Site icon Vistara News

Karnataka Elections 2023: ಬಿಜೆಪಿ 2ನೇ ಪಟ್ಟಿ ಬಿಡುಗಡೆ, ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಬದಲು‌ ಗುರುರಾಜ್ ಗಂಟಿಹೊಳೆಗೆ ಟಿಕೆಟ್

Gururaj Gantihole

Gururaj Gantihole

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Elections 2023) ಹಿನ್ನೆಲೆಯಲ್ಲಿ ಬಿಜೆಪಿಯು ಮಂಗಳವಾರ ಬಿಡುಗಡೆ ಮಾಡಿದ ಮೊದಲ ಅಭ್ಯರ್ಥಿಗಳ ಪಟ್ಟಿಯು ರಾಜ್ಯಾದ್ಯಂತ ಸಂಚಲನ ಮೂಡಿಸಿದ ಬೆನ್ನಲ್ಲೇ ಬುಧವಾರ ರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 189 ಮಂದಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಇದರೊಂದಿಗೆ 212 ಜನರಿಗೆ ಬಿಜೆಪಿಯು ಟಿಕೆಟ್‌ ನೀಡಿದಂತಾಗಿದ್ದು, ಮೂರನೇ ಹಂತದಲ್ಲಿ ಬಾಕಿ 12 ಜನರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಎರಡನೇ ಪಟ್ಟಿಯಲ್ಲಿ ಬೈಂದೂರಿನಿಂದ ಸುಕುಮಾರ ಶೆಟ್ಟಿ ಬದಲು ಗುರುರಾಜ್ ಗಂಟಿಹೊಳೆ ಅವರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ, ಮೂಡಿಗೆರೆ ಎಂಪಿ ಕುಮಾರಸ್ವಾಮಿ ಬದಲು ದೀಪಕ್ ದೊಡ್ಡಯ್ಯ ಮತ್ತು ಚನ್ನಗಿರಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಬದಲು ಶಿವಕುಮಾರ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಇನ್ನು ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ನಾಗರಾಜ್‌ ಛಬ್ಬಿ ಅವರಿಗೂ ಬಿಜೆಪಿ ಟಿಕೆಟ್‌ ನೀಡಿದೆ. ಆದಾಗ್ಯೂ, ಕೆ.ಎಸ್‌.ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಅವರ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಿಸಿಲ್ಲ.

ಇಲ್ಲಿದೆ ಅಭ್ಯರ್ಥಿಗಳ ಪಟ್ಟಿ

  1. ದೇವರ ಹಿಪ್ಪರಗಿ – ಸೋಮನಗೌಡ ಪಾಟೀಲ್
  2. ಬಸವನ ಬಾಗೇವಾಡಿ – ಎಸ್‌.ಕೆ.ಬೆಳ್ಳುಬ್ಬಿ
  3. ಇಂಡಿ – ಕಾಸಗೌಡ ಬಿರಾದಾರ್
  4. ಗುರುಮಿಠಕಲ್‌ – ಲಲಿತಾ ಅಣ್ಣಾಪುರ್‌
  5. ಬೀದರ್‌ – ಈಶ್ವರ್ ಸಿಂಗ್‌ ಠಾಕೂರ್
  6. ಭಾಲ್ಕಿ – ಪ್ರಕಾಶ್‌ ಖಂಡ್ರೆ
  7. ಗಂಗಾವತಿ- ಪರಣ್ಣ ಮುನವಳ್ಳಿ
  8. ಕಲಘಟಗಿ – ನಾಗರಾಜ್‌ ಛಬ್ಬಿ
  9. ಹಾನಗಲ್‌ – ಶಿವರಾಜ್‌ ಸಜ್ಜನರ್‌
  10. ಹಾವೇರಿ – ಗವಿಸಿದ್ದಪ್ಪ ದ್ಯಾಮಣ್ಣನವರ್
  11. ಹರಪನಹಳ್ಳಿ – ಕರುಣಾಕರ ರೆಡ್ಡಿ
  12. ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ್‌
  13. ದಾವಣಗೆರೆ ದಕ್ಷಿಣ – ಅಜಯ್‌ ಕುಮಾರ್‌
  14. ಮಾಯಕೊಂಡ – ಬಸವರಾಜ್‌ ನಾಯಕ್‌
  15. ಚನ್ನಗಿರಿ – ಶಿವಕುಮಾರ್‌
  16. ಬೈಂದೂರ್‌ – ಗುರುರಾಜ್ ಗಂಟಿಹೊಳಿ
  17. ಮೂಡಿಗೆರೆ – ದೀಪಕ್‌ ದೊಡ್ಡಯ್ಯ
  18. ಗುಬ್ಬಿ – ಎಸ್‌.ಡಿ. ದಿಲೀಪ್‌ ಕುಮಾರ್‌
  19. ಶಿಡ್ಲಘಟ್ಟ – ರಾಮಚಂದ್ರ ಗೌಡ
  20. ಕೆ.ಜಿ.ಎಫ್‌ -ಅಶ್ವಿನಿ ಸಂಪಂಗಿ
  21. ಶ್ರವಣಬೆಳಗೊಳ- ಚಿದಾನಂದ
  22. ಅರಸೀಕೆರೆ – ಜಿ.ವಿ.ಬಸವರಾಜು
  23. ಹೆಗ್ಗಡದೇವನಕೋಟೆ – ಕೃಷ್ಣ ನಾಯಕ್

