ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯವೇ ಸಿದ್ಧವಾಗಿದೆ. ಬುಧವಾರ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಯಾರು ಭೇಟಿಯಾದರೂ ಚುನಾವಣೆ ಕುರಿತೇ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ? ಯಾವ ಪಕ್ಷಕ್ಕೆ ಬಹುಮತ? ಯಾರು ಸಿಎಂ ಆಗುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಹೀಗೆ ಚುನಾವಣೆ ಕುತೂಹಲದ ಜತೆಗೆ ಹಲವು ಕ್ಷೇತ್ರಗಳು ಕೂಡ ಗಮನ ಸೆಳೆದಿವೆ. ದೂರದ ಯಾದಗಿರಿಯ ಜನತೆಗೂ ವರುಣ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಸೋಲಬಹುದಾ ಎಂಬುದು ಸೇರಿ ಹಲವು ಕ್ಷೇತ್ರಗಳ ಕುರಿತು ಜನ ಚರ್ಚಿಸುತ್ತಿದ್ದಾರೆ.
ವರುಣದಲ್ಲಿ ಸಿದ್ದರಾಮಯ್ಯ ಹಾಗೂ ಸೋಮಣ್ಣ ನಡುವಿನ ಸಮರ ಕುತೂಹಲ ಕೆರಳಿಸಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸೋಲು-ಗೆಲುವಿನ ಮೇಲೆ ಎಲ್ಲರ ಕಣ್ಣೂ ನೆಟ್ಟಿವೆ. ಇನ್ನು, ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಅವರು ಗೆಲ್ಲುತ್ತಾರಾ? ಇಲ್ಲವೇ ಪ್ರೀತಂ ಗೌಡ ಮತ್ತೆ ಪ್ರಾಬಲ್ಯ ಮೆರೆಯುತ್ತಾರಾ ಎಂಬ ಕುತೂಹಲ ಮೂಡಿದೆ. ಲೋಕಸಭೆ ಚುನಾವಣೆಯಲ್ಲಿ ಸೋತು, ಈಗ ರಾಮನಗರದಿಂದ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಅವರ ಕ್ಷೇತ್ರದ ಕುರಿತು ಕೂಡ ಚರ್ಚೆಯಾಗುತ್ತಿದೆ. ರಾಜ್ಯದ ಇಂತಹ 26 ಕ್ಷೇತ್ರಗಳು ಹಾಗೂ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ನಾಯಕರ ಪಟ್ಟಿ ಹೀಗಿದೆ…
1-ಚನ್ನಪಟ್ಟಣ –
ಎಚ್.ಡಿ. ಕುಮಾರಸ್ವಾಮಿ – ಜೆಡಿಎಸ್
ಸಿ.ಪಿ. ಯೋಗೇಶ್ವರ್ – ಬಿಜೆಪಿ
2 – ವರುಣ
ಸಿದ್ದರಾಮಯ್ಯ – ಕಾಂಗ್ರೆಸ್
ವಿ. ಸೋಮಣ್ಣ – ಬಿಜೆಪಿ
3 -ಕನಕಪುರ
ಡಿ.ಕೆ.ಶಿವಕುಮಾರ್ – ಕಾಂಗ್ರೆಸ್
ಆರ್. ಅಶೋಕ್ – ಬಿಜೆಪಿ
4-ಹಾಸನ
ಸ್ವರೂಪ್ ಪ್ರಕಾಶ್ – ಜೆಡಿಎಸ್
ಪ್ರೀತಂ ಗೌಡ – ಬಿಜೆಪಿ
5- ಹುಬ್ಬಳ್ಳಿ ಧಾರವಾಡ ಸೆಂಟ್ರಲ್
ಜಗದೀಶ್ ಶೆಟ್ಟರ್ – ಕಾಂಗ್ರೆಸ್
ಮಹೇಶ್ ಟೆಂಗಿನಕಾಯಿ – ಬಿಜೆಪಿ
6 – ಅಥಣಿ
ಲಕ್ಷ್ಮಣ್ ಸವದಿ – ಕಾಂಗ್ರೆಸ್
ಮಹೇಶ್ ಕುಮಟಳ್ಳಿ – ಬಿಜೆಪಿ
