ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಇಂದು ಅಂತಿಮ ದಿನವಾಗಿದೆ. ಹಲವಾರು ಘಟಾನುಘಟಿಗಳು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
224 ವಿಧಾನ ಸಭಾ ಕ್ಷೇತ್ರಗಳಿಗೂ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಫೈನಲ್ ಮಾಡಿವೆ. ಆದರೆ ಜೆಡಿಎಸ್ ಇನ್ನೂ 40ಕ್ಕೂ ಅಧಿಕ ಸ್ಥಾನಗಳಿಗೆ ಬಿ ಫಾರಂ ನೀಡಿಲ್ಲ. ಇದರಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಗೆ ಕಡೆಯ ದಿನವೂ ಟೆನ್ಷನ್ ಉಳಿದುಕೊಂಡಿದೆ.
ಇಂದು ಮಧ್ಯಾಹ್ನ ಮೂರು ಗಂಟೆಗೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಬೇಕಿದೆ. ಮೂರು ಗಂಟೆ ಬಳಿಕ ಚುನಾವಣಾಧಿಕಾರಿಗಳ ಕಚೇರಿ ಮುಚ್ಚಲಿದೆ.
ಹಾಲಿ ಶಾಸಕರಿಂದ ಇಂದು ನಾಮಪತ್ರ ಸಲ್ಲಿಕೆಯಾಗಲಿದೆ. ಶಾಸಕ ಬೈರತಿ ಸುರೇಶ್, ಕೃಷ್ಣಭೈರೇಗೌಡ, ಎನ್.ಎ ಹ್ಯಾರಿಸ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮತಮ್ಮ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿರುವ ನಾಯಕರು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬುಧವಾರ (ಏ.19) ಸಲ್ಲಿಕೆಯಾದ ನಾಮಪತ್ರಗಳ ವಿವರ ಹೀಗಿದೆ:
ಪುರುಷರು – 1041
ಮಹಿಳೆಯರು – 69
ಒಟ್ಟು – 1110.
ಪಕ್ಷಗಳಿಂದ ಅನುಮೋದಿಸಲ್ಪಟ್ಟ ನಾಮಪತ್ರಗಳು:
ಆಪ್ – 91
ಬಿಎಸ್‌ಪಿ – 46
ಬಿಜೆಪಿ – 164
ಕಾಂಗ್ರೆಸ್ – 147
ಎನ್‌ಪಿಪಿ – 1
ಜೆಡಿಎಸ್ – 108
ಸಿಪಿಐಎಂ – 1
ಪಕ್ಷೇತರ – 359
ನೋಂದಣಿಯಾದ ಗುರುತಿಸಲ್ಪಡದ ಪಕ್ಷಗಳು – 193
ಇದನ್ನೂ ಓದಿ: Karnataka Election 2023: ವಿ. ಸೋಮಣ್ಣ, ಬಿ.ಸಿ. ನಾಗೇಶ್ ಸೇರಿ ಹಲವು ಬಿಜೆಪಿ ನಾಯಕರಿಂದ ನಾಮಪತ್ರ ಸಲ್ಲಿಕೆ