಿಎಂ ಹುದ್ದೆಗೆ ಬಹಳ ಜನ ಆಕಾಂಕ್ಷಿಗಳಿದ್ದಾರೆ, ಹಿರಿಯರಿದ್ದಾರೆ, ಬಲಿಷ್ಠರಿದ್ದಾರೆ ಎಂದರು.

ಕಡಿಮೆ ಸೀಟು ಬಂದರೆ ಜೆಡಿಎಸ್‌ ಜತೆ ಮೈತ್ರಿ ಎಂದ ಶಾಮನೂರು

ಒಂದು ವೇಳೆ ಕಾಂಗ್ರೆಸ್‌ ಸರ್ಕಾರಕ್ಕೆ ಬಹುಮತದಷ್ಟು ಸೀಟು ಬರದೆ ಹೋದರೆಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಅವರು ಘಂಟಾಘೋಷವಾಗಿ ಹೇಳಿದರು.

ʻಕಾಂಗ್ರೆಸ್‌ಗೆ ಬಹುಮತ ಬಾರದೇ ಇದ್ದರೆ ಮೈತ್ರಿ ಮಾಡಿಕೊಳ್ಳುವುದು ಖಚಿತ. ಮೈತ್ರಿಗೂ ಮುನ್ನಾ ಸಿಎಂ ಯಾರಾಗಬೇಕು, ಡಿಸಿಎಂ ಯಾರು ಆಗಬೇಕು ಅನ್ನುವ ಚರ್ಚೆ ನಡೆಯಲಿದೆʼʼ ಎಂದು ಹೇಳಿದ ಅವರು, ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಹೋಗೊಲ್ಲ, ಅಳೆದು, ತೂಗಿ ಜೆಡಿಎಸ್ ನಿರ್ಧಾರ ತೆಗೆದುಕೊಳ್ಳುತ್ತದೆʼʼ ಎಂದು ಹೇಳಿದರು.

ಆದರೆ ಮಗ ಮಲ್ಲಿಕಾರ್ಜುನ ಅವರು ಹೇಳಿದ್ದೇ ಬೇರೆ!

ಲಿಂಗಾಯತರು ಗರಿಷ್ಠ ಸಂಖ್ಯೆಯಲ್ಲಿ ಗೆದ್ದರೆ ನಾನೂ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮಗ, ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಅಷ್ಟೊಂದು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲ.

ʻʻನಿಮ್ಮ ತಂದೆಯವರೂ ಸಿಎಂ ರೇಸ್‌ನಲ್ಲಿ ಇದ್ದಾರಲ್ಲʼʼ ಎಂದು ಕೇಳಿದಾಗ, ಹಂಗೇನಿಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ, ನಿರ್ಧಾರ ತೆಗೆದುಕೊಳ್ಳುತ್ತಾರೆ. ಗೆದ್ದ ಎಲ್ಲ‌ ಶಾಸಕರು ಯಾರಿಗೆ ಬೆಂಬಲ‌ ಕೊಡ್ತಾರೋ ಅವ್ರು ಸಿಎಂ ಆಗ್ತಾರೆ. ಆಸೆ, ಎಲ್ಲರಿಗೂ ಇರತ್ತೆ, ಫಲಿತಾಂಶ ಬಂದ್ಮೇಲೆ ನೋಡೊಣʼʼ ಎಂದರು ಎಸ್.ಎಸ್.ಮಲ್ಲಿಕಾರ್ಜುನ್.

ಕಾಂಗ್ರೆಸ್‌ನಲ್ಲಿ ಈಗಾಗಲೇ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಹುದ್ದೆಗೆ ಪ್ರಬಲ ಪೈಪೋಟಿಯಲ್ಲಿದ್ದಾರೆ.. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ಇದೆ. ಇದರ ನಡುವೆ ಈಗ ಹೊಸದಾಗಿ ಶಾಮನೂರು ಪ್ರವೇಶ ಮಾಡಿದ್ದಾರೆ. ಈ ಬಾರಿ ಲಿಂಗಾಯತ ಶಾಸಕರು ದೊಡ್ಡ ಸಂಖ್ಯೆಯಲ್ಲಿ ಗೆದ್ದು ಬರಬಹುದು ಎಂಬ ಸೂಚನೆಯ ಹಿನ್ನೆಲೆಯಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಆಸೆ ಗರಿಗೆದರಿದಂತಿದೆ.

ಇದನ್ನೂ ಓದಿ: Karnataka Election : ವಾಸು ಹೋಟೆಲ್‌ನಲ್ಲಿ ಟಿಫಿನ್‌, ಅಮ್ಮನ ಆಶೀರ್ವಾದ; ರಿಲಾಕ್ಸ್‌ಡ್‌ ಡಿಕೆಶಿಗೆ ಸ್ವಲ್ಪ ಜ್ವರ!

Exit mobile version