ಬಳ್ಳಾರಿ: ದುಡ್ಡಿನ ಧಣಿಗಳ ನಾಡೆಂದೇ ಖ್ಯಾತಿವೆತ್ತ ಬಳ್ಳಾರಿ (Ballary politics) ಈಗಲೂ ಹಣದ ಹೊಳೆಯೇ ಹರಿಯುವ ಕಣ. ಬಳ್ಳಾರಿ ನಗರ ಕ್ಷೇತ್ರದಿಂದ (Karnataka Elections 2023) ಕಾಂಗ್ರೆಸ್‌ನಿಂದ ನಾರಾ ಭರತ್ ರೆಡ್ಡಿ ಕಣಕ್ಕಿಳಿದಿದ್ದಾರೆ. ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷದಿಂದ ಪುತ್ರಿ ಬ್ರಹ್ಮಿಣಿ ರೆಡ್ಡಿ ಅವರೂ ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಸೋಮಶೇಖರ ರೆಡ್ಡಿ ಬಿಜೆಪಿ ಅಭ್ಯರ್ಥಿ. ಗ್ರಾಮೀಣ ಕ್ಷೇತ್ರದಿಂದ ಸಚಿವ ಶ್ರೀರಾಮುಲು ಆಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿ ಸಚಿವ ಬಿ. ಶ್ರೀರಾಮುಲು, ನಾರಾ ಭರತ್ ರೆಡ್ಡಿ ಮತ್ತು ಬ್ರಹ್ಮಿಣಿ ರೆಡ್ಡಿ ಅವರ ಸಂಪತ್ತಿನ ವಿವರಗಳಿವೆ..
ಸಚಿವ ಬಿ.ಶ್ರೀರಾಮುಲು (ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ)
ವಿದ್ಯಾರ್ಹತೆ – ಬಿಎ
ನಗದು ಹಣ- 5 ಲಕ್ಷ ರೂ., ಪತ್ನಿ ಬಿ.ಭಾಗ್ಯಲಕ್ಷ್ಮಿ- 2 ಲಕ್ಷ ರೂ., ಪುತ್ರಿ ಬಿ.ದೀಕ್ಷಿತ್- 25 ಸಾವಿರ ರೂ, ಪುತ್ರ ಧನುಶ್- 50ಸಾವಿರ ರೂ., ಪುತ್ರಿ ಬಿ.ಅಂಕಿತಾ- 20 ಸಾವಿರ ರೂ.,
ಬ್ಯಾಂಕುಗಳಲ್ಲಿ ಠೇವಣಿ- ರಾಮುಲು- 20924488ರೂ., ಪತ್ನಿ- 24739, ಪುತ್ರಿ-2,37,77,755 ರೂ., ಪುತ್ರ-92,02,498ರೂ., ಪುತ್ರಿ- 3,17,335ರೂ.,
ಕಾರು ಮತ್ತಿತರೆ ವಾಹನಗಳು– 1.20 ಕೋಟಿ ಮೌಲ್ಯದ ಬಿಎಂಡಬ್ಲ್ಯು., 75,26,467 ರೂ.ಮೌಲ್ಯದ ಬೆಂಜ್, 38,81,845 ರೂ.ಮೌಲ್ಯದ ಬಸ್.
ಪ್ರಕರಣಗಳು– 3 ಬಾಕಿ
ಚಿನ್ನಾಭರಣಗಳು : ರಾಮುಲು ಬಳಿ 2.36 ಕೋಟಿ ಮೌಲ್ಯದ 4257 ಗ್ರಾಂ ಚಿನ್ನಾಭರಣ, 7.60ಲಕ್ಷ ರೂ. ಮೌಲ್ಯದ 9500ಗ್ರಾಂ ಬೆಳ್ಳಿ.
ಪತ್ನಿ ಹೆಸರಿನಲ್ಲಿ 1.29 ಕೋಟಿ ಮೌಲ್ಯದ 2330 ಗ್ರಾಂ ಚಿನ್ನ,
ಪುತ್ರಿ ಹೆಸರಲ್ಲಿ 36 ಲಕ್ಷ ರೂ. ಮೌಲ್ಯದ 650 ಗ್ರಾಂ, ಪುತ್ರ-1.21 ಲಕ್ಷ ರೂ. ಬೆಲೆಯ 220 ಗ್ರಾಂ ಚಿನ್ನ, ಪುತ್ರಿ-5.54 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ
ಸಾಲ: ಬ್ಯಾಂಕ್ ಸೇರಿ ಇತರೆ-5,42,22,669 ರೂ., ಆದಾಯ ತೆರಿಗೆ ಬಾಕಿ- 28,01,403ರೂ.,
ಒಟ್ಟು ಆಸ್ತಿ ಮೌಲ್ಯ– ರಾಮುಲು: 46.57 ಕೋಟಿ., ಪತ್ನಿ- 21.60 ಕೋಟಿ., ಪುತ್ರಿ-2.95 ಕೋಟಿ ರೂ., ಪುತ್ರರು- 2.08 ಕೋಟಿ ರೂ.
ಒಟ್ಟು ಚರಾಸ್ತಿ – ರಾಮುಲು: 6.91 ಕೋಟಿ.ರೂ., ಪತ್ನಿ-1.31 ಕೋಟಿ., ಪುತ್ರಿ-2.95 ಕೋಟಿ., ಪುತ್ರ- 1.30 ಕೋಟಿ
ಒಟ್ಟು ಸ್ಥಿರಾಸ್ತಿ- ರಾಮುಲು 39.65 ಕೋಟಿ ರೂ., ಪತ್ನಿ- 20.29 ಕೋಟಿ.ರೂ., ಪುತ್ರ-50 ಲಕ್ಷ ರೂ.
