ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಭರ್ಜರಿಯಾಗಿಯೇ ಮತದಾನ ದಾಖಲಾಗಿದೆ. ಇನ್ನು ಕೆಲವೇ ನಿಮಿಷಗಳಲ್ಲಿ (Karnataka Election Exit Poll) ಮತಗಟ್ಟೆ ಸಮೀಕ್ಷೆ ಲಭ್ಯವಾಗಲಿದ್ದು, ಜನರಲ್ಲಿ ಕುತೂಹಲ ಮೂಡಿದೆ.
ಎಕ್ಸಿಟ್ ಪೋಲ್ ರಿಪೋರ್ಟ್ ಬರುತ್ತಲೇ, ಅವುಗಳನ್ನು ಆಧರಿಸಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಅಂದಾಜು ಸಿಗಲಿದೆ. ಹಾಗಾಗಿ, ಎಕ್ಸಿಟ್ ಪೋಲ್ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಇನ್ನು, 2018ರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆಗಳು ಏನು ಹೇಳಿದ್ದವು? ಯಾರ ಸಮೀಕ್ಷೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಯಾರ ಸಮೀಕ್ಷೆ ಏನು ಹೇಳಿದ್ದವು?
ಎಬಿಪಿ ನ್ಯೂಸ್-ಹಾಗೂ ಸಿಎಸ್‌ಡಿಎಸ್ ಸಮೀಕ್ಷೆ ಪ್ರಕಾರ ಬಿಜೆಪಿ 79–89 ಸೀಟುಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿತ್ತು. ಹಾಗೆಯೇ, ಕಾಂಗ್ರೆಸ್ 92–102, ಜೆಡಿಎಸ್ 34–42 ಹಾಗೂ ಪಕ್ಷೇತರರು 1-7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಹಿತಿ ನೀಡಿತ್ತು. ಪಬ್ಲಿಕ್ ಟಿವಿ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 85–90, ಕಾಂಗ್ರೆಸ್ 90–95, ಜೆಡಿಎಸ್ 40–45 ಹಾಗೂ ಪಕ್ಷೇತರರು 0–6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: Karnataka Election: ಮತದಾನಕ್ಕೆ ಸಕಲ ಸಿದ್ಧತೆ; ರಾಜ್ಯಾದ್ಯಂತ ಭದ್ರತೆಗೆ 1.56 ಲಕ್ಷ ಪೊಲೀಸರ ನಿಯೋಜನೆ
ಫಲಿತಾಂಶ ಏನಾಗಿತ್ತು?
2018ರ ಚುನಾವಣೆ ಫಲಿತಾಂಶವು ಎಕ್ಸಿಟ್ ಪೋಲ್‌ನ ಬಹುತೇಕ ಸಮೀಕ್ಷೆಗಳಂತೆಯೇ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಬಿಜೆಪಿ 104 ಕ್ಷೇತ್ರ ಗೆದ್ದು ಅತಿ ಹೆಚ್ಚು ಕ್ಷೇತ್ರ ಪಕ್ಷವಾಗಿ ಹೊರಹೊಮ್ಮಿತ್ತು. ಇನ್ನು ಕಾಂಗ್ರೆಸ್ 80, ಜೆಡಿಎಸ್ 37 ಹಾಗೂ ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.