7 – ಶಿಗ್ಗಾಂವಿ
ಬಸವರಾಜ ಬೊಮ್ಮಾಯಿ – ಬಿಜೆಪಿ
ಯಾಸೀರ್ ಅಹಮ್ಮದ್ ಖಾನ್ – ಕಾಂಗ್ರೆಸ್
8 – ಚಿತ್ತಾಪುರ
ಪ್ರಿಯಾಂಕ್ ಖರ್ಗೆ – ಕಾಂಗ್ರೆಸ್
ಮಣಿಕಂಠ ರಾಥೋಡ್ – ಬಿಜೆಪಿ
9 – ಬೆಳಗಾವಿ ಗ್ರಾಮೀಣ
ಲಕ್ಷ್ಮೀ ಹೆಬ್ಬಾಳ್ಕರ್ – ಕಾಂಗ್ರೆಸ್
ನಾಗೇಶ್ ಮುನ್ನೋಳ್ಕರ್ – ಬಿಜೆಪಿ
10- ಬಳ್ಳಾರಿ ಗ್ರಾಮೀಣ
ಬಿ. ಶ್ರೀರಾಮುಲು – ಬಿಜೆಪಿ
ಬಿ.ನಾಗೇಂದ್ರ – ಕಾಂಗ್ರೆಸ್
11- ಸೊರಬ
ಮಧು ಬಂಗಾರಪ್ಪ – ಕಾಂಗ್ರೆಸ್
ಕುಮಾರ ಬಂಗಾರಪ್ಪ – ಬಿಜೆಪಿ
12- ಅರಸೀಕೆರೆ
ಶಿವಲಿಂಗೇಗೌಡ – ಕಾಂಗ್ರೆಸ್
ಎನ್. ಆರ್. ಸಂತೋಷ್ – ಜೆಡಿಎಸ್
13 – ಹೊಸಕೋಟೆ
ಎಂಟಿಬಿ ನಾಗರಾಜ್ – ಕಾಂಗ್ರೆಸ್
ಶರತ್ ಬಚ್ಚೇಗೌಡ – ಬಿಜೆಪಿ
14- ಧಾರವಾಡ
ವಿನಯ್ ಕುಲಕರ್ಣಿ – ಕಾಂಗ್ರೆಸ್
ಅಮೃತ್ ದೇಸಾಯಿ – ಬಿಜೆಪಿ
15 – ಗೋಕಾಕ್
ರಮೇಶ್ ಜಾರಕಿಹೊಳಿ – ಬಿಜೆಪಿ
ಮಹಾಂತೇಶ್ ಕಡಾಡಿ – ಕಾಂಗ್ರೆಸ್
16- ಮುಧೋಳ
ಗೋವಿಂದ ಕಾರಜೋಳ – ಬಿಜೆಪಿ
ಆರ್. ಬಿ. ತಿಮ್ಮಾಪುರ – ಕಾಂಗ್ರೆಸ್
17- ಕೊರಟಗೆರೆ
ಡಾ. ಜಿ. ಪರಮೇಶ್ವರ್ – ಕಾಂಗ್ರೆಸ್
ಸುಧಾಕರ್ ಲಾಲ್ – ಜೆಡಿಎಸ್
18- ಬೀದರ್ ದಕ್ಷಿಣ
ಬಂಡೆಪ್ಪ ಕಾಶಂಪುರ್ – ಜೆಡಿಎಸ್
ಅಶೋಕ್ ಖೇಣಿ – ಕಾಂಗ್ರೆಸ್
19- ತೀರ್ಥಹಳ್ಳಿ
ಆರಗ ಜ್ಞಾನೇಂದ್ರ – ಬಿಜೆಪಿ
ಕಿಮ್ಮನೆ ರತ್ನಾಕರ್ – ಕಾಂಗ್ರೆಸ್
20- ಹೊನ್ನಾಳಿ
ಎಂ.ಪಿ.ರೇಣುಕಾಚಾರ್ಯ – ಬಿಜೆಪಿ
ಡಿ.ಜಿ. ಶಾಂತನಗೌಡ – ಕಾಂಗ್ರೆಸ್
21- ಭಾಲ್ಕಿ
ಈಶ್ವರ್ ಖಂಡ್ರೆ – ಕಾಂಗ್ರೆಸ್
ಪ್ರಕಾಶ್ ಖಂಡ್ರೆ – ಬಿಜೆಪಿ
22- ಸಾಗರ
ಹರತಾಳು ಹಾಲಪ್ಪ – ಬಿಜೆಪಿ
ಬೇಳೂರು ಗೋಪಾಲಕೃಷ್ಣ – ಕಾಂಗ್ರೆಸ್
23- ಗಂಗಾವತಿ
ಜನಾರ್ದನ ರೆಡ್ಡಿ – ಕೆಆರ್‌ಪಿಪಿ
ಪರಣ್ಣ ಮುನವಳ್ಳಿ – ಬಿಜೆಪಿ
24- ಚಿಕ್ಕಮಗಳೂರು
ಸಿ.ಟಿ. ರವಿ – ಬಿಜೆಪಿ
ತಮ್ಮಯ್ಯ – ಕಾಂಗ್ರೆಸ್
25- ಚಾಮರಾಜನಗರ
ವಿ. ಸೋಮಣ್ಣ – ಬಿಜೆಪಿ
ಪುಟ್ಟರಂಗಶೆಟ್ಟಿ – ಕಾಂಗ್ರೆಸ್
26 – ರಾಮನಗರ
ನಿಖಿಲ್ ಕುಮಾರಸ್ವಾಮಿ – ಜೆಡಿಎಸ್
ಗೌತಮ್ ಗೌಡ – ಬಿಜೆಪಿ
ಇದನ್ನೂ ಓದಿ: Karnataka Election: ಪ್ರಜಾಪ್ರಭುತ್ವ ಹಬ್ಬಕ್ಕೆ ಚುನಾವಣೆ ಆಯೋಗ ಸಿದ್ಧ; ಹೇಗಿದೆ ವ್ಯವಸ್ಥೆ? ಯಾವ ರೀತಿ ಇದೆ ಭದ್ರತೆ?