ನಾರಾ ಭರತ್ ರೆಡ್ಡಿ: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ವಿದ್ಯಾರ್ಹತೆ- ಬಿಬಿಎಂ
ನಗದು ಹಣ- ಭರತ್ ರೆಡ್ಡಿ- 3.92ಲಕ್ಷ ರೂ., ಪತ್ನಿ ಬಿ.ಎಸ್.ವೈಜಯಂತಿ ರೆಡ್ಡಿ – 10.54 ಲಕ್ಷ ರೂ.,
ಬ್ಯಾಂಕುಗಳಲ್ಲಿ ಠೇವಣಿ- 15.54 ಲಕ್ಷ ರೂ., ಪತ್ನಿ- 64.21 ಲಕ್ಷ ರೂ.,
ಕಾರು ಮತ್ತಿತರೆ ವಾಹನಗಳು- 2
ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ- 54.62ಲಕ್ಷ ರೂ.
ಚಿನ್ನಾಭರಣ- ಭರತ್ ರೆಡ್ಡಿ- 1.51 ಕೋಟಿ ಮೌಲ್ಯದ 1885.83 ಗ್ರಾಂ ಚಿನ್ನ, 10.50 ಲಕ್ಷ ರೂ. ಮೌಲ್ಯದ 10.152 ಕೆಜಿ ಬೆಳ್ಳಿ,
ಪತ್ನಿ- 2.23ಕೋಟಿ ಮೌಲ್ಯದ 3750ಗ್ರಾಂ ಚಿನ್ನ, 45.22 ಲಕ್ಷ ರೂ. ಮೌಲ್ಯದ 50.25 ಕೆಜಿ ಬೆಳ್ಳಿ.
ಒಟ್ಟು ಆಸ್ತಿ ಮೌಲ್ಯ- ಭರತ್ ರೆಡ್ಡಿ 84.45 ಕೋಟಿ ರೂ., ಪತ್ನಿ- 5.70 ಕೋಟಿ ರೂ.,
ಚರಾಸ್ತಿ ಒಟ್ಟು – ಭರತ್ ರೆಡ್ಡಿ- 20.32ಕೋಟಿ ರೂ., ಪತ್ನಿ-4.38ಕೋಟಿ ರೂ.,
ಒಟ್ಟು ಸ್ಥಿರಾಸ್ತಿ- ಭರತ್ ರೆಡ್ಡಿ- 64.13ಕೋಟಿ ರೂ., ಪತ್ನಿ- 1.32 ಕೋಟಿ ರೂ.
ಸಾಲ: ಭರತ್ ರೆಡ್ಡಿ- 19.19ಕೋಟಿ ರೂ., ಪತ್ನಿ- 15.18 ಕೋಟಿ ರೂ.,
ಪ್ರಕರಣಗಳು: 2 ಬಾಕಿ.
ಬ್ರಹ್ಮಿಣಿ ರೆಡ್ಡಿ (ಬಳ್ಳಾರಿ ನಗರ ಕ್ಷೇತ್ರದ ಕೆಆರ್‌ಪಿಪಿ ಪಕ್ಷದ ಡಮ್ಮಿ ಅಭ್ಯರ್ಥಿ)
ವಿದ್ಯಾರ್ಹತೆ- ಎಂಬಿಎ, ದುಬೈ
ನಗದು ಹಣ- ಬ್ರಹ್ಮಿಣಿ- 1.35ಲಕ್ಷ ರೂ., ಪತಿ – 1.55ಲಕ್ಷ ರೂ.,
ಬ್ಯಾಂಕುಗಳಲ್ಲಿ ಠೇವಣಿ- 33.67ಲಕ್ಷ ರೂ., ಪತಿ- 34.35ಲಕ್ಷ ರೂ.,
ಕಾರು ಮತ್ತಿತರೆ ವಾಹನಗಳು– ಇಲ್ಲ.
ವಿವಿಧ ಸಂಸ್ಥೆಗಳಲ್ಲಿಹೂಡಿಕೆ- ಬ್ರಹ್ಮಿಣಿ- 7 ಕೋಟಿ ರೂ., ಪತಿ- 33ಲಕ್ಷ ರೂ.,
ಚಿನ್ನಾಭರಣ – 9.59 ಕೋಟಿ ಮೌಲ್ಯದ 13863.610 ಗ್ರಾಂ ಚಿನ್ನ.
ಒಟ್ಟು ಆಸ್ತಿ ಮೌಲ್ಯ- 2.84 ಕೋಟಿ ರೂ.
ಚರಾಸ್ತಿ ಒಟ್ಟು – ಬ್ರಹ್ಮಿಣಿ- 26.84 ಕೋಟಿ ರೂ., ಪತಿ- 80.90 ಲಕ್ಷ ರೂ.,
ಒಟ್ಟು ಸ್ಥಿರಾಸ್ತಿ- ಪತಿ – 3ಕೋಟಿ ರೂ.,
ಇದನ್ನೂ ಓದಿ : Karnataka Elections : ನಿಖಿಲ್ ಕುಮಾರಸ್ವಾಮಿಯ ಎರಡು ಕಾರಿನ ಮೌಲ್ಯವೇ 5 ಕೋಟಿ ರೂ., ಹಾಗಿದ್ದರೆ ಅವರ ಒಟ್ಟು ಆಸ್ತಿ ಎಷ್ಟಿರಬಹುದು?