Site icon Vistara News

Karnataka Election: ವರುಣದಲ್ಲಿ ಮೈಮರೆಯಬೇಡಿ: ಆಪ್ತರಿಂದ ಸಲಹೆ; ಸಿದ್ದರಾಮಯ್ಯ ಅಲರ್ಟ್; ಇಂದು ರಮ್ಯಾ, ಶಿವಣ್ಣ ಪ್ರಚಾರ

karnataka cm calculation behind five guarantee implementation

ವರುಣ: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ (Karnataka Election 2023) ಕಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಸ್ಟಾರ್‌ ಪ್ರಚಾರಕರೂ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ವರುಣ ಕ್ಷೇತ್ರವನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಸಂದೇಶವನ್ನು ಅವರ ಆಪ್ತರು ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇನ್ನಷ್ಟು ಅಲರ್ಟ್‌ ಆಗಿದ್ದಾರೆ.

ರಾಜ್ಯ ಗೆಲ್ಲುವುದರ ಜತೆಗೆ ಕ್ಷೇತ್ರವನ್ನೂ ಗೆಲ್ಲಲು ಸಿದ್ದರಾಮಯ್ಯ ಪ್ಲಾನ್‌ ರೂಪಿಸಿದ್ದಾರೆ. ವರುಣದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಸೋಮಣ್ಣ ಅವರ ಗೆಲುವು ಮರೀಚಿಕೆಯಂತೆ ಕಾಣಿಸಿದರೂ, ಬಿಜೆಪಿ ಹಾಗೂ ಸಂಘ ಪರಿವಾರದ ಗೇಮ್‌ ಪ್ಲಾನ್‌ ನಿರ್ಲಕ್ಷಿಸುವಂತಿಲ್ಲ. ಮೈಮರೆತರೆ ವರುಣ ಗೆಲುವು ಸುಲಭವಲ್ಲ ಎಂದು ಆಪ್ತರು ಸಲಹೆ ನೀಡಿದ್ದಾರೆ.

ಲಿಂಗಾಯತ ಮತಗಳೊಂದಿಗೆ ಇತರ ಹಿಂದುಳಿದ ವರ್ಗಗಳ ಮತಗಳನ್ನೂ ಒಲಿಸಿಕೊಳ್ಳಲು ಸೋಮಣ್ಣ ಅವರ ತಂಡ ಹೆಚ್ಚು ಶ್ರಮ ಹಾಕುತ್ತಿದೆ. ವರುಣದಲ್ಲಿ ಅವರ ಗೆಲುವು ರಾಜ್ಯ ರಾಜಕೀಯದಲ್ಲಿ ಅವರನ್ನು ಭಾರಿ ಎತ್ತರಕ್ಕೆ ಏರಿಸುವ ಸೂಚನೆ ಹೈಕಮಾಂಡ್‌ನಿಂದ ಅವರಿಗೆ ದೊರೆತಿರುವುದರಿಂದ, ಇಪ್ಪತ್ತನಾಲ್ಕು ಗಂಟೆಯೂ ಅವರು ವರುಣದಲ್ಲೇ ಠಿಕಾಣಿ ಹೂಡಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕಡೆಗಣಿಸುವಂತಿಲ್ಲ ಎಂದು ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಲಾಗಿದೆ.

ಆಪ್ತರ ಸಲಹೆಯಂತೆ ಆಲರ್ಟ್ ಆಗಿರುವ ಸಿದ್ದರಾಮಯ್ಯ, ಇಂದಿನಿಂದ ಚುನಾವಣೆ ಮುಗಿಯುವವರೆಗೂ ಮೈಸೂರಿನಲ್ಲಿ ಠಿಕಾಣಿ ಹೂಡಲಿದ್ದಾರೆ. ಇಂದು ವರುಣದಲ್ಲಿ ಅಬ್ಬರದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅವರ ಜತೆಗೆ ಇಂದು ತಾರಾ ಮೆರುಗು ಸಹ ಮೇಳೈಸಲಿದೆ. ನಟ ಶಿವರಾಜ್‌ ಕುಮಾರ್, ದುನಿಯಾ ವಿಜಿ ಹಾಗೂ ನಟಿ ರಮ್ಯ ಕೂಡ ಅವರಿಗೆ ಸಾಥ್ ನೀಡಲಿದ್ದಾರೆ.

ನಾಳೆ ಒಂದು ದಿನ ಚಿಕ್ಕಮಗಳೂರು ಪ್ರವಾಸ ಕೈಗೊಂಡು ಬಳಿಕ ಕೊನೆಯ ಎರಡು ದಿನ ಮತ್ತೆ ವರುಣದಲ್ಲಿ ಪ್ರಚಾರ ಮಾಡಲಿದ್ದಾರೆ ಸಿದ್ದರಾಮಯ್ಯ. ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಮಾಡಿ ಲಾಸ್ಟ್ ಮಿನಿಟ್ ಗೇಮ್ ಪ್ಲಾನ್ ಚೇಂಜ್ ಮಾಡಲಿದ್ದಾರೆ. ಕೊನೆಯ ಎರಡು ದಿನಗಳಲ್ಲಿ ತಂತ್ರಗಾರಿಕೆ ಬದಲಿಸಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Election: ಯತ್ನಾಳ್, ಪ್ರಿಯಾಂಕ್‌ ಖರ್ಗೆಗೆ ಚುನಾವಣೆ ಆಯೋಗ ಶೋಕಾಸ್‌ ನೋಟಿಸ್‌

Exit mobile version