2ನೇ ಪಟ್ಟಿಯಲ್ಲಿ 7 ಶಾಸಕರಿಗೆ ಟಿಕೆಟ್‌ ಮಿಸ್‌

ಕರ್ನಾಟಕದಲ್ಲೂ ಬಿಜೆಪಿಯು ಗುಜರಾತ್‌ ಮಾಡೆಲ್‌ ಟಿಕೆಟ್‌ ಘೋಷಣೆ ಮಾಡಿದ್ದು, ಎರಡನೇ ಪಟ್ಟಿಯಲ್ಲಿ ಹಾಲಿ ಏಳು ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಮೊದಲ ಪಟ್ಟಿಯಲ್ಲಿ ಎಂಟು ಶಾಸಕರಿಗೆ ಟಿಕೆಟ್‌ ನೀಡಿರಲಿಲ್ಲ. ಅಲ್ಲಿಗೆ, ಇದುವರೆಗೆ ಒಟ್ಟು 15 ಶಾಸಕರಿಗೆ ಬಿಜೆಪಿಯು ಟಿಕೆಟ್‌ ಮಿಸ್‌ ಮಾಡಿದೆ. ಆರೋಪ ಹೊತ್ತಿರುವವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದು, ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ನೀಡದಿರುವುದೇ ಇದಕ್ಕೆ ನಿದರ್ಶನವಾಗಿದೆ.

ಟಿಕೆಟ್‌ ಘೋಷಣೆಯಾಗದ 12 ಕ್ಷೇತ್ರಗಳು ಹಾಗೂ ಹಾಲಿ ಶಾಸಕರು

  1. ನಾಗಠಾಣ – ಶಾಸಕ ದೇವೇಂದ್ರ ಚೌಹಾಣ್‌-ಜೆಡಿಎಸ್
  2. ಸೇಡಂ – ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ – ಬಿಜೆಪಿ
  3. ಮಾನ್ವಿ – ರಾಜಾ ವೆಂಕಟಪ್ಪ ನಾಯಕ್- ಜೆಡಿಎಸ್
  4. ಕೊಪ್ಪಳ- ರಾಘವೇಂದ್ರ ಬಸವರಾಜ್ ಹಿಟ್ನಾಳ್ – ಕಾಂಗ್ರೆಸ್
  5. ರೋಣ – ಕಳಕಪ್ಪ ಬಂಡಿ -ಬಿಜೆಪಿ
  6. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್- ಬಿಜೆಪಿ
  7. ಹಗರಿಬೊಮ್ಮನಹಳ್ಳಿ- ಕಾಂಗ್ರೆಸ್ ಭೀಮಾನಾಯಕ್
  8. ಶಿವಮೊಗ್ಗ ನಗರ – ಈಶ್ವರಪ್ಪ – ಬಿಜೆಪಿ
  9. ಹೆಬ್ಬಾಳ – ಕಾಂಗ್ರೆಸ್
  10. ಗೋವಿಂದ ರಾಜನಗರ – ಸೋಮಣ್ಣ-ಬಿಜೆಪಿ
  11. ಕೃಷ್ಣ ರಾಜ – ಸಾ ರಾ‌ ಮಹೇಶ್- ಜೆಡಿಎಸ್
  12. ಮಹದೇವಪುರ – ಅರವಿಂದ್ ಲಿಂಬಾವಳಿ – ಬಿಜೆಪಿ

ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಬ್ಯಾಡಗಿಯಲ್ಲಿ ಗ್ರೇಡ್‌ 2 ತಹಸೀಲ್ದಾರ್‌ ಆಗಿರುವ ಗವಿಸಿದ್ದಪ್ಪ ದ್ಯಾಮಣ್ಣನವರ್‌ಗೆ ಟಿಕೆಟ್‌ ನೀಡಲಾಗಿದೆ. ಆರ್‌ಎಸ್‌ಎಸ್‌ ಹಿನ್ನೆಲೆ ಹೊಂದಿರುವ ಗವಿಸಿದ್ದಪ್ಪ ಅವರಿಗೆ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಒಲಿದಿದೆ. ಕೆಜಿಎಫ್‌ನಲ್ಲಿ ವೈ.ಸಂಪಂಗಿ ಅವರ ಪತ್ನಿ ಅಶ್ವಿನಿ ಸಂಪಂಗಿ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಅರಸೀಕೆರೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಮಾಜಿ ಪಿಎ ಸಂತೋಷ್‌ ಅವರಿಗೆ ಟಿಕೆಟ್‌ ಮಿಸ್‌ ಆಗಿದೆ.

ಭಾಲ್ಕಿಯಲ್ಲಿ ಸಹೋದರರ ಸವಾಲ್‌

ಬೀದರ್‌ ಜಿಲ್ಲೆಯ ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಸಹೋದರರ ಸವಾಲ್‌ ಇದೆ. ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ವಿರುದ್ಧ ಅವರ ಸಹೋದರ ಪ್ರಕಾಶ್‌ ಖಂಡ್ರೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇನ್ನು ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರ ಅಳಿಯ ರಾಮಚಂದ್ರ ಗೌಡ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಇವರು ಉದ್ಯಮಿಯಾಗಿದ್ದು, ಜಿಟಿಡಿ ಪುತ್ರಿಯನ್ನು ವಿವಾಹವಾಗಿದ್ದಾರೆ.

ಇದನ್ನೂ ಓದಿ: BJP Karnataka: ಚಾಮರಾಜಪೇಟೆಯಲ್ಲಿ ಸ್ಪರ್ಧೆಗೆ ಬಿ ಫಾರಂ ಪಡೆದ ಭಾಸ್ಕರ ರಾವ್‌: ಸೈಲೆಂಟ್ ಸುನೀಲ್‌ ಬೆಂಬಲಿಗರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

Exit mobile version